ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

400 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ದಾದರೂ ಒಂದು ಕಾರ್ಯದಲ್ಲಿ ಉದ್ಯುಕ್ತರಾಗಿಯೇ ಇರುತಿದ್ದರು. ಮತ್ತು ಇಂಥಾ ಮಹಾತ್ಮರು ಡಂಭವನ್ನೇ ಅರಿಯರು, ಬಡತನವೇ ಸಿರಿತನವೆಂದು ತಿಳಿದಿದ್ದರು, ದೀನಾನಾಥರಲ್ಲಿ ಯಾವಾಗಲೂ ದಯಾ ಪರರಾಗಿ ಅನ್ಯರಿಗೆ ಉಪಕಾರವನ್ನೇ ಮಾಡುತಾ ಆತ್ಮಸೌಖ್ಯವನ್ನು ನೋಡದೆ ನಿರಂತರವಾಗಿ ಲೋಕೋಪಕಾರದಲ್ಲಿಯೇ ಮನಸ್ಸನ್ನು ಇಟ್ಟು ಕೊಂಡು ಇರುತಿದ್ದರು, ಈ ಪ್ರಕಾರ ಜೋಯಿಸನು ಬುದ್ಧಿ ಯನ್ನು ಹೇಳಿದನು. ಮದನನಿಗೂ ಸುಮತಿಗೂ ಸ್ನೇಹವು ಪೂರ್ವಕ್ಕೆ ಈಗ್ಗೆ ಹತ್ತರಷ್ಟು ವೃದ್ಧಿಯಾಯಿತು; ಮದನನು ಒಂದು ದಿನ ಸಾಯಂ ಕಾಲದಲ್ಲಿ ಮಾತನಾಡುತ್ತಾ ಕೂತುಕೊಂಡಿರುವಾಗ್ಗೆ ಹಬ್ಬ ಸಿಯವನು ತನ್ನ ಪೂರ್ವವೃತ್ತಾಂತವನ್ನು ಹೇಳಿಕೊಂಡನು. ೨೬ನೆ ಅಧ್ಯಾಯ ಹಬ್ಬ ಸಿಯವನ ಚರಿತ್ರೆ ಇವನು ಹೇಳಿದ್ದು ಹೇಗೆಂದರೆ-ನಾನು ಮಿಸ್ಟರ್, ಬರ್ಬರ ಹಬ್ಬ ಸಿ ಮೊದಲಾದ ರಾಜ್ಯದ ಕಡೆಯವನು, ಅಲ್ಲಿ ಶೆಖೆ ಬಹು ಹೆಚ್ಚು, ಎಲ್ಲಿ ನೋಡಿದರೂ ಮರಳು ಕಾಡು ಇರುವುದು, ಖರ್ಜೂ ರದ ಮರವೇ ಹೇರಳವಾಗಿರುವುದು, ಸಿಂಹ ಹುಲಿ ಆನೆ ಇವುಗಳೇ ಇಲ್ಲಿನ ಕ್ರೂರ ಜಂತುಗಳು, ಈ ದೇಶದಲ್ಲಿ ಚಳಿಗೂ ಗಾಳಿಗೂ ಲೇಶವೂ ವ್ಯಾ ಪನೆ ಇಲ್ಲದಂತೆ ಬಲವಾದ ಗೋಡೆಗಳನ್ನು ಹಾಕಿ ಮನೆ ಕಟ್ಟಿ ದಾರೆ. ಅಲ್ಲಿ ಇಂಥಾ ಮನೆಗಳನ್ನು ನಾವು ಕಾಣಲೇ ಕಾಣೆವು. ಹುಲ್ಲಿನ ಗುಡಿಸಿಲೇ ನಮ್ಮ ಮನೆಗಳು, ಇಂಥಾ ಗುಡಿಸಿಲು ೪೦-೫೦ ಇದ್ದರೆ ಒಂದುವೂರು, ನೀವು ಮನೆಗಳಲ್ಲಿ ಅಗತ್ಯವಿಲ್ಲದ ಏನೇನೋ ಸಾಮಾನುಗಳನ್ನು ಇರಿಸಿಕೊಂಡು ಇರುತೀರಿ, ನಿಮಗೆ ಏನು ಇದ್ದಾಗ್ಯೂ ನೀವು ತೃಪ್ತಿಯಾಗಿ ಸುಖವಾಗಿರುವಂತೆ ಕಾಣುವುದಿಲ್ಲ. ನಿಮ್ಮ ಬಾಗಿಲಿಗೆ ಯಾರಾದರೂ ಬಂದರೆ ಅವರನ್ನು ಆಚೆಗೆ ಅಟ್ಟ ಬಿಡು ತೀರಿ, ನಮ್ಮ ಹತ್ತಿರ ಈ ವಿಪರೀತದ ಸಾಮಾನುಗಳು ಯಾವುದೂ