ಪುಟ:ಸಮತಿ ಮದನಕುಮಾರರ ಚರಿತ್ರ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 (అధ్యాయ ಸುಮತಿ ಮದನಕುಮಾರರ ಚರಿತ್ರೆ ಆದರೆ ಇನ್ನು ಮೇಲಾದರೂ ಜನರ ಯೋಗ್ಯತೆಯನ್ನು ಅರಿತು ಸ್ವಪ್ರ ತಿಷ್ಠೆ ಯನ್ನು ಬಿಟ್ಟು ಎಲ್ಲರಲ್ಲಿಯೂ ದಯಾರಸ ಉಳ್ಳವನಾಗಿ, ನಿನ್ನ ಆಸ್ತಿಯ ನಾಲ್ಕರಲ್ಲಿ ಒಂದು ಭಾಗವನ್ನು ಅವನಿಗೆ ನೀನು ಕೊಡ ತಕ್ಕದ್ದು. ಹೀಗೆಂದು ಅಧಿಕಾರಿಯು ಅಪ್ಪಣೆ ಮಾಡಿದನು. ಇದೆಲ್ಲವನ್ನೂ ಕೇಳಿ, ಆ ಮೇದರವನು--ಸ್ವಾಮಿ ತಾವು ಮಾಡ ಬೇಕೆಂದಿರುವ ಉಪಕಾರಕ್ಕೆ ನಾನು ಕೃತಜ್ಞನಾಗಿದೇನೆ, ನಾನು ಬಡ ತನದಲ್ಲಿಯೇ ಹುಟ್ಟಿ ಬಡತನದಲ್ಲಿಯೇ ಬೆಳೆದೆ ; ಕೆಲಸಮಾಡಿ ನನಗೆ ಅಭ್ಯಾಸವಾಗಿದೆ. ಐಶ್ವರ್ಯವಂತನಾಗಬೇಕೆಂಬ ಇಚ್ಛೆ ನನಗೆ ಇಲ್ಲ. ಅಥವಾ ಐಶ್ವಠ್ಯ ಬಂದರೂ ಅದನ್ನು ಉಪಯೋಗಿಸುವ ಮಾರ್ಗ ನನಗೆ ತಿಳಿಯದು, ನನಗೆ ಬೇಕಾದ್ದೆಲ್ಲಾ ಏನೆಂದರೆ, ನಾನು ಮೊದಲು ಯಾವ ಸ್ಥಿತಿಯಲ್ಲಿದ್ದೆ ನೋ ಅದೇ ಸ್ಥಿತಿಯಲ್ಲಿ ಈ ಹಣಗಾರನು ನನ್ನ ನ್ನು ಇಡಬೇಕು; ಈತನಿಗೆ ಹೆಚ್ಚಾಗಿ ದಯಾರಸವಿರಬೇಕು; ಇಷ್ಟೇ ಹೊರತು ಮತ್ತೇನೂ ಇಲ್ಲ ಎಂದು ಅರಿಕೆ ಮಾಡಿದನು. ಈ ಮೇದರವನ ಧಾರಾಳವಾನ ಮನಸ್ಸನ್ನು ನೋಡಿ ಮಧು ವರ್ಮನಿಗೆ ಅತ್ಯಾಶ್ಚರ್ಯವುಂಟಾಯಿತು, ಅರಸುಮಗನು ತನಗೆ ಬಂದ ಕಷ್ಟದಿಂದ ವಿವೇಕವನ್ನು ಕಲಿತುಕೊಂಡು, ತನ್ನ ಜೀವಮಾನಾವಧಿ ಆ ಮೇದರವನನ್ನು ತನ್ನ ಪರಮಾಪ್ತನಂತೆ ಭಾವಿಸಿ, ತನ್ನ ಐಶ್ವರ್ಯ ನನ್ನೆಲ್ಲಾ ಬಡಬಗ್ಗರ ಕಷ್ಟವನ್ನು ನಿವಾರಣ ಮಾಡುವುದಕ್ಕೆ ಉಪ ಯೋಗಿಸಿದನು. ೪ನೆ ಅಧ್ಯಾಯ ಮೇಲೆ ಹೇಳಿದ ರೀತಿಯಲ್ಲಿ ಸುಮತಿಯು ಕಥೆಯನ್ನು ಓದಿ ಮುಗಿಸಿದನು. ಅದನ್ನು ಮದನಕುಮಾರ ಕೇಳಿ ಬಹಳ ಸಂತೋಷ ಪಟ್ಟು ನಾನು ಆ ಮೇದರವನಾಗಿದ್ದರೆ ದುಷ್ಟನಾದ ಆ ದೊರೇ ಅಳಿಯ