ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦] ಸುಮತಿ ಮದನ ಕುಮಾರರ ಚರಿತ್ರೆ ೨೩೭ ಹಿಂಸೆಯನ್ನುಂಟುಮಾಡುವುದು ಸರಿಯಲ್ಲವೆಂದು ಯಾರು ಎಷ್ಟು ಹೇಳಿದಾಗ್ಯೂ ಹೊಲ್ಲನು ಅಂಥವರ ಮೇಲೆ ಬಿದ್ದು ಅವರನ್ನು ಹೊಡೆ ಯುವುದಕ್ಕೆ ಹೋಗುತಿದ್ದನು. ಹೀಗೆ ಈ ಹೊಲ್ಲನು ಆ ಊರಿನ ಜನಗಳಿಗೆ ಮಾರಿಯಾಗಿದ್ದನು. ಇವನ ತೋಳವು ಹೆಮ್ಮಾರಿಯಾಗಿತ್ತು. ಈ ತೋಳವು ಒಂದು ದಿನ ಮಲ್ಲ ಮೇಯಿಸುತಿದ್ದ ೩ ಆಡು ಗಳನ್ನು ಯಾರೂ ಇಲ್ಲದ ಸಮಯದಲ್ಲಿ ಹೊಡೆದು ಕೊಂದು ಅವು ಗಳನ್ನು ತಿನ್ನು ವುದಕ್ಕೆ ಆರಂಭಿಸಿತು. ಮಲ್ಲನು ಇದನ್ನು ಕಂಡು ಅದನ್ನು ಹಿಡಿದುಕೊಳ್ಳುವುದಕ್ಕೆ ಹೋಗಲು, ಆ ದುಷ್ಟ ಜಂತುವು ಇವನ ಮೇಲೆ ಬಿದ್ದು ಗಾಯವನ್ನು ಮಾಡಿತು, ಆಗ ನಲ್ಲನು ಅದನ್ನು ಲಕ್ಷ ಮಾಡದೆ ತೋಳನನ್ನು ಹಿಡಿದು ಅದರ ಕತ್ತನ್ನು ಕಿವಿಚಲು ಆರಂಭಿಸಿದನು. ಇವನ ಶಕ್ತಿ ಬಲವಾದ್ದರಿಂದ ಅದರ ತುಂಟತನ ಏನೂ ನಡೆಯದೇ ಹೋಯಿತು, ಕೊನೆಗೆ ತೋಳನು ಸತ್ತು ಕೆಳಕ್ಕೆ ಬಿತ್ತು. - ತನ್ನ ತೋಳನಿಗೆ ಈ ಗತಿ ಬಂದದ್ದನ್ನು ಕಂಡು ಹೊಲ್ಲನು, ಮಹಾ ಕೋಪದಿಂದ ಮಲ್ಲನ ಮೇಲೆ ಬಿದ್ದು ಹೊಡೆಯುವುದಕ್ಕೆ ಹೋದನು. ಮಲ್ಲನು ಬುದ್ದಿ ಹೀನನಾದ ಹೊಲ್ಲನ ಆ ಟೋಪವನ್ನೆಲ್ಲಾ ನೋಡಿ ಆತ್ಮಸಂರಕ್ಷಣಾರ್ಥವಾಗಿ ಅವನನ್ನು ಎದುರಿಸಲು ತಾನು ಅನು ವಾದನು. ಇಬ್ಬರಿಗೂ ದೊಡ್ಡ ದಾಗಿ ಮಲ್ಲಯುದ್ಧ ತೊಡಗಿತು. ಕೊನೆಗೆ ಮಲ್ಲನು ಹೊಲ್ಲನನ್ನು ಕೆಳಕ್ಕೆ ಕೆಡವಿ ಮೇಲೆ ಹತ್ತಿ ಕೂತುಕೊಂಡುಎಲ ಹೊಲ್ಲಾ ! ನೀನು ದುಷ್ಟನಾಗಿದ್ದೀಯೆ ; ಅದಕ್ಕೆ ತಕ್ಕ ಫಲವನ್ನು ಅನುಭವಿಸಿದೆ. ಇನ್ನು ಮೇಲೆ ಒಳ್ಳೇದಾರಿಯಲ್ಲಿ ನಡೆ, ನನ್ನ ಮೇಲೆ ನೀನು ಕೈಮಾಡಿದ್ದರಿಂದ ಇಷ್ಟಕ್ಕೆ ಬಂತು. ಇಲ್ಲದಿದ್ದರೆ ನಿನ್ನ ತ೦ಟೆಗೆ ನಾನು ಬರುತಿರಲಿಲ್ಲ. ಇಂದಿಗೆ ನಿನ್ನನ್ನು ಪ್ರಾಣಸಹಿತ ಬಿಟ್ಟಿದೇನೆ. ಎದ್ದು ಹೋಗು, ಎಂದನು. ಕೂಡಲೆ ಹೊಲ್ಲನು ನಾಚಿ ಕೊಂಡು ಹೊರಟು ಹೋದನು. ' ಇದು ನಡೆದ ಸ್ವಲ್ಪ ದಿವಸಕ್ಕೆ ಮಲ್ಲನು ಕಾಡಿನಲ್ಲಿ ಕುರಿಗಳನ್ನು ಕಾಯುತಿರುವಾಗ ದಂಡಿನ ಜನರು ಊರಿಂದ ಊರಿಗೆ ಹೋಗುತಾ