ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦). ೨೪೩ ೨೦] ಸುಮತಿ ಮದನ ಕುಮಾರರ ಚರಿತ್ರೆ ಯುತಿದೆ. ಈ ನದಿಯಿಂದ ದೇಶವೆಲ್ಲಾ ಪಾವನವಾಗಿದೆ, ಸ್ವಲ್ಪ ವ್ಯವಸಾಯದಿಂದಲೇ ಬೆಳೆ ಒಂದಕ್ಕೆ ಹತ್ತರಷ್ಟಾಗುವುದು. ಇದರಿಂದ ಜನರೆಲ್ಲಾ ಪುಷ್ಟ ರಾಗಿ ಅವರಿಗೆ ಗ್ರಂಥವ್ಯಾಸಂಗಕ್ಕೂ ಕುಶಲ ವಿದ್ಯಾವ್ಯಾಸಂಗಕ್ಕೂ ಬಹಳವಾಗಿ ಅವಕಾಶ ದೊರೆತಿತ್ತು. ರಾಜ್ಯದ ಉನ್ನತ ಸ್ಥಿತಿಗೆ ಯಾವುದು ಕಾರಣವಾಯಿತೋ ಅದೇ ಅದರ ಹೀನದಶೆಗೂ ಕಾರಣವಾಯಿತು. ಹೆಚ್ಚು ರೈಮೆಯಿಂದ ದೊರೆಯುತಿದ್ದ ಆ ದಾಯವು. ಜನರಿಗೆ ಒಂದು ಬಗೆಯ ಜಡತ್ವವನ್ನು ಉಂಟುಮಾಡಿತು, ಈ ಜಡ » ತ್ವವು ದುರ್ಮಾರ್ಗಕ್ಕೆ ಎಳೆಯಿತು. ಮಂದಿಯೆಲ್ಲಾ ಕೆಟ್ಟ ತನದಲ್ಲಿ ಇಳಿಯಾನುಳುಗಿದ್ದರು, ಪರಾಕ್ರಮ ಜನರಲ್ಲಿ ಲವಲೇಶವೂ ಇರಲಿಲ್ಲ. ಮಲ್ಲ-ಕಾಡಿನಲ್ಲಿಯಾದರೂ ಇದ್ದು ಕಾಲವನ್ನು ಕಳೆಯಬಲ್ಲೆ ನೇ। ಹೊರತು ಇಂಥಾ ಹೇಡಿಗಳ ಸೀಮೆಯಲ್ಲಿ ಅರೆಗಳಿಗೆಯೂ ಇರಲಾರೆ. ಚಾರುದತ್ತ-ಅಯ್ಯಾ, ನಿನ್ನ ಮಾತನ್ನು ಮೆಚ್ಚಿದೆ. ನನ್ನ ಅಭಿಮತವೂ ಹಾಗೆಯೇ ಸರಿ. ಅದರಿಂದಲೇ ಆ ದೇಶವನ್ನು ಬಿಟ್ಟು ನಾನು ಹೊರಟು ಹೋದೆ. ಅಲ್ಲಿಂದ ಮಗ್ಗುಲ ದೇಶವಾದ ಅರಬ್ಬಿ ಸ್ಥಾನಕ್ಕೆ ಬಂದೆ. ಅಲ್ಲಿನ ಜನರ ಸ್ವಭಾವವೂ ಬೇರೆ. ಇಲ್ಲಿಗೆ ಬರು. ವಾಗ ದಾರಿಯಲ್ಲಿ ಮರಳ ಕಾಡನ್ನು ದಾಟಿಕೊಂಡು ಬರಬೇಕಾಗಿತ್ತು. ಅದರಿ೦ದ ಒ೦ಟೆಯನ್ನು ಬಾಡಿಗೆಗೆ ತೆಗೆದುಕೊಂಡು ಅದರ ಮೇಲೆ ಕೂತು ಹೊರಟೆ, ನರಳಕಾಡಿನ ಪ್ರಯಾಣಕ್ಕೆ ಒ೦ಟಿಯು ಬಹಳ ಅನುಕೂಲವಾದ್ದು, ಇದು ಎಷ್ಟು ಕಷ್ಟ ವನ್ನಾ ದರೂ ಸಹಿಸುವುದು. ಸಾಧಾರಣವಾದ ಸೊಪ್ಪು ಸಿಕ್ಕಿದಾಗೂ ಅದನ್ನು ತಿಂದು ಹೊಟ್ಟೆಯನ್ನು ತುಂಬಿಕೊಳ್ಳುವುದು, ಮತ್ತು ಆಹಾರ ನೀರು ಏನೂ ಇಲ್ಲದೆ ೯-೧೦ ದಿವಸಗಳಾದಾಗ್ಯೂ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಲೇ ಇರು. ವುದು. ಇಂಥಾ ವಾಹನವನ್ನೇರಿ ಹೊರಟೆ. ಬರುತ ಬರುತಾ ಎತ್ತ ನೋಡಿದರೂ ಮರಳೇ ಕಾಣಿಸುತಿತ್ತು, ಒಂದು ಪ್ರಾಣಿಯ ಸಂಚಾರವೂ. ಇಲ್ಲದೆ ನಾವೇ ನಾವಾಗಿದ್ದೆವು. ಸೂರ್ಯನು ನೆಮೇಲಕ್ಕೆ ಬಂದನು. ಬಿಸಿಲಿನ ವೇಗವನ್ನು ತಡೆಯುವುದಕ್ಕೆ ಆಗಲಿಲ್ಲ. ನನಗೆ ಮೈಲೆಲ್ಲಾ ಉರಿ ಕಾಣಿಸಿತು. ವಿಪರೀತವಾದ ಬಾಯಾರಿಕೆ ಹತ್ತಿತು, ಎಷ್ಟು