ಪುಟ:ಸಮತಿ ಮದನಕುಮಾರರ ಚರಿತ್ರ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಸುಮತಿ ಮದನಕುಮಾರರ ಚರಿತ್ರ [ಅಧ್ಯಾಯ ಮಾಡಲಿಲ್ಲ ಎನ್ನುವಷ್ಟರಲ್ಲಿಯೇ ಮದನ ಕುಮಾರನು ಇವರ ಸಮಿಾ ಪಕ್ಕೆ ಓಡಿಬಂದು - ಜೋಯಿಸರೆ, ನನಗೂ ಒಂದು ಕಳೆಕೊಕ್ಕೆ ಬೇಕು, ಎಂದು ತಾನಾಗಿಯೇ ಕೇಳಿದನು. ಜೋಯಿಸನು ಅದನ್ನು ತೆಗೆದು ಕೊಟ್ಟನು. ಮದನನು ಕಳೆಕೊಕ್ಕೆಯನ್ನು ತೆಗೆದುಕೊಂಡು ಅವರ ಹಾಗೆಯೇ ಅಗೆಯಲಾರಂಭಿಸಿದನು ; ಎಂದಿಗೂ ಅಗೆದು ಅಭ್ಯಾಸವೇ ಇಲ್ಲದಕಾರಣ, ಆಯುಧವನ್ನು ತಗಲಿಸಿಕೊಂಡು ಕೈ ಕಾಲುಗಳನ್ನು ಗಾಯಮಾಡಿಕೊಂಡನು. ಇದನ್ನು ಕಂಡು ಜೋಯಿಸನು ತನ್ನ ಗುದ್ದ ಲಿಯನ್ನು ಬಿಟ್ಟು ಮದನನ ಸಖಾ ಪಕ್ಕೆ ಹೋಗಿ ಕಳೆ ಕೊಕ್ಕೆ ಯನ್ನು ಹಿಡಿಯುವುದು ಹೀಗೆ, ಅಗೆಯುವುದು ಹೀಗೆ, ಎಂದು ಆ ಹುಡುಗನಿಗೆ ತೋರಿಸಿಕೊಟ್ಟನು. ಮದನನು ಸ್ವಲ್ಪ ಹೊತ್ತಿನಲ್ಲಿ ಅಗೆಯುವುದಕ್ಕೆ ಚೆನ್ನಾಗಿ ಕಲಿತುಕೊಂಡು ಬಹು ಸಂತೋಷವಾಗಿ ಕೆಲಸಮಾಡಿದನು. ಕೆಲಸ ಮುಗಿದಮೇಲೆ ಆ ಮೂರು ಜನರೂ ಗುಡಿಲಿಗೆ ಹೋದರು. ಕುಯಿದುತಂದು ಅಲ್ಲಿರಿಸಿದ್ದ ಹಂಣುಗಳನ್ನು ಈಚೆಗೆ ತೆಗೆದು ಜೋಯಿ ಸನು ಕೊಳ್ಳೆಂದು ಮದನನಿಗೂ ಕೊಡುವುದಕ್ಕೆ ಹೋಗಲು, ಅರಸು ಮಗನಿಗೆ ಅತ್ಯಂತ ಆನಂದವಾಯಿತು; ಅವುಗಳನ್ನು ತಿಂದನು. ಕೆಲಸ ಮಾಡಿ ಶ್ರಮ ಪಟ್ಟಿದ್ದ ಕಾರಣ ಇವನಿಗೆ ಹಸಿವು ಬಹುವಾಗಿತ್ತು, ಅದ ರಿಂದ ಆ ಹಂಣುಗಳು ಬಹುರುಚಿಯಾಗಿ ತೋರಿದವು. ಅವರು ಮೂರುಜನರೂ ಫಲಾಹಾರವನ್ನು ಮಾಡಿದ ತರುವಾಯ, ರಾಮಜೋಯಿಸನು ಗೂಡಿನಲ್ಲಿದ್ದ ದಫ್ತರವನ್ನು ತೆಗೆದುಕೊಂಡು, ಅದರಲ್ಲಿದ್ದ ಒಂದು ವಹಿಯನ್ನು ತೆಗೆದು-ಅಯ್ಯಾ ಮದನಕುಮಾರ, ಇದರಲ್ಲಿರುವ ಒಂದು ಕಥೆಯನ್ನು ಓದೀಯಾ ? ಎಂದು ಕೇಳಿದನು. ದೊರೆಮಗನು ತಲೆಯನ್ನು ಕೆಳಕ್ಕೆ ಬಗ್ಗಿಸಿ, ತನಗೆ ಓದು ಬರಹ ಬಾರ ದೆಂದು ನಾಚಿಕೆಯೊಡನೆ ಹೇಳಿದನು. ಅದಕ್ಕೆ ಜೋಯಿಸನು-ಅಯ್ಯೋ! ಈ ಮಾತ ಕೇಳಿ ನನಗೆ ಬಹು ಸಂಕಟವಾಗುತಿದೆ, ಓದುಬರಹವನ್ನು ಕಲಿತುದರಿಂದ ಉಂಟಾಗುವ ಸಂತೋಷ ನಿನಗೆ ಇಲ್ಲವಾಯಿತು. `ಒಳ್ಳೇದಾಯಿತು, ಸುಮತಿ ಓದುತ್ತಾನೆ, ನೀನು ಕೇಳು ಎಂದನು. ಅದೇ ಪ್ರಕಾರ ಸುಮತಿಯು ಆ ವಹಿಯನ್ನು ತೆಗೆದುಕೊಂಡು ಕಥೆಯನ್ನು ಓದಿದ್ದು ಹೇಗೆಂದರೆ ;