ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ೨೨] | ಸುಮತಿ ಮದನಕುಮಾರರ ಚರಿತ್ರೆ ನನ್ನ ಬಡತನವೂ ನನಗೆ ಎಷ್ಟೋ ಹಿತವಾಗಿದೆ, ಎಂದನು. ಆ ಕ್ಷಣದಲ್ಲಿಯೇ ತನ್ನ ನಡತೆಯನ್ನು ಕಂಡು, ಲಲಿತೆಯು ನಾಚಿಕೆ ಯಿಂದಲೂ ಗಾಬರಿಯಿಂದಲೂ ಪೀಡಿತಳಾಗಿದಾಳೆಂದು ಯೋಚಿಸುತ್ತಾ, ಆ ಕಪನಿನಾಯಕನು- ತಾಯಿ ಕೋಪಕೆಲಸವಿಲ್ಲ. ಮೇರೆದಪ್ಪಿ ನಡೆದ ನನ್ನ ನಡತೆಯನ್ನು ಕಮಿಸಬೇಕು, ನನಗೆ ಎರಡನೇ ತಂದೆ ಎಂದು ನಾನು ಭಾವಿಸಿದ್ದ ನಮ್ಮ ಭೀಮರಸರ ವಂಶಕ್ಕೆ ಒಂದು ಕೊನೆ ಇದೆ ಯಲ್ಲಾ ಎಂಬ ಪರಮಾನಂದವು ಪ್ರಜ್ಞೆ ತಪ್ಪಿ ಮಾಡುವಂಥಾ ಕಾರ್ಯ ವನ್ನು ನನ್ನಿಂದ ಮಾಡಿಸಿತು. ಇದು ನನ್ನ ಅಪರಾಧ ;-ಹೀಗೆಂದು ಕ್ಷಮಾಪಣೆಯನ್ನು ಬೇಡಿಕೊಂಡನು. ಜನರ ಸ್ವಭಾವವನ್ನ ರಿತ ಲಲಿ ತೆಯು ಆ ಕ ಪನಿನಾಯಕನು ದೋಷರಹಿತನೆಂದು ತಿಳಿದು ತನ್ನ ದೊಡ್ಡ ಪ್ರನ ಸಂಗತಿಗಳನ್ನು ಸವಿಸ್ತಾರವಾಗಿ ಕೇಳಿ ತಿಳಿದುಕೊಳ್ಳುವ ದಕ್ಕೆ ಒಬ್ಬ ಸಿಕ್ಕಿದನಲ್ಲಾ ಎಂಬ ಸಂತೋಷದಿಂದ ಸುಮ್ಮನಾದಳು. ಆಗ ಹೊತ್ತಾಯಿತು, ಅಲ್ಲಿದ್ದ ಜನರೆಲ್ಲರೂ ಎದ್ದು ಹೊರಟು ಹೋದರು. ಉದ್ದಕ್ಕೂ ಈ ಕಥೆಯನ್ನು ಗಮನವಿಟ್ಟು ಕೇಳುತಿದ್ದ. ಮದನನು ರಾಮಜೋಯಿಸರ ಹಿಂದೆಯೇ ಹೊರಟು ಏನೋ ಒಂದು ವಿಶೇಷ ಸಂಗತಿಯನ್ನು ಮಾತನಾಡಬೇಕೆಂಬ ಇಷ್ಟ ತನಗಿದೆ ಎಂದು ತೋರ್ಪಡಿಸಿಕೊಂಡನು. ಆಗ ರಾಮಜೋಯಿಸನು ಇವನ ಮುಖ ರಸದ ಅಭಿಪ್ರಾಯವನ್ನು ತಿಳಿದು ಮದನನನ್ನು ಕುರಿತು ಅತ್ಯಂತ ಪ್ರೀತಿಯಿಂದ ಅವನ ತಲೆಯನ್ನು ತಡವರಿಸುತಾ-ಮತ್ತೇನೈ, ಏನ ಮಾತನಾಡಬೇಕೆಂದು ಬಂದೆ ? ಎಂದನು. ಮದನ-( ಕಣ್ಣಿನಲ್ಲಿ ನೀರನ್ನು ತಂದುಕೊಂಡು) ಉಪಾಧ್ಯಾ ಯರೆ, ಬಾಯಿಂದ ಹೇಳಲಾರೆ, ನಾನು ಬಹು ಕೆಟ್ಟ ಹುಡುಗನಾದೆ. ನಾನು ಕೃತಘ್ನ, ಪೂರ್ವದಲ್ಲಿ ತಮಗೆ ನನ್ನ ಮೇಲೆ ಇದ್ದ ಪ್ರೀತಿ ಈಗ ಇಲ್ಲವೆಂದು ತೋರುತ್ತೆ. ಜೋಯಿಸ-ನಿನ್ನ ತಪ್ಪು ನಿನಗೆ ತಿಳಿದರೆ, ಬುದ್ಧಿವಂತನಾದ್ದಕ್ಕೆ ಅದು ಒಂದು ಗುರುತು, ನಿನ್ನ ಮನಸ್ಸಿನಲ್ಲಿ ಇರುವದೇನು, ಹೇಳು. ಯಾಕೆ ಪೇಚಾಡು ತೀಯೆ ? 17