ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಸುಮತಿ ಮದನಕುಮಾರರ ಚರಿತ್ರೆ - [ಅಧ್ಯಾಯ. ಬಿಡುವುದೂ, ಡಂಭವಾಗಿ ಕಾಣಿಸತಕ್ಕ ಕೆಟ್ಟತನವನ್ನು ಬಿಟ್ಟು ಒಳ್ಳೆ ತನವನ್ನು ಅನುಸರಿಸುವುದೂ ಪ್ರಪಂಚದಲ್ಲಿ ಬಹುಶ್ರಮ. ಎಂಥಾ ಒಳ್ಳೆ ಮನುಷ್ಯನಾಗಲೀ ಹೊರಗಡೆ ಡಂಭಕ್ಕೆ ಸೋಲುವನು, ನಿಮ್ಮ ಮಗನಲ್ಲಿ ಕೋಪವೂ, ದುಡುಕೂ, ವಿಶೇಷವಾಗಿದೆ ಎನ್ನು ತೀರಿ, ಅದೇನೋ ಸರಿ, ಆದರೆ ಅದನ್ನೇ ಒಳ್ಳೇದಾರಿಗೆ ತಿರುಗಿಸಲಾಗಿ ಒಳ್ಳೆ ಪ್ರಯೋಜನ ಉಂಟಾಗುವುದು, ದುರ್ಮಾರ್ಗಕ್ಕೆ ಎಳೆಯುವ ಗುಣ ವನ್ನು ಸರಿಮಾಡಿಕೊಂಡರೆ, ಅದೇ ಸನ್ಮಾರ್ಗಕ್ಕೆ ಎಳೆಯುವ ಗುಣ ವಾಗುವುದು, ಪೋಲಕ, ಖುಷಿ ಒಂದಾನೊಂದು ಪಟ್ಟಣದಲ್ಲಿ ಪೋಲಕನೆಂಬ ಒಬ್ಬ ಹುಡುಗ ನಿದ್ದನು. ಬಾಲ್ಯದಿಂದಲೂ ಶಿಕ್ಷೆ ಇಲ್ಲದೆ ಇವನು ಪೋಲಿಯಾಗಿ ತಿರುಗುತಾ, ಕನ್ನಾ ಹಾಕುವುದು, ದಾರೀಕಟ್ಟ ತಲೆವೊಡೆಯುವುದು, ಸಿಕ್ಕಿದವರ ಮನೆಗೂ ಹುಲ್ಲುಮೆದೆಗಳಿಗೂ ಬೆಂಕಿ ಹಾಕುವುದು, ಹೀಗೆಲ್ಲಾ ಮಾಡುತಾ, ಆ ವೂರಿಗೆ ದೊಡ್ಡ ಹೆಮ್ಮಾರಿಯಾಗಿದ್ದನು, ಸರಕಾರದವರು ಇವನನ್ನು ಆಗಾಗ್ಗೆ ಹಿಡಿದು ಶಿಕ್ಷೆ ಮಾಡುತಲೇ ಇದ್ದರು. ಇವನು ಸ್ವಲ್ಪ ಕಾಲದಲ್ಲಿಯೇ ದರಿದ್ರನಾದನು, ನೆಂಟರು ಇಷ್ಟರು ಯಾರೂ ಇವ ನನ್ನು ಹತ್ತಿರ ಸೇರಿಸಲಿಲ್ಲ, ತಿನ್ನು ವುದಕ್ಕೆ ಗತಿ ಇಲ್ಲದೆ ಹೋಯಿತು. ಕೊನೆಗೆ ಕಾಡಿನಲ್ಲಿ ಯಾರೂ ಕಾಣದಹಾಗೆ ಅವಿತುಕೊಂಡಿರುತಾ, ಸಿಕ್ಕಿ ದವರ ಹತ್ತಿರ ಸಿಕ್ಕಿದ್ದನ್ನು ಸುಲಿದುಕೊಂಡು ಹೊಟ್ಟೆ ಹೊರೆಯು ತಿದ್ದನು. ಒ೦ದುದಿನ ಪೋಲಕನು ಅರಣ್ಯದಲ್ಲಿ ಹೋಗುತಿರುವಾಗ್ಗೆ ಒಂದು ಹಾಳುಗುಡಿ ಸಿಕ್ಕಿತು, ಅಲ್ಲಿರುವ ದೇವರನ್ನು ಕಿತ್ತು ಹಾಕಿ ದರೆ ಅದರ ಕೆಳಗೆ ಏನಾದರೂ ನಿಕ್ಷೇಪ ಸಿಕ್ಕ ಬಹುದೆಂದು, ಆ ದೇವಾ ಲಯದೊಳಕ್ಕೆ ಹೊಕ್ಕನು, ಗರ್ಭಗೃಹದವರೆಗೂ ಹೋಗುವಾಗ, ಒಳಗೆ ಒಬ್ಬ ಋಷಿಯು ತಪಸ್ಸು ಮಾಡುತ್ತಾ ಕೂತಿದ್ದನು. ಆಗ ಪೋಲಕನು ತನ್ನ ಮನಸ್ಸಿನಲ್ಲಿ-ಇಲ್ಲಿ ಯಾವನೋ ಕೂತಿದಾನೆ ; ಇವನಿಗೆ ಒಂದು ಒದೆತವನ್ನು ಕೊಟ್ಟು ಉರುಳಿಸಿ ಇದ್ದದನ್ನು ಕಿತ್ತು ಕೊಂಡು ಹೋಗೋಣ, ಎಂದು ಯೋಚಿಸಿ, ಆ ಮುನಿಯ ಜಟೆಯನ್ನು