ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ܘܦ. ಸು ಮತಿ ಮದನಕುಮಾರರ ಚರಿತ್ರೆ ೨೩೧ ವನ್ನು ಬಿಟ್ಟು ಇನ್ನೊಂದು ಮಾರ್ಗಕ್ಕೆ ಬರಬೇಕಾದರೆ, ಸ್ವಲ್ಪ ದಿವಸದ ಸಾಧನೆ ಅಗತ್ಯವಲ್ಲವೆ ? ಇಷ್ಟಕ್ಕೆ, ನಿರಾಶೆಯಾಯಿತಲ್ಲಾ, ಎಂದು ನೀವು ಯಾಕೆ ವ್ಯಥೆಪಟಳಬೇಕು ? ದೊರೆ - ಜೋಯಿಸರೆ, ತಮ್ಮ ಉದಾರವಾದ ಸ್ವಭಾವಕ್ಕೆ ಅನು ಗುಣವಾದ ಮಾತನ್ನೇ ಆಡುತೀರಿ, ತಮ್ಮ ಮಾತಿನಿಂದ ಉಂಟಾಗುವ .ಆಸೆಯು ತಂದೆಯಾದ ನನಗೆ ಆಪ್ಯಾಯಮಾನವಾಗಿಯೇ ಇದೆ. ಆದಾಗ್ಯೂ ತಟ್ಟನೆ ಒಳ್ಳೇಮಾರ್ಗವನ್ನೆಲ್ಲಾ ಬಿಟ್ಟು ಕೆಟ್ಟ ಮಾರ್ಗಕ್ಕೆ ತಿರುಗಿ ತಮ್ಮಲ್ಲಿ ಇದ್ದಾಗ ಕಲಿತುಕೊಂಡು ವಿವೇಕವನ್ನೆಲ್ಲಾ ಒಟ್ಟಿಗೆ ಮರೆತು ಬಿಟ್ಟು, ನನ್ನ ಮಗ ಸನ್ಮಾರ್ಗಕ್ಕೆ ಬರುತಾನೆ, ಎಂಬ ಆಸೆ ನನಗೆ ಹೇಗೆ ಹುಟ್ಟಿತು ? ಜೋಯಿಸ-ಹಾಗಲ್ಲ. ಮನುಷ್ಯ ಸ್ವಭಾವದಲ್ಲಿರತಕ್ಕೆ ಮುಖ್ಯ ವಾದ ದೋಷ ಬೇರೆ, ನಿಮ್ಮ ಮಗನಲ್ಲಿ ಇರುವ ಅಸ್ಪೃಶ್ಯ ಬೇರೆ, ಎಂದು ತಿಳಿದಿದ್ದೀರಾ ? ಲೋಕದಲ್ಲಿ ಜನರು ಮಾಡತಕ್ಕೆ ಕೆಟ್ಟ ಕೆಲಸವೆಲ್ಲಾ ಬೇಕೆಂದು ಮಾಡುವುದೆಂತಲೇ ಯೋಚಿಸಕೂಡದು, ಜನಸಾಮಾನ್ಯ ದಲ್ಲಿ ಸ್ಟೈರವಿಲ್ಲದೇ ಇರುವುದೇ ಹೆಚ್ಚಾಗಿದೆಯೇ ಹೊರತು ದುರ್ಗುಣ ಹೆಚ್ಚಾಗಿಲ್ಲ. ದೊರೆ-ತಾವು ಹೇಳುವುದು ಬಹಳ ಯೋಗ್ಯವಾಗಿದೆ. ಇಷ್ಟು ದಿವಸವೂ ಅತಿ ಲಾಲನೆಯಿಂದ ಕೆಟ್ಟು ಹೋದ ಹುಡುಗನಲ್ಲಿ ದೋಷ ಇರುವುದೇನೂ ಹೆಚ್ಚಲ್ಲ, ಆದರೆ ಇಷ್ಟೊಂದು ದುರ್ಮಾರ್ಗಕ್ಕೆ ಅವನು ನಿಷ್ಕಾರಣವಾಗಿ ಪ್ರವೇಶಿಸಿದ್ದನ್ನು ನೋಡುವಲ್ಲಿ ಅವನ ಒಳ್ಳೆ ಸ್ವಭಾವ ದಲ್ಲೇ ಕುಂದಕವಿದೆಯೆಂದು ನಾನು ತಿಳಿಯುತ್ತೇನೆ. ಜೋಯಿಸ ಅಂಥಾ ಕುಂದಕವೇನೂ ತೋರುವುದಿಲ್ಲ, ಇಲ್ಲಿಗೆ ಅವ ಬಂದಮೇಲೆ ಅವನ ಜೊತೆ ಯಲ್ಲಿ ತಿರುಗಾಡತಕ್ಕ ಹುಡುಗರ. ಸ್ವಭಾವವೆಂಥಾದ್ದೂ ಅದನ್ನು ಕೊಂಚ ಯೋಚಿಸಬೇಕು, ತಮ್ಮ ಜೊತೆಗಾರರು ಮಾಡತಕ್ಕ ಕೆಲಸವನ್ನು ತಾನೂ ಮಾಡದೇ ಇರತಕ್ಕದ್ದು ವಯಸ್ಸಾದ ಅನುಭವಶಾಲಿಗಳಿಗೇ ಕಷ್ಟವಾಗಿರುವಲ್ಲಿ ನಿಮ್ಮ ಮಗನ ಮಾತೇನು ? ಲೋಕದಲ್ಲಿ ಎಲ್ಲರೂ ಹಿಡಿದಿರುವ ದಾರಿಯನ್ನು ನಾವು