ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಬಂದು ತಾವು ತಿನ್ನು ತಿದ್ದರು. ತಮ್ಮ ಪಾಡು ಹೀಗೆ ಅಹನ್ಯ ಹನಿ ಕಾಲಕ್ಷೇಪವಾಗಿದ್ದಾಗ್ಯೂ ಅತಿಥಿಯಾದ ನನ್ನ ಉಪಚಾರದಲ್ಲಿ ಸ್ವಲ್ಪವೂ ಕೊರತೆ ಮಾಡುತಿರಲಿಲ್ಲ. ಅವರಿಗೆ ಉಪಪತ್ತಿಯ ವಿಷಯದಲ್ಲಿ ಬಡತನವೇ ಹೊರತು, ಒಳ್ಳೇತನದಲ್ಲಿ ಬಡತನವಿಲ್ಲ. ಸಿಕ್ಕಿದ ಕಾಡು ಮೃಗಗಳನ್ನೆಲ್ಲಾ ಹೊಡೆದು ತಿನ್ನುವದು ಶುದ್ಧ ವಾದ ಒಳ್ಳೆತನವೆಂದು ನಾನು ಹೇಳಿ ಬರಲಿಲ್ಲ, ಯುದ್ದದಲ್ಲಿ ಹೇಗೆ ಹಿಂಸೆಯ ಪ್ರಾಣಿವಧೆಯೂ ತುಂಬಿರು ವದೋ ಹಾಗೆಯೇ ಬೇಟೆಯಾಡುವದರಲ್ಲಿಯೂ ಇರುವದರಿಂದ, ಬೇಟೆಯೂ ಕಾಡುಮೃಗಗಳ ಮೇಲೆ ಮಾಡುವ ಯುದ್ದ ವೆಂತಲೇ ಹೇಳಬೇಕು, ಇದರಿಂದ ಪಾಪಸಂಘಟನೆಗೇನೂ ಸಂದೇಹವಿಲ್ಲ. ಆದರೆ ಬಡತನವೂ ಅಜ್ಞಾನವೂ ಈ ದೋಷದ ವೇಗವನ್ನು ಸ್ವಲ್ಪ ಕಡಮೆ ಮಾಡುವುದು, ಧರ್ಮಸೂಕ್ಷ್ಮಗಳನ್ನು ತಿಳಿಯದೆ ಬಡತನದಿಂದ ಪೀಡಿತರಾಗಿದ್ದ ಆ ಜನಗಳು ಬೇಟೆಯಾಡುವದು ಕೆಟ್ಟ ದೆಂದು ತಿಳಿದಿರ ಲಿಲ್ಲ, ಅದನ್ನು ಬಿಟ್ಟರೆ ಅವರಿಗೆ ಗತಿಯೂ ಇರಲಿಲ್ಲ. ಆದಾಗ್ಯೂ ಅವರ ಯೋಗ್ಯತೆ ಇದ್ದ ಮಟ್ಟಿಗೆ ಅವರ ನಡತೆಯು ಬಹಳ ಸಮರ್ಪಕ ನಾಗಿತ್ತು. ಈ ಜನಗಳಿಗೂ ಕೆಲವು ಶತ್ರುಗಳಿದ್ದರು. ಅವರಿಗೂ ಇವರಿಗೂ ಆಗಾಗ್ಗೆ ಜಗಳವಿದ್ದೇ ಇತ್ತು. ಈ ಜಗಳದಲ್ಲಿ ನಾನು ಈ ಜನರಿಗೆ ಮಾಡಿದ ಸಹಾಯದಿಂದ ಅವರಿಗೆ ಜಯವುಂಟಾಯಿತು, ಅವರ ಸಂಗಡ ಸೇರಿ ನಾನೂ ಅನೇಕ ಯುದ್ಧ ಗಳನ್ನು ಮಾಡಿದೆ. ಬಹು ಶ್ರಮಪಟ್ಟಿ. ಇದೆಲ್ಲಾ ದರಿಂದಲೂ ವಿವೇಕವೇನೋ ಸ್ವಲ್ಪ ಉಂಟಾ ಯಿತು, ಆದರೆ ಒಂದಕ್ಕೆ ಹತ್ತರಷ್ಟು ನಷ್ಟ ಪಟ್ಟಿ, ಆ ಜನರ ದಯಕ್ಕೆ ನಾನು ಪಾತ್ರನಾಗಿದ್ದೆ ನಾದಕಾರಣ, ನೆವನೆವದಲ್ಲಿ ನನಗೆ ಬೇಕಾದ ಇನಾಮುಗಳನ್ನು ಅವರು ಕೊಟ್ಟರು. ಆ ಸೀಮೆಯಲ್ಲಿ ಚಿನ್ನ ವೂ ಬೆಳ್ಳಿಯೂ ವಿಶೇಷವಾಗಿ ಸಿಕ್ಕು ತಿದ್ದವು. ನಾವುಗಳು ಈ ಲೋಹ ಗಳಿಗೆ ಯಾವ ಬೆಲೆ ಇದೆ ಎಂದು ತಿಳಿದುಕೊಂಡಿದ್ದೇವೆಯೊ ಆ ಅರ್ಥದಲ್ಲಿ ಅವರು ತಿಳಿದಿರಲಿಲ್ಲ. ಇತರ ಲೋಹಗಳಂತೆಯೇ ಚಿನ್ನ ಬೆಳ್ಳಿ ಯೂ