ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನ ಕುಮಾರರ ಚರಿತ್ರ ೧೧ ಕಂದನಿಗೆ ಊಟಮಾಡಿಸುತ್ತಾ, ಅತ್ಯಂತ ವಾತ್ಸಲ್ಯದಿಂದ ಮುದ್ದಾಡುತ್ತಾ, ಅದು ಆಡುವ ತೊದಲು ಮಾತುಗಳನ್ನು ಅದರ ಸಂಗಡ ತಾನೂ ಅನು ಸರಿಸಿ ಆಡುತಾ, ಎಷ್ಟೆಷ್ಟೋ ಬಗೆಯಲ್ಲಿ ಲಾಲನೆ ಮಾಡಿದ್ದಲ್ಲದೆ, ಸುಮ ತಿಯನ್ನೂ ತನ್ನ ಹತ್ತಿರದಲ್ಲೇ ಎಡೆ ಮಾಡಿ ಕೂರಿಸಿಕೊಂಡು ಬೇಕಾದ ಹಣ್ಣು ಹಂಪಲನ್ನೂ ಹಾಲುಖೋವೆ ಮೊದಲಾದ್ದನ್ನೂ ವಿಚಿತ್ರವಾದ ಮಿಠಾಯಿಗಳನ್ನೂ ಅವನಿಗೆ ಕೊಡುತ ಬಂದಳು. ಆದರೆ ಅಲ್ಲಿದ್ದ ಪದಾರ್ಥಗಳೆಲ್ಲಾ ಸುಮತಿಗೆ ಸಾಧಾರಣವಾಗಿಯೇ ಕಾಣಿಸಿದವು. ಯಾತರಿಂದಲೂ ಸಂತೋಷ ಹುಟ್ಟಲಿಲ್ಲ. ಅರಸಿತ್ತಿಗೆ ಇದರಿಂದ ಅಸ ಮಾಧಾನವಾಯಿತು. ಆ ಅಸಮಾಧಾನವನ್ನು ಮರೆಮಾಚುವುದಕ್ಕೆ ಆಗಲಿಲ್ಲ. ತಾನು ಎಷ್ಟು ಒಡವೆಗಳನ್ನು ಹೇರಿಕೊಂಡರೆ ಎಂಥಾ ಸೀರೆ. ಯನ್ನು ಟ್ಟು ಇನ್ನೆ೦ಥಾ ಕುಪ್ಪುಸವನ್ನು ತೊಟ್ಟು ಕೊಂಡರೆ ತನಗೆ ಹೇಗೆ ತೃಪ್ತಿ ಯೋ ಹಾಗೆಯೇ ಎಲ್ಲರಿಗೂ ಆಗುವುದೆಂದು ಆ ಪ್ರಾಣಿಯು ತಿಳಿ ದುಕೊಂಡಿದ್ದಳು. ತನ್ನ ಮಗನು ನೀನೆ ಹಾಕಿಕೊಂಡು ತಿನ್ನು ತಿದ್ದ ಬೆಳ್ಳಿ ಬಟ್ಟಲನ್ನು ಸುಮತಿಯು ದೃಷ್ಟಿಸಿ ನೋಡಲು, ಅರಸಿಯು ಕಂಡು “ ಬಟ್ಟಲು ಎಷ್ಟು ಚೆನ್ನಾಗಿದೆ, ನೋಡು, ಇದು ನಿನಗೆ ಬೇಕೆ ತೀನಿ ಹಾಕಿಕೊಂಡು ತಿನ್ನು ವುದಕ್ಕೆ ? ” ಎನ್ನು ತ್ಯಾ, “ ಇದು ನನ್ನ ಪುಟ್ಟು ಸಾಮಾ ಬಟ್ಟಲು, ನಿನಗೆ ಬೇಕಾದರೆ ಕೊಡುತಾನೆ ” ಎಂದು ಹೇಳಿದಳು, ಆಗ ಮದನ ಕುಮಾರನು ಈ ಮಾತನ್ನು ಕೇಳಿ - ( ಅಮ್ಮ, ಹಾಗೇ ಆಗಲಿ; ಈ ಬಟ್ಟಲನ್ನು ನಾನು ಆ ಹುಡುಗನಿಗೆ ಕೊಡುತೇನೆ. ನನಗೆ ಇದಕ್ಕಿಂತಲೂ ಚೆನ್ನಾಗಿರತಕ್ಕೆ ಚಿನ್ನದ ಬಟ್ಟ ಲಿದೆ; ಇದಲ್ಲದೆ ಇನ್ನೂ ಎರಡು ದೊಡ್ಡ ಬೆಳ್ಳಿ ಬಟ್ಟಲುಗಳಿವೆ; ಹವುದೋ ಅಲ್ಲವೋ ಅಮ್ಮ ? " ಎಂದನು. ಕೂಡಲೆ ಸುಮತಿಯು. ಬಹಳವಾಗಿ ಸಂತೋಷವಾಯಿತೈ; ನಿನ್ನ ಬಟ್ಟಲು ನಿನ್ನಲ್ಲಿಯೇ ಇರಲಿ; ನಾನು ನಿನ್ನಿಂದ ಅದನ್ನು ಕಿತ್ತು ಕೊಳ್ಳಲಾರೆ; ನಮ್ಮ ಮನೆಯಲ್ಲಿ ಇದೆಲ್ಲ ಕ್ಕಿಂತಲೂ ಉತ್ತಮವಾದ ಬಟ್ಟಲಿದೆ, ಎಂದನು. ಆಗ ಅರಸಿಯು-ಏನು, ನಿಮ್ಮ ತಂದೆ ಬೆಳ್ಳಿ ಬಟ್ಟಲಲ್ಲಿ ಸದಾ ರ್ಥವನ್ನು ಇಟ್ಟು ಕೊಳ್ಳು ತಾನೆಯೋ ?