ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ಲನ್ನು ಬಿಟ್ಟು ಆಚೆಗೆ ಓಡಿಹೋಗಿ, ಬಿಕ್ಕಳಿಸಿ ಬಿಕ್ಕಳಿಸಿ ಅಳುತಾ ಅಲ್ಲಲ್ಲೇ ಸ್ವಲ್ಪ ಸ್ವಲ್ಪ ನಿಂತು ಹಿಂತಿರುಗಿ ಹಿಂತಿರುಗಿ ಇವರನ್ನು ನೋಡುತಾ ಆ ತೋಟದಲ್ಲೆ ಲ್ಲಾ ಓಡಾಡಿದನು. ತನಗೆ ದುಃಖ ಉಂಟಾ ಗಲಿ ಸಂತೋಷ ಉಂಟಾಗಲಿ, ಯಾರೂ ತನ್ನ ನ್ನು ಲಕ್ಷ ಮಾಡುವುದಿಲ್ಲ ವಲ್ಲಾ ಅಂಥಾ ಸ್ಥಳಕ್ಕೆ ಬಂದೆನಲ್ಲಾ ಎಂದು ಅವನಿಗೆ ಏಕರೀತಿಯಲ್ಲಿ ಅಸಮಾಧಾನವೂ ಆಶ್ಚರವೂ ಉಂಟಾದವು, ಹಣ್ಣನ್ನೆಲ್ಲಾ ಜೋಯಿ ಸನೂ ಸುಮತಿಯ ತಿಂದು ಮುಗಿಸಿದರು. ಸುಮತಿ ಯು- ಜೋಯಿಸರೆ, ನಾವು ತೋಟದಲ್ಲಿ ಕೆಲಸ ಮಾಡಿ ಯಾದ ಮೇಲೆ, “ ನೀನು ಒಂದು ಕಥೆಯನ್ನು ಓದು ಕೇಳುತೇನೆ' ಎಂದು ಹೇಳಿದ್ದಿರಿ, ತಮಗೆ ಸಮಾಧಾನವಾಗಿದ್ದರೆ, ಇರುವೆ ನೊಣ ಗಳ ಕಥೆಯನ್ನು ಓದುತ್ತೇನೆ, ಕೇಳಬೇಕು. ಜೋಯಿಸ-ಅಗತ್ಯವಾಗಿ ಆಗಲಿ, ನಿಧಾನವಾಗಿ ಸ್ಪಷ್ಟವಾಗಿ ಓದಬೇಕು, ಮಧ್ಯೆ ಮಧ್ಯೆ ಸಂದೇಹಪಡಬಾರದು, ಶಬ್ದಗಳನ್ನು ತಪ್ಪಾಗಿ ಉಚ್ಚರಿಸಬಾರದು, ನೀನು ಓದಿದ್ದು ನಿನಗೆ ಅರ್ಥವಾಯಿತೆಂದು ತೋ ರ್ಪಡಿಸಿಕೊಳ್ಳುವಹಾಗೆ ಓದಬೇಕು, ಇದೆಲ್ಲಾ ನಿನಗೆ ಜ್ಞಾಪಕ ವಿದ್ದೇ ಇದೆ. ತರುವಾಯ ಸುಮತಿಯು ಪುಸ್ತಕವನ್ನು ತೆಗೆದುಕೊಂಡು ಓದಲಾ ರಂಭಿಸಿದನು. ನೊಣಗಳು ಮತ್ತು ಇರುವೆಗಳು ಒಂದಾನೊಂದು ಕಾಲದಲ್ಲಿ ಒಬ್ಬಾನೊಬ್ಬ ಗೌಡನ ತೋಟದ `ಒಂದು ಮೂಲೆಯಲ್ಲಿ ಒಂದು ದೊಡ್ಡ ಇರುವೆಗೂಡು ಇತ್ತು, ಅಲ್ಲಿದ್ದ ಇರುವೆಗಳು ಬೇಸಗೆಯಲ್ಲಿ ದಿನವೆಲ್ಲಾ ಹೊರಕ್ಕೆ ಬಂದು ಕಾಳುಗಳನ್ನು ಕಚ್ಚಿ ಕೊಂಡು ಗೂಡಿನ ಒಳಕ್ಕೆ ಹೋಗುತ್ತಲೇ ಇರುತಿದ್ದವು. ಆ ಇರುವೇ ಗೂಡಿನ ಹತ್ತಿರ ಕೆಲವು ಹೂವಿನ ಗಿಡಗಳಿದ್ದವು. ಆ ಗಿಡಗಳ ಮೇಲಿದ್ದ ಹೂವಿಗೆ ಅನೇಕ ನೊಣಗಳು ಬಂದು ಎರಗುವುದು, ಅಲ್ಲಿಂದ ಹಾರು ವುದು, ಝೇಂಕರಿಸುವುದು, ಒಂದು ಪುಷ್ಪದಿಂದ ಇನ್ನೊಂದು ಪುಷ್ಪಕ್ಕೆ