ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಮಾಡುವುದಕ್ಕೆ ಇಷ್ಟವಿಲ್ಲ. ಆದರೆ ನಿಶ್ಚಯವನ್ನು ಹೇಳಬೇಕು. ಅರಮನೆಗೆ ಹೋಗುವುದಕ್ಕೆ ನನಗೆ ಮೊದಲೇ ಇಷ್ಟವಿರಲಿಲ್ಲವೆಂಬ ಸಂಗತಿ ತಮಗೆ ಗೋಚರವೇ ಇತ್ತು. ಧೋರೆಮಕ್ಕಳೂ ರಾಣಿವಾಸ ದವರೂ ನನ್ನ ಬಟ್ಟೆ ಬರೆಯನ್ನೂ ನಡತೆಯನ್ನೂ ನೋಡಿ ಹಾಸ್ಯ ಮಾಡ ಬಹುದೆಂದು ನನಗೆ ಭಯವಿದ್ದೇ ಇತ್ತು. ಮದನ ನನ್ನ ಸಂಗಾತಿ ಯಾಗಿದ್ದಾಗ್ಯೂ ಅವನು ಅವರ ಮನೆಗೆ ಹೋದರೆ ನನ್ನ ಸಂಗ ಮಾಡಿದ ಕ್ಕಾಗಿ ನಾಚಿಕೊಳ್ಳುತ್ತಾನೆಂದು, ನಾನು ತಿಳಿದುಕೊಂಡೇ ಇದ್ದೆ. ಜೋಯಿಸ - ಆಶ್ವರವೇನು ? ಅವರು ದೊಡ್ಡವರು, ನೀವು ಬಡವರು. ಸುಮತಿ-ದೊಡ್ಡವರು ಬಡವರನ್ನು ಕಂಡರೆ ಲಕ್ಷ್ಯವಿಲ್ಲದೆ, ಅವ ರಿಗೆ ಅವಮಾನಮಾಡುತ್ತಾರೆಂದು ನಾನು ಬಲ್ಲೆ. ಆದರೆ ಈ ಸಂದರ್ಭ ಬೇರೆ. ನಿನ್ನ ಜೊತೆಗೆ ನನ್ನನ್ನು ಸೇರಿಸಿಕೊ, ಎಂದು ಮದನನನ್ನು ನಾನು ಬೇಡಿಕೊಳ್ಳಲಿಲ್ಲ. ನಾವೇನೋ ಬಡವರು ಹವುದು, ತಾವು ನನ್ನ ನ್ನು ತಮ್ಮ ಮನೆಗೆ ಕರೆದುಕೊಂಡು ಹೋದಿರಿ. ಮದನನೂ ಅಲ್ಲಿಗೆ ಬಂದು ತಾನಾಗಿಯೇ ನನ್ನ ಸಂಗವನ್ನು ಬಯಸಿ ಬಯಸಿ ಮಾಡಿ ಕೊಂಡನು. ನಾನು ಅವನನ್ನು ಕಂಡರೆ ಮರ್ಯಾದೆಯಾಗಿಯೇ ಇದ್ದೆ. ಜೋಯಿಸ--ನಿನ್ನ ಆಟಪಾಟಗಳಲ್ಲಿ ನೀನು ತಾಳ್ಮೆಯಿಂದಲೇ ಇದ್ದದ್ದು ನಿಜ. ಸುಮತಿ-ಮದನನಲ್ಲಿ ನನಗೆ ಪ್ರೀತಿ ಇದ್ದಾಗ್ಯೂ ನಾನೇನೂ ಅವರ ಮನೆಗೆ ಬೇಕೆಂದು ಹೋದವನಲ್ಲ. ಬೇಕಾದ ಸಿಸ್ತನ್ನು ಮಾಡಿ ಕೊಂಡು ಮೆರೆಯುತ್ತಿದ್ದ ಆ ರಾಜಬಂಧುಗಳ ಮಂಡಲಿಯಲ್ಲಿ ನನ್ನಂಥಾ ಒರಟು ಹುಡುಗ ದೃಷ್ಟಿ ಪರಿಹಾರಕ್ಕಾಗಿ ಇರತಕ್ಕದ್ದೇ ಹೊರತು ಬೇರೆ ಇಲ್ಲ. ಎಲ್ಲರೂ ನನ್ನ ನ್ನು ನೋಡಿ ನಕ್ಕರು, ಹಾಸ್ಯ ಮಾಡಿದರು, ಆಟದ ಕೋಡಂಗಿಯನ್ನು ಕಂಡ ಹಾಗೆ ಗೇಲಿಮಾಡಿದರು. ಅವರು ಒಡವೆ, ಸಿಸ್ತು, ಜೂಜು, ಇಂಥಾ ಅಲ್ಪ ವಾದ ವಿಷಯದಲ್ಲಿ ಹರಟೆಯನ್ನು ಹರ ಟುತಿದ್ದರೇ ಅಲ್ಲದೆ, - ನಾರಾಯಣ, ಕೃಷ್ಣ ' ಎಂತಲಾಗಲಿ, ತಂದೆ ತಾಯಿಗಳು ಹೇಳಿದಹಾಗೆ ಕೇಳಬೇಕೆಂತಲಾಗಲಿ, ಬಡವರಿಗೆ ಉಪ