ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪] ಸುಮತಿ ಮದನಕುಮಾರರ ಚರಿತ್ರ ೨೮೭ ಅಡಗವೆಟ್ಟುವುದಕ್ಕೆ ಹೊಸ ದೊರೆಗೆ ಸಾಮರ್ಥವಿಲ್ಲದೆ ಹೋಯಿತು. ನಮ್ಮ ಸೀಮೆಯ ಜನರಿಗೆ ಒಂದಕ್ಕೆ ಹತ್ತರಷ್ಟು ಕಷ್ಟ ಪ್ರಾಪ್ತ ವಾಯಿತು, ಕೊನೆಗೆ ಒಬ್ಬ ಪುಂಡು ಪಾಳಯಗಾರನು ಒಂದು ದಿನ ನನ್ನ ತೋಟವನ್ನೂ ಹೊಲವನ್ನೂ ಹಾಳಮಾಡಿ ನನ್ನ ಗುಡಿಸಲಿಗೆ ಬೆಂಕಿ ಹತ್ತಿಸಿ, ನನಗೂ ನನ್ನ ಮಗಳಿಗೂ ಬೇಡೀಹಾಕಿ ನಮ್ಮನ್ನು ಕಾಡಿಗೆ ತಂದು ಮಾರಿಗೆ ಬಲೀ ಕೊಡುವದಾಗಿದ್ದ ನು, ಮುಂದಿನ ಸಂಗತಿಯೆಲ್ಲಾ ಶೂರನಾದ ನಿನಗೆ (ಮಲ್ಲನಿಗೆ) ತಿಳಿದೇ ಇದೆ. ಈ ರೀತಿಯಲ್ಲಿ ಚಾರುದತ್ತನು ತನ್ನ ಕಥೆಯನ್ನು ಹೇಳಿ ಮುಗಿ ಸಿದನು. ಇದನ್ನು ಮಲ್ಲನ ಮನೇ ಜನರೆಲ್ಲಾ ಗಮನವಿಟ್ಟು ಕೇಳಿದರು. ಅತಿ ವೃದ್ಧನಾದ ಮಲ್ಲನ ತಂದೆಯು ಎದ್ದು ಸಂತೋಷದಿಂದ ಚಾರು ದತ್ತನನ್ನು ಅಪ್ಪಿಕೊಂಡು ತಮ್ಮ ಕೈಲಾದಮಟ್ಟಿಗೆ ಶತ್ರುಗಳ ಬಾಧೆ ಯನ್ನು ನಿವಾರಣ ಮಾಡುವದಾಗಿಯೂ ಚಾರುದತ್ತನ ಪ್ರಾಣಕ್ಕೆ ಬದಲಾಗಿ ತಮ್ಮ ಪ್ರಾಣವನ್ನು ಕೊಡುವುದಾಗಿಯೂ ವಾಗ್ದಾನ ಮಾಡಿ ದನು. ತಮ್ಮ ದೇಶದ ಮೇಲೆ ಬರುತ್ತಿದ್ದ ಶತ್ರುಗಳನ್ನು ಮಲ್ಲನ ಊರಿನವರು ಎಲ್ಲರೂ ಒಟ್ಟಾಗಿಸೇರಿರಿ ಎದುರಿಸುವುದೆಂದು ನಿಶ್ಮಿಸಿ ಕೊಂಡರು. ಮಲ್ಲನು ತನ್ನ ಊರಿನ ಸುತ್ತಲೂ ಇದ್ದ ೮-೧೦ ಗ್ರಾಮಗಳಿಗೆ ಹೋಗಿ ಸಿಕ್ಕಿದ ಗಂಡಾಳುಗಳನ್ನೆಲ್ಲಾ ಕೂಡಹಾಕಿದನು. ಶಕರ ಬಾಧೆಯನ್ನು ಅನುಭವಿಸಿ ಸಾಕಾಗಿದ್ದ ಆ ಜನರೆಲ್ಲಾ ಒಗ್ಗ ಟ್ಟಾಗಿ, ಮಲ್ಲನ ಪ್ರಯತ್ನ ಉತ್ತಮವಾದದ್ದೆಂದು ತಿಳಿದು, ಜಗಳಕ್ಕೆ ಸಿದ್ಧವಾದರು, ವೃದ್ಧರು ತಮ್ಮ ಅನುಭವದಿಂದಲೂ, ಯೌವ್ವನಸ್ಥರು ಅಂಗಶಕ್ತಿಯಿಂದಲೂ ವಯಸ್ಸಿಗೆ ತಕ್ಕ ವೀರಾವೇಶದಿಂದಲೂ ತೆರಳಿ ದರು. ಎಲ್ಲರೂ ಐಕಕ೦ಠ್ಯವಾಗಿ ಮುಲ್ಲನನ್ನು ತಮಗೆ ಮುಂದಾಳಾಗಿ ಮಾಡಿಕೊಂಡರು. ಅವ ಹೇಳಿದಂತೆ ತಾವೆಲ್ಲರೂ ನಡೆದುಕೊಳ್ಳ ತಕ್ಕದ್ದೆಂದು ವೃದ್ಧರಾದವರೆಲ್ಲರೂ ಒಂದು ಸಮಾಖ್ಯ ಮಾಡಿದರು. ಆಗ ಚಾರುದತ್ತನು ಇದೆಲ್ಲವನ್ನು ನೋಡಿ, ಮಲ್ಲನನ್ನು ಒಂದು ಕಡೆಗೆ ಕರೆದುಕೊಂಡು ಹೋಗಿ ರಹಸ್ಯವಾಗಿ ಅವನ ಸಂಗಡ ಹೇಳಿ