ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[೨೧ ಸುಮತಿ ಮದನಕುಮಾರರ ಚರಿತ್ರ ೨೫೧. ಹೊರಟನು. ಅದನ್ನು ವಿಶೇಷವಾಗಿ ಚಮಕಾಯಿಸಲು ಕುದುರೆಯು ಅತಿ ವೇಗವಾಗಿ ಓಡಿ ಹೋಯಿತು. ದಾರಿಯಲ್ಲಿ ಒಂದು ಕಳ್ಳ ಬದಿಯ ಜೋರೆ ಸಿಕ್ಕಿತು, ಕುದುರೆಯು ಕಾಣದೆ ಅದರೊಳಕ್ಕೆ ಕಾಲನ್ನು ಇಡಲು, ಕಾಲು ಹೂತುಕೊಂಡಿತು. ಮೇಲಕ್ಕೆ ಎತ್ತುವುದಕ್ಕೆ ಆಗ ಲಿಲ್ಲ. ಕೂಡಲೆ ದೊರೆಮಗನು ಸ್ವಲ್ಪ ಜಾಗರೂಕನಾಗಿ ಕುದುರೆಯ ಒ೦ದು ಪಕ್ಕಕ್ಕೆ ಸರಿದುಕೊಂಡನು. ಆದರೆ ಇವನ ಮೈಯೆಲ್ಲಾ ಬದಿ ಯಾಯಿತು. ಆಗ ಅರಸುಮಗನು ಕೆಟ್ಟ ಮುಖವನ್ನು ಹಾಕಿಕೊಂಡು ಕಾಲುನಡಗೆಯಲ್ಲಿಯೇ ಮುಂದಕ್ಕೆ ಹೊರಟನು. ದಾರಿಯಲ್ಲಿ ಒಬ್ಬ ಭಿಕ್ಷದವನು ತನ್ನ ೪-೬ ವರುಷದ ೨ ಗಂಡು ಹುಡುಗರನ್ನು ಸಂಗಡ ನಡಸಿಕೊಂಡು ೬ ತಿಂಗಳ ಮಗು ಒ೦ದನ್ನು ಹೆಗಲ ಮೇಲೆ ಮಲಗಿಸಿ ಕೊಂಡು ಬರುತಿದ್ದನು. ತಾನು ಒ೦ದು ಲ೦ಗೋಟಿಯನ್ನು ಹಾಕಿ ದ್ದನು. ಸಂಗಡ ಬರುತಿದ್ದ ಹುಡುಗರಿಬ್ಬರೂ ಬರೀಮೈಲಿದ್ದರು. ಚಿಂದಿ ಚಿಂದಿಯಾದ ಒಂದು ಮೊಳದ ತುಂಡನ್ನು ಮಾತ್ರ ಆ ಕೈಮಗುವಿಗೆ ಹೊದ್ದಿಸಿಕೊಂಡಿದ್ದನು. ಇಂಥಾ ಭಿಕ್ಷದವನು ದೊರೆ ಮಗನ ಮುಂದೆ ನಿಂತು ಸ್ವಾಮಿ, ತಮ್ಮ ಮುಖ ಲಕ್ಷಣವನ್ನು ನೋಡಿದರೆ ಪುಣ್ಯವಂತರ ಹಾಗೆ ಕಾಣುತ್ತೀರಿ, ಮೈಯೆಲ್ಲಾ ವಿಶೇಷ ಕೊಚ್ಚೆಯಾಗಿದೆ. ಇದೇನು ಕಾರಣ ? ಎಂದು ಕೇಳಿ ತನ್ನ ಬಡತನವನ್ನು ತಿಳಿಸಿ, ಮಕ್ಕಳೆಲ್ಲರೂ ಹೊಟ್ಟೆಗೆ ತಿಂದು ೨ ದಿವಸವಾಯಿತು, ಕೈಮಗುವು ಚಳಿ ಜ್ವರ ಬಂದ ನಡುಗುತಿದೆ, ಸ್ವಾಮಿ ತಮ್ಮಿಂದ ಪ್ರಾಣ ಉಳಿಯಬೇಕು, ಎಂದು ಅತ್ಯಂತ ದೈನ್ಯದಿಂದ ಹೇಳಿಕೊಂಡನು. ಇವನ ಮಾತನ್ನೆಲ್ಲಾ ಕೇಳಿ ಇವನ ಸ್ಥಿತಿಯನ್ನು ನೋಡಿ ಮದನನಿಗೆ ಮರುಕ ಹುಟ್ಟಿ ತು. ಕೂಡಲೆ ಉದಾರ ಮನಸ್ಸುಳ್ಳ ರಾಜಕುಮಾರನು ತನ್ನ ಹತ್ತಿರಿದ್ದ ಒಂದು ಹಣವನ್ನು ಅವನಿಗೆ ಕೊಟ್ಟ ನು. ಆಗ ಆ ದರಿದ್ರನು ಮದನನನ್ನು ಹರಸಿ ಮುಂದಕ್ಕೆ ಹೊರಟನು. ಅಷ್ಟರಲ್ಲಿಯೇ ರಾಜಪುತ್ರನು ಮುಂದಕ್ಕೆ ಹತ್ತು ಮಾರು ನಡೆಯಲು ಅಲ್ಲಿ ಒಂದು ಕುರಿಮಂದೆ ಸಿಕ್ಕಿತು, ಅದರಲ್ಲಿದ್ದ ಒಂದು ಆಡನ್ನು ಸೀಳುನಾಯಿಯೊಂದು ಹರಿಸಿ ಕೊಂಡು ಹೋಗಿ ಅದನ್ನು ಗಾಯಮಾಡಿ ಕೊಲ್ಲುವುದಾಗಿತ್ತು. ಇಂಥಾ