ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫] ಸುಮತಿ ಮದನಕುಮಾರರ ಚರಿತ್ರ 90 ಮೂರನೇ ಹಜಾರದಲ್ಲಿ ಕೂತುಕೊಂಡಿರುವಾಗ ಮದನನು ಹಬ್ಬ ಸಿಯ ವನ ಪೂರ್ವೋತ್ತರವನ್ನು ವಿಚಾರಿಸಿದನು. ೨೫ನೆ ಅಧ್ಯಾಯ ಆಗ ಮದನನು ಹಬ್ಬ ಸಿಯವನನ್ನು ಕುರಿತು- ಅಯ್ಯ, ನಿಮ್ಮ ದೇಶದವರಿಗೆ ಈ ಗೂಳಿ ಕಾಳಗದ ಅಭ್ಯಾಸ ಹೆಚ್ಚಾಗಿರುವಂತೆ ತೋರು ತಿದೆ. ಇಲ್ಲದೇ ಇದ್ದರೆ ಉಗ್ರವಾದ ಆ ಗೂಳಿಯನ್ನು ಹಾಗೆ ಎದುರಿಸು ವುದಕ್ಕಾದೀತೆ ? ಕಾಡುಮೃಗಗಳನ್ನು ಸಾದಾಗಿ ಮಾಡುವುದಕ್ಕೆ ನನಗೂ ತಿಳಿಯುವುದು, ಆದರೆ ಅಂಥಾ ಭಯಂಕರವಾದ ಗೂಳಿಯನ್ನು ನಾನು ಯಾವಾಗಲೂ ನೋಡಿರಲಿಲ್ಲ.. ಆ ದಿನ ನೀನು ಇಲ್ಲದಿದ್ದರೆ ನನ್ನ ಪ್ರಾಣವೇ ಉಳಿಯುತಿರಲಿಲ್ಲ, ಹೀಗೆಂದು ಮದನ ಹೇಳಿದನು. ಅದಕ್ಕೆ ಹಬ್ಬ ಸಿಯವನು--ಬುದ್ದಿ, ಈ ಬಗೆ ಗೂಳಿಕಾಳಗ, ಕೋಣನ ಕಾಳಗ, ಟಗರಿನ ಕಾಳಗ ಮೊದಲಾದ್ದು ದೇಶ ದೇಶದಲ್ಲಿಯೂ ಉಂಟು; ನಮ್ಮ ದೇಶದಲ್ಲಿ ಒಂದು ಕಡೆಯೇ ಅಲ್ಲ. ಮೊನ್ನೆ ನಡೆದ ಕಾಳಗ ಅಷ್ಟರಲ್ಲಿಯೇ ಇದೆ. ಇದಕ್ಕಿಂತಲೂ ಅಧಿಕವಾದ್ದನ್ನು ಎಷ್ಟೋ ನೋಡಿದೇನೆ, ಎಂದನು. ಕೂಡಲೆ ತಾನು ಕಾಡುಮೃಗಗಳನ್ನು ಸಾದುಮಾಡುವುದಕ್ಕೆ ಬಲ್ಲೆನೆಂತಲೂ ಇತರರಿಗಿಂತ ಹೆಚ್ಚಾಗಿ ಈ ವಿಷಯಗಳನ್ನು ತಿಳಿದು ಇದೇನೆಂತಲೂ ಮದನನು ತನ್ನ ಸ್ವಪ್ರತಾಪವನ್ನು ಹೇಳಿಕೊಳ್ಳುವ ದುರಭ್ಯಾಸ ತನಗೆ ಇನ್ನೂ ಹೋಗಲಿಲ್ಲವಲ್ಲಾ, ಎಂದು ಮನಸ್ಸಿನಲ್ಲಿಯೇ ಪೇಚಾಡಿಕೊಂಡು, ಹಬ್ಬ ಸಿಯವನನ್ನು ಕುರಿತು-ಅಯ್ಯಾ ಮಿತ್ರನೆ, ಇದೆಲ್ಲವನ್ನೂ ನೀನು ಎಲ್ಲಿ ವಿಶೇಷವಾಗಿ ನೋಡಿದ್ದೀಯ ? ಹೇಳು, ಎಂದನು. ಅದಕ್ಕೆ ಹಬ್ಬ ಸಿಯವನು--ಸ್ವಾಮಿ, ನಾನು ಎಷ್ಟೋ ದೇಶವನ್ನು ಸು ತ್ತಿದೇನೆ. ಅನೇಕ ದ್ವೀಪಾಂತರಗಳಿಗೆ ಹೋಗಿದೇನೆ. ಒಂದಾ ನೊಂದು ಸೀಮೆಯಲ್ಲಿ ಜನರು ಕುದುರೆಯನ್ನು ಹತ್ತಿ ಕಾಡಿಗೆ ಹೋಗಿ