ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೧ ೨೨j ಸುಮತಿ ಮದನ ಕುಮಾರರ ಚರಿತ್ರೆ ಕೊಂಡು ಎಲ್ಲರಿಗೂ ಒಳ್ಳೆಯವನಾಗುವುದು ನಿನ್ನ ಕೈಲಿದೆ. ಹಾಗೆ ನೀನು ಮಾಡಿದರೆ, ನಿಮ್ಮ ಅ ಪ್ಪಾಜಿಯವರಿಗೆ ಸಂತೋಷವಾಗುವುದು, ಸುಮತಿಯು ನಿನ್ನ ಅಪರಾಧವನ್ನು ಕ್ಷಮಿಸಿ ಎಂದಿನಂತೆ ನಿನಗೆ ಸಂಗಾತಿಯಾಗಿರುವನು, ಪೂರ್ವದಲ್ಲಿ ನಾನು ತಿಳಿದಿದ್ದ ಹಾಗೆಯೇ ಈಗಲೂ ನೀನು ಸ್ವಲ್ಪ ಮಟ್ಟಿಗೆ ಗುಣಾಢನೆಂದು ನಾನು ತಿಳಿಯುವೆನು. ಮದನ-ನನ್ನ ದುರ್ಗುಣಗಳನ್ನೆಲ್ಲಾ ತಾವು ಕೇಳಿದಮೇಲೆಯೂ ನನ್ನ ವಿಷಯದಲ್ಲಿ ಒಳ್ಳೆ ಅಭಿಪ್ರಾಯವನ್ನು ತಾವು ಇಟ್ಟು ಕೊಂಡಿರ ಬಹುದೆ ? ಜೋಯಿಸ-ನಿನ್ನಲ್ಲಿ ಹೆಮ್ಮೆಯೂ ಅಜಾಗರೂಕತೆಯೂ ಇವೆ. ಆದರೆ ಸ್ವಲ್ಪ ಒಳ್ಳೆತನವೂ ಧಾರಾಳವಾದ ಮನಸೂ ನಿನಗೆ ಉಂಟೆಂದು ತಿಳಿದಿದ್ದೆ, ಮೇಲೆ ಕಂಡ ದುರ್ಗುಣಗಳಿ೦ದ ನಿನ್ನ ದೋಷ ವನ್ನು ನಿನಗೆ ತೋರಿಸಿ ಮೇಲೆ ಕ೦ಡ ಸುಗುಣದ ದೆಸೆಯಿಂದ ನಿನ್ನ ತಪ್ಪನ್ನು ತಿದ್ದಬಹುದೆಂದು ತಿಳಿದಿದ್ದೆ. ಆದಕಾರಣ, ಸುಮತಿಯ ಸಂಗಡ ನೀನು ಜಗಳವಾಡಿದ್ದಕ್ಕಾಗಿ ಬಹಳವಾಗಿ ಪೇಚಾಡುತಿದ್ದ ನಿಮ್ಮ ಸ್ವಾಜಿಯವರ ಸಂಗಡ ನಿನಗೆ ಅನುಕೂಲವಾಗಿಯೇ ಮಾತ ನಾಡಿದೆ. ಅಕಸ್ಮಾತ್ತಾಗಿ ಕೋಪ ಬಂದು ಜಗಳ ಹುಟ್ಟರ ಬಹುದೇ ಹೊರತು, ಸಂದರ್ಭಗಳನ್ನೆಲ್ಲಾ ನಿದಾನವಾಗಿ ಯೋಚಿಸಿದರೆ, ನನಗೆ ಬೇರೆ ಅಭಿಪ್ರಾಯ ಉಂಟಾಗುವುದೆಂತಲೂ : ನಿನ್ನ ದೋಷವು ನಿನಗೇ ತಿಳಿದು ನೀನು ಅದನ್ನು ಒಪ್ಪಿಕೊಳ್ಳು ತಿದ್ದೆ ಎ೦ತಲೂ : ರಾಜರ ಸಂಗಡ ನಾನು ಹೇಳಿದೆ. ನಿನ್ನ ನಡತೆ ಹೀಗೆ ಇದೆ ಎಂದು ತಿಳಿದಿದ್ದರೆ, ನಿನ್ನ ಪರವಾಗಿ ನಾನು ಎಂದಿಗೂ ಮಾತನಾಡುತಿರಲಿಲ್ಲ, ನೀನು ಸುಮತಿಯ ಮೇಕೆಮರಿಯನ್ನು ಬಿಡಿಸಿಕೊಂಡು ಬಂದದ್ದೂ, ಗಟ್ಟದ ಕೆಳಗಿನವನ ಕಥೆಯನ್ನು ಕೇಳಿ ಸರಿತಾ ಪ ಪಟ್ಟಿ ದ್ದೂ ; ಇವುಗಳನ್ನೆಲ್ಲಾ ನೋಡಿ ನಿನ್ನಲ್ಲಿ ಸುಗುಣವಿದೆ ಎಂಬದಾಗಿಯೂ, ಆದಕಾರಣ ನೀನು ದುರ್ವಾರ್ಗವನ್ನೆ ಯಾವಾಗಲೂ ಹಿಡಿಯಲಾರೆ ಎಂಬದಾಗಿಯೂ, ಮಾಡಿದ ಅಪರಾಧವನ್ನು ಒಪ್ಪಿಕೊಳ್ಳುವ ಧಾರಾಳವಾದ ಮನಸ್ಸು, ನಿನ್ನಲ್ಲಿ ಉ೦ಟೆ೦ಬುದಾಗಿಯೂ ನಾನು ಹೇಳಿದೆ, ಇಂಥಾ ಸುಗುಣ