ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭] ಸುಮತಿ ಮದನ ಕುಮಾರರ ಚರಿತ್ರೆ 4೦೫ ಮಾರ್ಗಕ್ಕೆ ಬಂದನು. ಇದಕ್ಕೆ ಸರಿಯಾದ ಉಪಕಾರವನ್ನು ನಾನು ಮಾಡಲು ನನಗೆ ಯೋಗ್ಯತೆಯೇ ಇಲ್ಲ. ಆದರೂ ಇದನ್ನು ಸ್ವೀಕರಿಸ ಬೇಕು: ತಮ್ಮ ಅಪ್ಪಣೆಯಾದರೆ ನನ್ನ ಮಗನನ್ನು ಊರಿಗೆ ಕರೆದು ಕೊಂಡು ಹೋಗುತೇನೆ, ಹೀಗೆ ಹೇಳಿ ಒಂದು ಬೆಳ್ಳಿ ತಟ್ಟೆ ಯಲ್ಲಿ ತುಂಬಾ ಚಿನ್ನದ ಮೊಹರವನ್ನು ಹಾಕಿ ಕೊಡುವುದಕ್ಕೆ ಹೋದನು. ಸೂರ್ಯಭಟ್ಟ-ದೊರೆಯೆ, ನಾನು ಅಷ್ಟಕ್ಕೆ ಶಕ್ತನಲ್ಲ. ಕ್ಷಮಿಸ ಬೇಕು. ದೊರೆ- ಚಿಂತೆಯಿಲ್ಲ. ಇದನ್ನು ತೆಗೆದುಕೊಳ್ಳ ಬೇಕು. ಸಂಕೋಚ ಬೇಡ, ನಾನು ಮನಃ ಪೂರ್ತಿಯಾಗಿ ಕೊಡುತೇನೆ. ಸೂರ್ಯ-ಇದನ್ನು ನಾನು ತೆಗೆದುಕೊಂಡರೆ ನನ್ನ ಹೆಂಡತಿ ಸುಮ್ಮನೆ ಬಿಟ್ಟಾಳೆ ? ಈ ಒಡವೇ ಮಾಡಿಸು, ಆ ಒಡವೇ ಮಾಡಿಸು ಎಂದು ವೇಧಿಸಿಯಾಳು, ನಮ್ಮ ಹೆಣ್ಣು ಹುಡುಗರೆಲ್ಲಾ ಪಟ್ಟಿ ಅಂಚಿನ ಸೀರೆಗೆ ಇಳಿಯುತ್ತಾರೆ. ನಮ್ಮ ಪಾತಿ ಪಾರ್ವತಮ್ಮನವರಾಗು ತಾಳೆ; ನಮ್ಮ ಅಚ್ಚಿ ಲಕ್ಷಮ್ಮನವರಾಗುತಾಳೆ. ಇವರೆಲ್ಲಾ ಶೃಂಗಾರ ವನ್ನು ಮಾಡಿಕೊಂಡು ಮೆರೆಯುವುದಕ್ಕೆ ಆರಂಭಿಸುತ್ತಾರೆ, ಆಮೇಲೆ ನನ್ನ ಮನೆಯಲ್ಲಿ ಕೆಲಸಮಾಡುವವರು ಯಾರು ? ದೊರೆ--ನೀವು ದೊಡ್ಡ ಸಂಸಾರಿಗಳು, ಮುಂದೆ ಅನೇಕ ಪ್ರಸ್ತ ಮುಂತಾದ ವೆಚ್ಚದ ಸಮಯ ಬಹಳವಾಗಿದೆ. ಅದಕ್ಕೆ ಈ ದ್ರವ್ಯ ಉಪಯೋಗಿಸಲು ತೆಗೆದುಕೊಳ್ಳಿ. ಸೂಯ್ಯ ಭಟ್ಟ -ರಾಜನೆ, ನಡೆಯತಕ್ಕ ಮಾತಲ್ಲ. ನಾವು ದುಡ್ಡು ಕಾಸನ್ನು ಹೀಗೆ ಓಡಾಡಿಸಿದರೆ ನಮ್ಮ ಮನೆ ಹೆಂಗಸರೂ ಗಂಡಸರೂ ಕೆಲಸಾ ಮಾಡಿಯಾರೆ? ನಮ್ಮ ತಾಯಿ ಮೊದಲ ಕೋಳಿ ಕೂಗುವಾಗ ಎದ್ದು ನಮ್ಮ ತಂದೆಗಳು ಸಂಚ ಪಂಚ ಉಷಃಕಾಲಕ್ಕೆ ಸ್ನಾನಕ್ಕೆ ಹೊರಡುವುದಕ್ಕೆ ಮುಂಚಿತವಾಗಿ ಮನೆ ಕೆಲಸಗಳನ್ನೆಲ್ಲಾ ಮುಗಿಸು ತಿದ್ದರು, ಈಗಿನವರು ಎರಡನೇ ಕೋಳಿ ಕೂಗಿದ ಮೇಲೆ ಏಳುತಾರೆ. ಕಾಲ ಕೆಟ್ಟು ಹೋಯಿತು. ಹೀಗಿರುವಲ್ಲಿ ನಾವು ಒಡವೆವಸ್ತುಗಳನ್ನೂ ಪಟ್ಟಿ ಅಂಚಿನ ಸೀರೆಯನ್ನೂ ಮಾಡಿಕೊಟ್ಟರೆ ನಮ್ಮ ಸಂಸಾರ ನಡೆ