ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪). ಸುಮತಿ ಮದನಕುಮಾರರ ಚರಿತ್ರೆ ೨೪೩ ದಕ್ಕೆ ಬಹು ನಿರ್ಮಲವಾಗಿಯೂ ಇತ್ತು. ಸೂರ್ಯಭಟ್ಟ ನೂ ಆತನ ಹೆಂಡತಿಯೂ ಈ ಅತಿಥಿಗಳನ್ನು ನೋಡಿ ಬಹಳ ಸಂತೋಷದಿಂದ ಅವರನ್ನು ಉಪಚರಿಸಿದರು, ಸೂರ್ಯಭಟ್ಟ ನೂ ರಾಮಜೋಯಿಸನೂ ತಮ್ಮ ಸ್ನಾನಾಗ್ನಿ ಕಗಳನ್ನೂ ಪಾರಾಯಣ ದೇವತಾರ್ಚನೆ ಮೊದಲಾದ ನಿತ್ಯ ಕರ್ಮಗಳನ್ನು ತೀರಿಸಿಕೊಂಡು ಭೋಜನವನ್ನು ಮಾಡಿದರು. ಮದನನಿಗೂ ಸ್ನಾನವಾಯಿತು, ಮೈಯನ್ನು ಒರೆಸುತೆನೆಂದು ಜೋಯಿಸ ಕರೆದರೂ ಒಲ್ಲದೆ ರಾಜ ಪುತ್ರನು ತಾನೇ ಒರಸಿಕೊಂಡು“ ಜೋಯಿಸರೆ, ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳ ಬೇಕಲ್ಲದೆ ಇತರರ ಸಹಾಯವನ್ನು ಅಪೇಕ್ಷಿಸಬಾರದೆಂದು ತಾವು ನನಗೆ ಹೇಳಿ ಲ್ಲವೆ ? ಆದ್ದರಿಂದ ನಾನೇ ವರಸಿಕೊಳ್ಳು ತ್ತೇನೆ” ಎಂದನು. ಹಣೆಗೆ ವಿಭೂತಿಯನ್ನೂ ಚುಕ್ಕಿಬಟ್ಟಿ ನ್ಯೂ ಇಡುತೇನೆ ಬಾ, ಎಂದು ಕರೆದರೆ, ಮದನನು “ ಗುರುಗಳೆ, ಚುಕ್ಕಿಬಟ್ಟನ್ನು ಇಟ್ಟು ಶೃಂಗಾರ ಮಾಡಿ ಕೊಳ್ಳತಕ್ಕ ಶಿಸ್ತು ಗಾರರ ಮಾತನ್ನು ಕೇಳಿ ನನಗೆ ಆಗಬೇಕಾದ್ದೆಲ್ಲಾ ಆಯಿತು. ಸಿಸ್ತನ್ನು ಒಲ್ಲೆ. ವಿಭೂತಿಯೇ ಸಾಕು ” ಎಂದನು. ಸುಮ ತಿಯ ತಾಯಿಯು ಇವನಿಗೆ ಮಣೆಯನ್ನು ಹಾಕಿ ಮುಂದೆ ಅಗ್ರದ ಬಾಳೆ ಎಲೆಯನ್ನು ಹಾಕಿ ಊಟಕ್ಕೆ ಬಡಿಸಿದಳು. ಮದನನು ಮಣೆಯನ್ನು ಎತ್ತಿ ಗೋಡೆಗೆ ಒರಗಿಸಿ ಬರೀ ನೆಲದ ಮೇಲೆಯೇ ಕೂತುಕೊಂಡನು. ಊಟ ಮಾಡುತಿರುವಾಗ ಸುಮತಿಯ ತಾಯಿಯು-“ಅಯ್ಯಾ, ನಿನ ಗೇನು ಕಡಮೆ ? ಯಾಕೆ ಒಂದು ಒಡವೆಯ ಮೈ ಮೇಲೆ ಇಲ್ಲದೆ ಇದೀಯೆ ? ಎಂದು ಕೇಳಿದಳು, ಅದಕ್ಕೆ ರಾಜಕುಮಾರನು-“ ತಾಯಿ, ಸುಮತಿ ಮೈ ಮೇಲೆ ಯಾವ ಒಡವೆಯೂ ಇಲ್ಲ. ಆದಾಗ್ಯೂ ಅವನು ಎಷ್ಟೋ ಬುದ್ದಿಶಾಲಿಯಾಗಿಲ್ಲವೆ ? ಒಡವೆಯನ್ನು ಇಟ್ಟು ಮೆರೆದರೆ ಬಂದ ಭಾಗ್ಯವೇನು ?” ಎಂದನು. ಊಟವಾದ ತರುವಾಯ ಎದ್ದು ಕೈ ತೊಳೆದುಕೊಂಡು ಬಾಗಿಲ ಜಗಲಿಯ ಮೇಲೆ ಕೂತಿದ್ದ ಹಬ್ಬ ಸಿಯವನನ್ನು ನೋಡಿ, ಗೂಳಿ ಹಾಯುತ್ತಿದ್ದಾಗ ಸುಮತಿಯ ಪ್ರಾಣವನ್ನು ಉಳಿಸಿದವನು ಇವನೇ। ಎಂದು ಅರಿತು,