ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೮ ಸುಮತಿ ಮದನಕುಮಾರರ ಚರಿತ್ರೆ | [ಅಧ್ಯಾಯ ದ್ದೇನೆಂದರೆ :- ಅಯ್ಯಾ ಮಗುವೆ, ಈಗ ಶತ್ರುಗಳನ್ನು ಎದುರಿಸಿ ಓಡಿಸುವುದ ಕ್ಯಾಗಿ ನಿನ್ನ ಜೊತೆಗೆ ಸೇರಿಕೊಂಡಿರುವ ಸಜ್ಜನರ ಸದ್ದು ಣವೂ, ನೀನು ನನಗೆ ಮಾಡಿದ ಮಹದುಪಕೃತಿಯೂ, ದುರಾಶೆಯಿಂದ ಉನ್ಮತ್ತರಾಗಿ ರುವ ದುಷ್ಟ ಶತ್ರುಗಳನ್ನು ಮಾರಾ೦ತು ಸೋಲಿಸಿ ಮೂಲೋತ್ಪಾಟನ ವನ್ನು ಮಾಡಬೇಕೆಂಬ ನನ್ನ ಕುತೂಹಲವೂ, ಇವುಗಳೆಲ್ಲಾ ಒಟ್ಟು ಗೂಡಿಕೊಂಡು ನಾನು ತಿಳಿದಿರುವ ಕೆಲವು ರಹಸ್ಯಗಳನ್ನು ಹೊರ ಪಡಿ ಸೆಂದು ನೂಕುತ್ತಲಿವೆ, ನಾನು ಎಷ್ಟೋ ದೇಶಗಳನ್ನು ಸುತ್ತಿದೆ, ಎಷ್ಟೋ ಜನರನ್ನು ನೋಡಿದೆ, ಅನೇಕ ಗ್ರಂಥಗಳನ್ನು ಓದಿದೆ, ಎಷ್ಟೋ ಪದಾರ್ಥಗಳನ್ನು ಅವುಗಳ ಪ್ರಯೋಜನಗಳನ್ನು ಪರೀಕ್ಷೆಮಾಡಿ ತಿಳಿದು ಕೊಂಡೆ. ಆದಾಗ್ಯೂ ನನಗೆ ತಿಳಿಯದೆ, ತಿಳಿಯತಕ್ಕ ಅಂಶಗಳು ಇನ್ನು ಅನೇಕವಾಗಿವೆ. ಆದರೂ ನನಗೆ ತಿಳಿದ ಒಂದು ಸಂಗತಿ ಯನ್ನು ಹೇಳುತ್ತೇನೆ ಎಂದು ಕೆಲವು ರಹಸ್ಯಗಳನ್ನು ಮಲ್ಲನಿಗೆ ಹೇಳಿ ಕೊಟ್ಟನು. ತರುವಾಯ ಹೊಲ್ಲನು ಹೆಚ್ಚಾದ ದಂಡಿನೊಡನೆ ಬಂದು ಜಗಳಕ್ಕೆ ಅನುವಾದನು, ಮತ್ತು ಕೂಡಲೆ ಮಲ್ಲ ಇದ್ದ ಕಡೆಗೆ ಹೊಲ್ಲನು ಸೇನಾಪತಿಯ ಉಡುಪನ್ನು ಹಾಕಿಕೊಂಡು ಬಹು ಡಂಭವಾಗಿ ಬಂದು -ಮಲ್ಲ, ನಿನಗೆ ಇನ್ನೂ ಬುದ್ದಿ ಬರಲಿಲ್ಲವೆ ? ಒಂದು ಗಳಿಗೆಯಲ್ಲಿ ದೇಶವನ್ನೆ ಲ್ಲಾ ಹಾಳುಮಾಡಿ ಈ ಊರ ಜನರನ್ನೆ ಲ್ಲಾ ಕೊಂದು ರಾಜ್ಯ ವನ್ನು ಕೈವಶಮಾಡಿಕೊಳ್ಳು ತೇನೆ, ಎಂದನು. ಅದಕ್ಕೆ ಮಲ್ಲನು ಈ ಸೇನಾಪತಿಯು ಇ೦ಥವನೆಂದು ಅರಿಯದೆ ಅನುಮಾನಪಟ್ಟು ಕೊನೆಗೆ ಧ್ವನಿಯಿಂದ ಗೊತ್ತು ಮಾಡಿಕೊಂಡು-ಹೊಲ್ಲ, ಈ ಡಂಭವನ್ನು ಬಿಡು. ನೀನು ಹುಟ್ಟಿದ ಊರನ್ನು ಜೈಸಿ ಜನರಿಗೆ ಹಿಂಸೆಯನ್ನುಂಟುಮಾಡಿ ದರೆ, ಅದು ದೊಡ್ಡ ತನವೂ ಅಲ್ಲ. ಪರಾಕ್ರಮ ಮೊದಲೇ ಅಲ್ಲ. ಲೋಕದಲ್ಲಿ ಜನರ ಕಷ್ಟವನ್ನು ನಿವಾರಣೆಮಾಡಿ ಲೋಕೋಪಕಾರ ಮಾಡುವುದು ಉತ್ತಮರ ಲಕ್ಷಣ. ನೀನು ಕೆಟ್ಟ ದಾರಿಗೆ ಹೋಗಿ ಜಗಳಕ್ಕೆ ನಿಲ್ಲುತೇನೆಂದು ಹಠ ಮಾಡಿದರೆ ನಾನು ಕೊನೆಗೂ ಕಾದಿಬಿಡು