ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೨ ಸುಮತಿ ಮದನಕುಮಾರರ ಚರಿತ್ರೆ - [ಅಧ್ಯಾಯ ಏಟಿಗೆ ಸಿಕ್ಕದೆ ನೆಗೆದು ತಪ್ಪಿಸಿಕೊಂಡು ಅದನ್ನು ಕೊಂದು ಹಾಕಿ ಊರಿಗೆ ಹೊತ್ತು ಕೊಂಡು ಬರುವರು. ಊರ ಜನರೆಲ್ಲರೂ ಬೇಟೆ ಗಾರರಿಗೆ ಸನ್ಮಾನವನ್ನು ಮಾಡುವರು, ಮದನ-ಅಯ್ಯೋ, ಇದೇನು ಭಯಂಕರವಾದ ಬೇಟೆ ! ಕಾಡಿ ನಲ್ಲಿ ಒಬ್ಬೊಬ್ಬರೇ ಸಿಂಹವನ್ನು ಕಂಡರೆ ಎದುರಿಸುವುದು ಅಸಾಧ್ಯವೇ ತಾನೆ ? ಹಬ್ಬ ಸಿ-ಅದು ಯಾವಾಗಲೂ ಅಸಾಧ್ಯವೆಂದು ಹೇಳಕೂಡದು. ಇದಕ್ಕೆ ನಮ್ಮ ತಂದೆಯೇ ದೃಷ್ಟಾಂತ. ಆತನು ಕಾಡಿನಲ್ಲಿ ಹೋಗು ತಿರುವಾಗ ಒಂದು ಸಿಂಹವು ಮನುಷ್ಯನ ವಾಸನೆಯನ್ನು ತಿಳಿದು ಎದು ರಿಗೆ ಬಂತಂತೆ, ಒಂಟಿಯಾಗಿದ್ದ ನಮ್ಮ ತಂದೆಯು ಹೆದರದೆ ಆದ ವಿಧಿ ಯಾಗಲಿ ಎಂದು ನಿಶ್ಚಸಿಕೊಂಡು, ಸೊಂಟದಲ್ಲಿದ್ದ ಉದ್ದವಾದ ಚೂರಿ ಯೊಂದನ್ನು ಹಿರಿದುಕೊಂಡು ಅದರ ಅಪಾಯ ಸ್ಥಳಕ್ಕೆ ತಿವಿಯುತಾ ಬಂದನಂತೆ, ಅದರ ಕೈಗೆ ಸಿಕ್ಕದಂತೆ ಹಾರಿ ಹಾರಿ ಹೊಡೆಯುತಿದ್ದ ಈತನ ಪೆಟ್ಟು ಬಲವಾಗಿ ಬಳಲಿಕೆಯಿಂದ ಸಿಂಹವು ನೆಲಕ್ಕೆ ಬಿತ್ತು. ಕೂಡಲೆ ಇನ್ನೂ ನಾಲ್ಕು ಪೆಟ್ಟನ್ನು ಹಾಕಿ ಅದನ್ನು ನಮ್ಮ ತಂದೆಯು ಕೊಂದು ಹಾಕಿದನು. ಇದರಿಂದ ನಮ್ಮ ಅಯ್ಯನಿಗೆ ಆ ಊರಿನ ಜನ ರಲ್ಲಿ ಮಾನ ಹೆಚ್ಚಾಯಿತು ಆತನ ಪ್ರಖ್ಯಾತಿ ಆ ಪ್ರಾಂತ್ಯದಲ್ಲೆ ಲ್ಲಾ ಹರ ಡಿಕೊಂಡಿತು. ಈ ತಂದೆಯ ಕೈಕೆಳಗೆ ನನಗೆ ಬೇಟೆಯಾಡುವುದರಲ್ಲಿ ಬಹು ಚೆನ್ನಾಗಿ ಶಿಕ್ಷೆಯಾಯಿತು. ಮೊದಲು ಮೊದಲು ನನ್ನ ಕೈಲಿ ಜಿಂಕೆ ಮೋಲ-ಇವುಗಳನ್ನು ನಮ್ಮ ತಂದೆಯು ಬೇಟೆ ಯಾಡಿಸಿದನು. ತರುವಾಯ ಹುಲಿ ಮೊದಲಾದ್ದನ್ನು ಹಿಡಿಯಲು ಆರಂಭಿಸಿದೆ. ಒಂದು ಸಮಯದಲ್ಲಿ ಇನ್ನೊಂದು ವಿಚಿತ್ರವಾದ ಕೆಲಸ ನಡೆ ಯಿತು. ನದೀ ತೀರದಲ್ಲಿರುವ ಗದ್ದೆಗಳನ್ನು ನೀರಿನಲ್ಲಿ ವಾಸಮಾಡುವ ನೀರ ಕುದುರೆ ಎಂಬ ಒಂದು ಜಂತುವು ಬಹಳವಾಗಿ ಹಾಳುಮಾಡು ವುದು. ಇದರ ಕೈಕಾಲು ಮೊಸಳೇದರ ಹಾಗೆ, ಮೂತಿ ಅಷ್ಟು ಉದ್ದ ವಲ್ಲ, ಬಾಯಲ್ಲಿ ಎರಡು ಕೋರೆ ಇರುವುದು. ಇದು ನೀರಿನಿಂದ ಈಚೆಗೆ ಬಂದು ತಡಿಯಲ್ಲಿ ಓಡಿಯಾಡುವುದು, ಈ ಜಂತುಗಳನ್ನು