ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ “ ತಾಯಿ, ಇದಕ್ಕೆ ನೀವೇನು ಹೆಸರಿಟ್ಟಿದೀರೋ ನಾನು ಕಾಣೆ; ಆದರೆ ನಮ್ಮ ಮನೆಯಲ್ಲಿ ನಾವು ಹುಡುಗರು ತಿಂಡಿ ಹಾಕಿಕೊಂಡು ತಿನ್ನ ತಕ್ಕದ್ದು ಬಳ ಸದ್ದು: ಹುಡುಗರು ಹಲಗೇಮೇಲೆ ಬರೆಯುತ್ತಾರಲ್ಲಾ, ಅ೦ಥಾದ್ದರಲ್ಲಿ ಮಾಡಿದ್ದು.” ಹೀಗೆಂದು ಹೇಳಿದ ಸುಮತಿಯ ಮಾತನ್ನು ಕೇಳಿ, ರಾಜ ಪತ್ನಿ ಯು “ ಪಾಪ! ಮಗು ಏನೂ ಅರಿತದ್ದಲ್ಲ. ಅದು ಸರಿಯಪ್ಪ, `ಇವೆಲ್ಲಕ್ಕಿಂತಲೂ ನಿಮ್ಮ ಮನೆಯಲ್ಲಿರುವ ಬಟ್ಟಲು ಹೇಗೆ ಉತ್ತಮ ವಾದ್ದು ? ) ಸುಮತಿ-ತಾಯಿ, ಹೇಗೆಂದರೆ, ಅದರಲ್ಲಿ ಯಾವ ತಿಂಡೀ ಸಾಮಾನನ್ನು ಎಷ್ಟು ಹೊತ್ತು ಹಾಕಿಕೊಂಡು ತಿಂದರೂ, ನಮಗೆ ಅಸ ಹ್ಯವಾಗಿ ವಾಂತಿ ಬರುವ ಹಾಗೆ ಆಗುವುದಿಲ್ಲ. - ಅರಸಿ - ಅಸಹ್ಯವಾಗುವುದು, ವಾಂತಿಯಾಗುವುದು ಎಂದರೇ ನಪ್ಪ, ಹಸುಳೆ ? ಹಾಗೆಂದರೇನು ? - ಸುಮತಿ-ನೋಡಿ ತಾಯಿ), ಅಕೋ ಆ ಆಳು ಒಂದು ಬಟ್ಟ ಲನ್ನು ಕೈ ಮರೆತು ಅಲ್ಲಿ ಬಿಟ್ಟು ಹೋದ್ದಕ್ಕೆ ತಮಗೆ ಎಷ್ಟೋ ಸಂಕಟ ಉಂಟಾಯಿತು. ಯೋಚನೆಯಿಂದ ಜ್ಞಾನತಪ್ಪಿ ಎಲ್ಲಿ ಬಿದ್ದು ಬಿಡು ತೀರೋ ಎಂದು ನನಗೆ ಭಯವಾಯಿತು. ನಮ್ಮ ಮನೆಯಲ್ಲಿರುವ ಬಟ್ಟಲು ಎಲ್ಲಿದ್ದರೂ ಏನೂ ತೊಂದರೆ ಇಲ್ಲ. ಬೇಕಾದ ಕಡೆ ಬಿಸಾಟ ರುತ್ತೇವೆ. ಕೇಳುವರೇ ಇಲ್ಲ. ಒಬ್ಬರೂ ಲಕವೇ ಮಾಡುವುದಿಲ್ಲ. ಅರಸಿ-ಈ ಗಂಡಿನ ಮಾತಿಗೆ ಏನ ಹೇಳಬೇಕೋ ನಿಜವಾಗಿ ನನಗೆ ತೋರುವುದಿಲ್ಲ; ಏನೇನೋ ಆಡುತ್ತೆ. ಹೀಗೆ ಇರುವಲ್ಲಿ ಕೆಲವರು ಊಟಮಾಡುತ್ತಾ, ಕೆಲವರು ಫಲಾ ಹಾರ ಮಾಡುತ್ತಾ ಕೂತಿರಲು, ಆಗತಾನೆ ಒಬ್ಬ ಪರಿಚಾರಕನು ಊಟದ ತಟ್ಟೆ ಬಟ್ಟಲುಗಳನ್ನು ಎತ್ತಿಕೊಂಡು ಅತ್ತಿತ್ತ ಇರಿಸುವಾಗ್ಗೆ, ಒಂದು ಬಟ್ಟಲು ಕೆಳಕ್ಕೆ ಬಿತ್ತು, ಅದನ್ನು ನೋಡಿ ಅರಸಿಯು ಬಹು ಕೋಪಗೊಂಡು ಪರಿಚಾರಕನನ್ನು ಗದರಿಸಿದಳು, ಇದನ್ನು ಕಂಡೇ ಸುಮತಿಯು ಬಟ್ಟಲ ನೆವದಲ್ಲಿ ಮಾಕರಿಸಿ ಮಾತನಾಡಿದ್ದು,