ಪುಟ:ಸಮತಿ ಮದನಕುಮಾರರ ಚರಿತ್ರ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೪೩ ಆದಕಾರಣ ಮದನನು ವಿಶೇಷಾಸಕ್ತಿಯಿಂದ ಓದುವುದಕ್ಕೆ ತೊಡಗಿ ದನು. ತನ್ನ ಜೊತೆಗಾರನಿಗೆ ಓದು ಹೇಳಿಕೊಡುವ ವಿಷಯದಲ್ಲಿ ಸುಮ ತಿಯು ಸ್ವಲ್ಪವೂ ಸಾಲಮಾರಲಿಲ್ಲ, ಇದಕ್ಕೆ ಅನುಗುಣವಾಗಿ ಇವನಲ್ಲಿ ಬೋಧನಾ ಶಕ್ತಿಯೂ ಚೆನ್ನಾಗಿತ್ತು, ಎರಡು ತಿಂಗಳೊಳಗಾಗಿ ಸುಮ ತಿಯ ಶಿಕ್ಷೆಯಲ್ಲಿ ಮದನನು ಕೈಗೆ ಕೊಟ್ಟ ಕಾಗದವನ್ನು ಚೆನ್ನಾಗಿ ಓದುವ ಮಟ್ಟಿಗೆ ಕಲಿತುಕೊಂಡು, ತನ್ನ ಪಾಂಡಿತ್ಯವನ್ನು ರಾಮು ಜೋಯಿಸನ ಮುಂದೆ ತೋರಿಸಿಕೊಳ್ಳ ಬೇಕೆಂದು ನಿಷ್ಕರ್ಷೆ ಮಾಡಿ ಕೊಂಡನು. ಅದೇ ಪ್ರಕಾರ ನಡೆಸಲು ಒಂದು ಸಮಯ ದೊರೆಯಿತು. ಒಂದು ದಿನ ಅವರು ಮೂರು ಜನರೂ ಗುಡಿಲಿನಲ್ಲಿ ಸೇರಿರುವಾಗ್ಗೆ ಕಥೆ ಓದುವುದಕ್ಕೋಸ್ಕರ ರಾಮಜೋಯಿಸನು ಸುಮತಿಯ ಕೈಗೆ ವಹಿ ಯನ್ನು ತೆಗೆದುಕೊಟ್ಟ ನು, ಆಗ ಮದನನು ಎದ್ದು ನಿಂತು- ಜೋಯಿ ಸರೆ ತಮ್ಮ ಅಪ್ಪಣೆಯಾದರೆ ಆ ಕಥೆಯನ್ನು ನಾನು ಓದುತ್ತೇನೆ ಎಂದನು. ಆ ದಕ್ಕೆ ಜೋಯಿಸನು-ಆಹಾ ! ಅಗತ್ಯವಾಗಿ ಆಗಲಿ, ಎಂದು ಹೇಳಿ ಯೇನು ; ಆದರೆ ನನಗೆ ಗೊತ್ತಾಗಿದೆ, ನೀನು ಓದುಗೀಡುವುದು ಸಟಿ; ಬೇಕಾದರೆ ಕೈಲಿರುವ ಪುಸ್ತಕವನ್ನು ಬಿಸಾಟು ಓಡಿಹೋಗುತೀಯೆ ಎಂದನು. ಆ ಮಾತಿಗೆ ರಾಜ ಪುತ್ರನು ನಸುನಕ್ಕು, ಅದನ್ನು ತಾನು ಓದುತ್ತೇನೆಂಬ ನಂಬಿಕೆಯಿಂದ ಪುಸ್ತಕವನ್ನು ಕೈಗೆ ತೆಗೆದುಕೊಂಡು ಓದಿದ್ದು ಹೇಗೆಂದರೆ ಎರಡು ನಾಯಿಗಳ ಕಥೆ ಒಂದಾನೊಂದು ಊರಿನಲ್ಲಿ ತೋಳ ಹುಲಿ ಮೊದಲಾದ ಕಾಡು ಮೃಗಗಳ ಉಪದ್ರವು ಬಹಳವಾಗಿತ್ತು, ಆ ಊರಿನಲ್ಲಿರುವ ಒಬ್ಬ ಬಡ ಒಕ್ಕಲಿಗನು ಎತ್ತರವಾಗಿಯೂ ಧೈರ್ಯವಾಗಿಯೂ ಇರುವ ಎರಡು ನಾಯಿಮರಿಗಳನ್ನು ತಂದು ಸಾಕಿದನು. ಅವುಗಳಲ್ಲಿ ಒಂದಕ್ಕೆ ಸಂಪಗೆ ಎಂತಲೂ ಮತ್ತೊಂದಕ್ಕೆ ಮಲ್ಲಿಗೆ ಎಂತಲೂ ಹೆಸರಿಟ್ಟಿದ್ದನು. ಈ ನಾಯಿಗಳು ನೋಡುವುದಕ್ಕೆ ಸುಂದರವಾಗಿ ಸಮಯದಲ್ಲಿ ಕೆಲಸಕ್ಕೆ ಬರತಕ್ಕವುಗಳಾಗಿದ್ದ ಕಾರಣ, ಆ ಒಕ್ಕಲಿಗನು ಅವುಗಳಲ್ಲಿ ಒಂದನ್ನು