ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

7ܘܦ - ಸುಮತಿ ಮದನ ಕುಮಾರರ ಚರಿತ್ರೆ ೨48 ಇದನ್ನು ಕೇಳಿ ದೊರೆಗೆ ಸಂತೋಷವಾಯಿತು. ಈ ಕೂಡಲೆ ಅಕ್ಷತೆ ಪ್ರಸ್ತಕ್ಕಾಗಿ ಅರಮನೆಗೆ ಬಂದಿದ್ದ ನಂಟರೆಲ್ಲಾ ತಂತಮ್ಮ ಊರಿಗೆ ಹೊರಟು ಹೋದರು. ಲಲಿತೆಯು ಸ್ವಲ್ಪ ದಿವಸ ಹೆಚ್ಚಾಗಿ ಉಳಿದಳು, ಒಂದು ದಿನ ಭೋಜನವೆಲ್ಲಾ ಆದ ತರುವಾಯ ದೊರೆ, ದೊರೆ ಹೆಂಡತಿ, ರಾಮಜೋಯಿಸ, ಲಲಿತೆ, ಮದನ ಇವರೆ ಲ್ಲರೂ ಓಲಗಶಾಲೆಯಲ್ಲಿ ಸೇರಿದರು, ಜೋಯಿಸರಿಗೆ ಜೂಜಾಡುವುದು ಇಷ್ಟವಿಲ್ಲವಾದಕಾರಣ, ಲಲಿತೆಯು ಒಂದು ಕಥೆಯನ್ನು ಓದಬೇಕೆಂದು ಗೊತ್ತು ಮಾಡಿದರು. ಆ ಪ್ರಕಾರ ಲಲಿತೆಯು ಓದಿದ ಕಥೆ ಹೇಗೆಂದರೆ :- ಮಲ್ಲ ಹೊಲ್ಲರ ಕಥೆ ಒಂದು ಊರಿನಲ್ಲಿ ನೆರೆಮನೆ ಹೊರಮನೆಯಲ್ಲಿ ವಾಸವಾಗಿದ್ದ ಇಬ್ಬರು ಕುರುಬರಿಗೂ ಇಬ್ಬರು ಗಂಡುಮಕ್ಕಳು ಇದ್ದರು, ಇವರಲ್ಲಿ ಒಬ್ಬನ ಹೆಸರು ಮಲ್ಲ; ಮತ್ತೊಬ್ಬನ ಹೆಸರು ಹೊಲ್ಲ. ಈ ಹುಡುಗ ರಿಬ್ಬರೂ ಒಟ್ಟಿಗೆ ತಂತಮ್ಮ ತಂದೆಯ ಕುರಿಗಳನ್ನು ಕಾಯುತ್ತಾ, ಕಾಡಿನಲ್ಲಿ ಸುತ್ತಾಡಿಕೊಂಡು ಇರುತಿದ್ದರು. ಮಲ್ಲನು ದೃಥಾಂಗನಾಗಿಯೂ, ಸೌಮ್ಯವಾದ ಮುಖವುಳ್ಳವ ನಾಗಿಯೂ ಇದ್ದನು. ಹೊಲ್ಲನು ದೇಹದಾರ್ಢದಲ್ಲಿ ಸ್ವಲ್ಪ ಕಡಿಮೆ ಯಾಗಿಯೂ ಎಂಥಾ ಕಷ್ಟ ತರವಾದ ಕಾರ್ಯಕ್ಕೂ ಅನುಕೂಲವಾಗಿರು ವಂತೆ ಲಿವಿಯಾದ ಅಂಗಗಳುಳ್ಳವನಾಗಿಯೂ ಇದ್ದನು. ಮುಖದಲ್ಲಿ ರೌದ್ರವೂ ಅಹಂಕಾರವೂ ಕಾಣುತಿತ್ತು. ಇವರಿಬ್ಬರೂ ಕಾಡಿನಲ್ಲಿ ತಂತಮ್ಮ ಕುರಿಗಳನ್ನು ಕಾಯುತಿರು ವಾಗ, ಹೊಲ್ಲನು ಮಲ್ಲನನ್ನು ನೋಡಿ- ಮಲ್ಲ, ನೋಡು, ಆ ಹದ್ದು ಎಷ್ಟು ಮೇಲಕ್ಕೆ ಹಾರಿ ಹೋಗಿದೆ ; ಅದಕ್ಕೆ ಇರುವಂತೆ ನನಗೂ ರೆಕ್ಕೆ ಇದ್ದರೆ, ನಾನೂ ಮೇಲಕ್ಕೆ ಹಾರಿ ಹೋಗುತಿದ್ದೆ. - ಮಲ್ಲ- ದುಷ್ಟ ತನದಲ್ಲಿಯೂ ಕೆಟ್ಟ ತನದಲ್ಲಿಯೂ ಹದ್ದು ಎತ್ತಿದ ಕೈ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆಲ್ಲಾ ಇದು ಶತ್ರುವಾಗಿದೆ ಈ ಹದ್ದಿನ ಹಾಗೆ ಇರುವುದಕ್ಕಿಂತಲೂ, ಅಗೋ ಆ ನದೀತೀರದಲ್ಲಿ ಹಾರಾಡುವ ಹಂಸದ ಹಾಗೆ ಇದ್ದರೆ ಚೆನ್ನಾಗಿ ಇದ್ದೀತು, ಹಂಸವು - *