ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಕೂಗಿದರು. ಸುಮತಿಯು ಅಳುವುದನ್ನು ಬಿಟ್ಟು ಚೇತರಿಸಿಕೊಂಡು ಮೇಲಕ್ಕೆ ಎದ್ದು - ನನ್ನ ಮೇಲೆ ಯಾರು ಬರುತೀರಿ, ಬನ್ನಿ, ಎಂದು ಹೇಳುತಾ ಒಬ್ಬೊಬ್ಬರನ್ನಾಗಿ ಹಿಡಿದು, ಕುಕ್ಕಿ, ಉರುಳಿಸುತ್ತಾ ಬಂದನು. ಅತಿಮೂರ್ಖನಾದ ಮಂಗರಾಜಮಾತ್ರ ಇವನ ಮೇಲೆ ಹೋರಾಟಕ್ಕೆ ನಿಂತುಕೊಂಡನು. ಕೊನೆಗೆ ಸುಮತಿಯ ಕೈ ಬಲವಾಗಿ ಮಂಗನಿಗೆ ಪೆಟ್ಟು ಜೋರಾಯಿತು. ಮಂಗರಸನು ಮೇಲಕ್ಕೆ ಏಳಲು ಕೈಲಾಗದೆ ಕೆಳಕ್ಕೆ ಬಿದ್ದು ಬಿಟ್ಟ ನು, ಇದುವರೆಗೂ ಸುಮತಿಯನ್ನು ಹಾಸ್ಯ ಮಾಡುತಿದ್ದ ಹುಡುಗರೆಲ್ಲರೂ ಅವ ಜೈ ಸಿದ್ದನ್ನು ಕಂಡು-ಭಲಾ ! ಭಲರೇ ಸುಮತಿ ! ಎಲ್ಲರನ್ನೂ ಗೆದ್ದ ! ಎಂದು ಅವನ ಬೆನ್ನ ತಟ್ಟಿ ಕೊಂಡಾಡುವುದಕ್ಕೆ ಪ್ರಾರಂಭಿಸಿದರು, ಆದರೆ ಸುಮತಿಯು ಈ ಸ್ತೋತ್ರಕ್ಕೆ ಉಬ್ಬದೆ, ಮಂಗನ ಸವಿಾಪಕ್ಕೆ ಹೋಗಿ ಅವನ ಕೈ ಹಿಡಿದು, ಎಬ್ಬಿಸಿ-ಅಯ್ಯಾ, ಏಳು, ನಿನಗೆ ಪೆಟ್ಟು ಬಲವಾಗಿ ಬಿತ್ತು, ನೀನಾಗಿ ಬಂದ ಕಾರಣ ನಾನು ಜಗಳಕ್ಕೆ ನಿಂತೆ, ಎಂದು ಹೇಳಿದನು. ತರುವಾಯ, ಹುಡುಗರೆಲ್ಲರೂ ಸೇರಿ ಗೂಳಿಕಾಳಗದ ಸ್ಥಳಕ್ಕೆ ಹೋದರು. ಹೋಗಬೇಡಿ, ಎಂದು ಸುಮತಿ ಎಷ್ಟು ಹೇಳಿದರೂ ಕೇಳಲಿಲ್ಲ, ಕೇಳದೇ ಇದ್ದ ಕಾರಣ ಅವರ ಸಂಗಡ ತಾನೂ ಹೊರಟನು. ಮದನನ ಕ್ಷೇಮವನ್ನೆ ನೋಡ ಬೇಕೆಂಬ ಕುತೂಹಲವು ಹೆಚ್ಚಾಗಿದ್ದ ಕಾರಣ, ಸುಮತಿಗೆ ಇದಕ್ಕೆ ಪೂತ್ವದಲ್ಲಿ ಬಿದ್ದ ಏಟಿನ ಯಾತನೆಯೂ, ಆದ ಅವಮಾನವೂ, ಲೇಶವೂ ತೋರಲಿಲ್ಲ. ಗೂಳಿಕಾಳಗಕ್ಕೆ ಮೊದಲಾಯಿತು. ಈ ಮಧ್ಯೆ ಒಬ್ಬ ಸಿದ್ದಿ ಯವನು ಅಲ್ಲಿಗೆ ಬಂದು, ಈ ದೊರೆ ಮಕ್ಕಳ ಹತ್ತಿರ ಭಿಕ್ಷ ಕೇಳುವುದಕ್ಕೆ ಮೊದಲು ಮಾಡಿದನು. ಅವ ನಿಜವಾಗಿ ದರಿದ್ರನೆಂದು ತಿಳಿದಿದ್ದಾಗ್ಯೂ, ಅವನ ಮುಖದ ಕಪ್ಪನ್ನೂ ಅವನ ತಲೆಕೂದಲನ್ನೂ ನೋಡಿ ಹಾಸ್ಯ ಮಾಡಿಕೊಂಡು ನಗುವುದರಲ್ಲಿ ಈ ದೊರೆಮಕ್ಕಳು ಚತುರರಾದರೇ ಹೊರತು, ದೀನನಾದವನಿಗೆ ಸಹಾಯ ಮಾಡಬೇಕೆಂಬ ಬುದ್ದಿ ಯನ್ನು ಇವರು ತೋರಿಸಲೇ ಇಲ್ಲ. ಇದನ್ನು ಕಂಡು ಸುಮತಿಯು ಅವನಲ್ಲಿ ನಿಜವಾದ ದಯಾರಸದಿಂದ ತನ್ನ ಹತ್ತಿ ರಿದ್ದ ಒಂದೇ ಒಂದು ಹಣವನ್ನು ತೆಗೆದು ಅವನಿಗೆ ಕೊಟ್ಟು-ಅಪ್ಪಾ