ಪುಟ:ಸಮತಿ ಮದನಕುಮಾರರ ಚರಿತ್ರ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

43 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ. ಕೊಟ್ಟದ್ದರಲ್ಲಿ ಸಂತುಷ್ಟನಾಗಿ ಸಂತೋಷವಾಗಿಯೇ ಕಾಲವನ್ನು ಕಳೆ ಯುತಿದ್ದನು. ಹಗಲೆಲ್ಲಾ ಕೆಲಸಾ ಮಾಡಿ ಮಾಡಿ ದಣಿಯುತಿದ್ದ ಕಾರಣ, ಹೊಟ್ಟೆ ಯಲ್ಲಿ ಚುರಗುಟ್ಟಿ ಹಸಿವಾಗಿ ಎಂಥಾ ಒಣಕಲ ಹಿಟ್ಟಾ ದರೂ ರುಚಿಯಲ್ಲಿ ಇವನ ಭಾಗಕ್ಕೆ ಮೃಷ್ಟಾನ್ನವಾಗಿರುತಿತ್ತು. ನೆಲದ ಮೇಲೆ ಮಲಗಿಕೊಂಡರೂ ಮೈ ಮರೆತು ನಿದ್ರೆ ಬರುತಿತ್ತು, ಇದೂ ಅಲ್ಲದೆ ಆ ಮೇದರವನು ಬಹು ಒಳ್ಳೆಯವನಾಗಿಯೂ ಪ್ರಾಮಾಣಿಕ ನಾಗಿಯೂ ಇದ್ದನು. ಅವನು ವ್ಯಾಪಾರದಲ್ಲಿ ಬಹು ನಿರ್ಣಯವಾಗಿ, ಯಾವಾಗಲೂ ನಿಜವನ್ನೇ ಹೇಳುತಾ ಇದ್ದನು. ಈ ಕಾರಣದಿಂದ ನೆರೆಹೊರೆಯವರೆಲ್ಲರೂ ಇವ ಸತ್ಯವಂತನೆಂದು ಮತ್ಯಾದೆಯಿಂದ ಕಾಣು. ತಿದ್ದರು ; ಅವರ ಜಾತಿ ಪಂಚಾಯಿತಿಯಲ್ಲಿ ಯಾವುದಕ್ಕೂ ಇವನನ್ನು ಕರೆಯುತಿದ್ದ ರು. - ಹೀಗಿರುವಲ್ಲಿ ಮೇಲೆ ಕಂಡ ದೊರೆಯ ಅಳಿಯನಾದ ಅರಸು. ಮಗನು ಎಂಥಾ ಮೃದುವಾದ ಮೆತ್ತೆಯ ಮೇಲೆ ಮಲಗಿಕೊಂಡಾಗ್ಯೂ. ಮತ್ತೆ ಯಾವ ಉಪಚಾರಗಳನ್ನು ಮಾಡಿಕೊಂಡಾಗ್ಯೂ ನಿದ್ರೆ ಬರುತಿರ. ಲಿಲ್ಲ. ಇವನು ಹಗಲೆಲ್ಲಾ ಜೂಗರಿಸುತಾ ಯಾವ ಕೆಲಸವನ್ನೂ ಮಾಡದೆ ಜಡನಾಗಿ ಕೂತಿರುತಿದ್ದ ಕಾರಣ ಹೀಗಾಗುತಿತ್ತು. ಆವೂರ ದೊರೆಗೆ ಆತ ಅಳಿಯ; ಖಾಸ ಪಂಜಯಲ್ಲಿ ಈತನಿಗೆ ಚೊಕ್ಕ ಭೋಜನ ವಾಗಿ ಇವನು ಹಾಲುತುಪ್ಪದಲ್ಲಿ ಕೈ ತೊಳೆಯುತ್ತಿದ್ದನು ; ಬೇಕಾದ. ಭಕ್ಷ್ಯಭೋಜ್ಯಗಳು ಅರಮನೆಯಿಂದ ಬೆಂಡಿನ ಕುಕ್ಕೆಗಳಲ್ಲಿಯೂ ದೊಡ್ಡ ಪರಾತಗಳಲ್ಲಿಯೂ ಅಡಕಿ ಅಳಿಯಂದಿರ ಮನೆಗೆ ಬರುತಾಇತ್ತು. ಇದಕ್ಕೆ ಕೊನೆಮಿತಿಯೇ ಇಲ್ಲ. ಏನಾದರೆ ಏನು ? ಎಂಥಾ ತಿಂಡಿ ಎಷ್ಟು ತಾನೇ ಇತ್ತು, ಪ್ರಯೋಜನವೇನು ? ಇವನಿಗೆ ಏನು ತಿಂದರೂ ರುಚಿಯೇ ತೋರುತಿರಲಿಲ್ಲ, ಯಾವುದೂ ಬೇಕಾಗಿರಲಿಲ್ಲ. ತನಗೆ ಚೆನ್ನಾಗಿ, ಹೊಟ್ಟೆ ಯಲ್ಲಿ ಹಸಿವು ಹುಟ್ಟಿ ಆಹಾರದ ಮೇಲೆ ಅಪೇಕ್ಷೆಯಾಗದೇಲೇ ಮೇಲೆ ಮೇಲೆ ಬಂದ ತಿಂಡಿಯನ್ನು ಮೇಲೆ ಮೇಲೆಯೇ ಬಾಯಿಗೆ ಗಿಡಿದುಕೊಳ್ಳುತಿದ್ದ ಕಾರಣ, ಇವನಿಗೆ ಯಾತರಲ್ಲಿಯೂ ರುಚಿ ತೋರ ಲಿಲ್ಲ. ದೊರೇ ಅಳಿಯನಾದ್ದರಿಂದ ವಿಶೇಷ ಬಿಗುಮಾನವಾಗಿ ಕೂತ