ಪುಟ:ಸಮತಿ ಮದನಕುಮಾರರ ಚರಿತ್ರ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ 44 ಕಡೆಯಲ್ಲಿಯೇ ವಿಸರ್ಜನೆಗಳನ್ನು ಮಾಡಿಕೊಳ್ಳುತಾ, ಹೊರಗಿನ ಗಾಳಿ ಸೋಕಿದರೆ ತನ್ನ ಮುಖ ಎಲ್ಲಿ ಕಂದುವುದೋ ತನ್ನನ್ನು ಶೃಂಗಾರ ಪುರು ವನಲ್ಲವೆಂದು ಎಲ್ಲಿ ಯಾರು ಹೇಳಿಯಾರೋ ಎಂದು ಅವನು ಈಚೆಗೆ ತಲೆಯನ್ನೆ ಹಾಕುತಿರಲಿಲ್ಲ. ಇವನ ಜಡತ್ವದಿಂದಲೂ ತಿಂಡಿಪೋತತನ ದಿಂದಲೂ, ಇವನಿಗೆ ಯಾವಾಗಲೂ ಏನಾದರೂ ಜಾಡ್ಯವಿರುತಲೇ ಇತ್ತು. ಇವನಿಂದ ಯಾರಿಗೂ ಯಾವ ಉಪಕಾರವೂ ಇಲ್ಲದೇ ಇದ್ದ ಕಾರಣ, ಇವನಿಗೆ ಯಾರೂ ಸ್ನೇಹಿತರೇ ಇರಲಿಲ್ಲ. ಇವನ ಮನೇ ಚಾಕರರು ಸಹಿತವಾಗಿ ಇವನ ಹಿಂದೆ ವಿಶೇಷವಾಗಿ ದೂಷಿಸುತಿದ್ದರು. ಇವನು ನೆರೆಹೊರೆಯವರಿಗೆ ಏನಾದರೂ ತೊಂದರೆಯನ್ನು ಕೊಡುತಲೇ ಇದ್ದ ಕಾರಣ, ಅವರು ಇವನ ಮೇಲೆ ದ್ವೇಷ ಮಾಡುತಿದ್ದರು, ಇವನು ಯಾವಾಗಲೂ ಸಿಡುಕಿನಿಂದ ಮುಖವನ್ನು ಗಂಟು ಹಾಕಿಕೊಂಡು, ದುಮದುಮಗುಟ್ಟು ತ ಇದ್ದನು ; ಮೇಲೂ, ನಗುನಗುತಾ ಸಂತೋಷ ವಾಗಿದ್ದವರನ್ನು ಕಂಡರೆ ಇವನು ಕಿಡಿಕಿಡಿಯಾಗುತಿದ್ದನು. ಇವನು ಅಪೂರ್ವವಾಗಿ ಹೊರಕ್ಕೆ ಹೊರಟಾಗ, ಇದ್ದ ಬದ್ದ ಒಡವೆಗಳನ್ನೆಲ್ಲಾ ಹೆಂಗಸರಹಾಗೆ ಹೇರಿಕೊಂಡು ನಿರಾಜೀ ಬಟ್ಟೆಗಳನ್ನು ಹಾಕಿಕೊಂಡು ಹುಬ್ಬ ತಿದ್ದಿಸಿಕೊಳ್ಳುವುದೋ, ಕುಡಿಮಿಾಸೆಯನ್ನು ನೆಟ್ಟಗೆ ತಿರುಗಿಸಿ ನಿಲ್ಲಿಸಿಕೊಳ್ಳುವುದೋ, ಕನ್ನಡಿಯನ್ನು ನೋಡುತಾ ಮುಖವನ್ನು ಒರಸಿ ಒರಸಿ ಚುಕ್ಕಿ ಬಟ್ಟನ್ನು ಇಟ್ಟು ಕೊಳ್ಳುವುದೋ, ಎಲೆ ಅಡಕೆಯನ್ನು ಅಗಿಯುತಾ ತನ್ನನ್ನು ಇತರರು ನೋಡುತ್ತಾರೋ ಇಲ್ಲವೋ ಎಂದು ತನ್ನ ದೊಡ್ಡ ದೊಡ್ಡ ಕಣ್ಣು ಗಳನ್ನು ಅತ್ತಿತ್ತ ಗರಗರನೆ ತಿರುಗಿಸಿ ನೋಡು ವುದೋ, ವಿಶೇಷವಾಗಿ ಬೆಳೆದಿರುವ ಹೊಟ್ಟೆಯನ್ನು ಜಗ್ಗು ಹಾಕುತಾ ಕಾಲಮೇಲೆ ಕಾಲ ಹಾಕಿಕೊಂಡು ನಡೆಯುವುದೋ, ಹೀಗೆಲ್ಲಾ ವಯಾ ರದಿಂದ ಬಂದು ಮೇನಾದಲ್ಲಿ ಕೂತು ಹೊರಕ್ಕೆ ಹೊರಡುತ್ತಿದ್ದನು. ಇವನ ಮೇನವನ್ನು ಬೋಯಿಗಳು, ಹೊತ್ತು ಕೊಂಡು “ ಹೈ” “ ಈು” ಎಂದು ತಾವು ವಾಡಿಕೆಯಾಗಿ ಹೇಳುವ ಬೆಸ್ತರ ಸುರ್ಮಾ ಪದವನ್ನು ಹೇಳಿಕೊಂಡು, ಮೇಲೆ ಹೇಳಿದ ಮೇದರವನ ಮನೇ ಮುಂದುಗಡೆ ಹೋಗುತಿದ್ದರು. ಈ ಮೇದರವನು ಎಂದಿನಂತೆ ಸಂತೋಷವಾಗಿ