ಪುಟ:ಸಮತಿ ಮದನಕುಮಾರರ ಚರಿತ್ರ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮುದನಕುಮಾರರ ಚರಿತ್ರೆ ೪೫ ಇದರಲ್ಲಿ ಇರಲಿಲ್ಲ, ಇದರ ಒಡೆಯನಾದ ಒಕ್ಕಲಿಗನು ಬಡವನಾದ್ದರಿಂದ ಅದರ ಹೊಟ್ಟೆಗೆ ಎಷ್ಟು ಬೇಕೋ ಅಷ್ಟು ತಿಂಡಿಯನ್ನು ಮಾತ್ರ ಹಾಕು. ತಿದ್ದನು. ಹೆಚ್ಚಾಗಿ ಹಾಕುತಿರಲಿಲ್ಲ. ಮಲ್ಲಿಗೆಯು ಅದನ್ನು ತಿಂದು ಜೀರ್ಣಿಸಿಕೊಳ್ಳುತಿತ್ತು. ಹೆಚ್ಚು ತಿಂಡಿಯನ್ನು ತಿಂದ ಅಭ್ಯಾಸವೇ ಅದಕ್ಕಿರಲಿಲ್ಲ. ತನ್ನ ಜೊತೇ ನಾಯಿಯಹಾಗೆ ಮನೆಯಲ್ಲಿಯೇ ಓಡಿ ಯಾಡಿಕೊಂಡು ಮಡಕೇಹುಲಿಯಾಗಿರದೆ ಯಾವಾಗಲೂ ಒಕ್ಕಲಿಗನ. ಸಂಗಡ ಹೊಲದಲ್ಲಿಯೇ ಓಡಿಯಾಡಿಕೊಂಡಿರುತಾ, ಹೊಟ್ಟೆಗೆ ಸಾಲದೆ ಶ್ರಮಪಡುತಾ, ಅಲ್ಲಿ ಬಿದ್ದು ಇಲ್ಲಿ ಬಿದ್ದು ಗಟ್ಟಿ ರಾಸಾಗಿ, ಬಹಳ ಚಟು ವಟಿಕೆಯುಳ್ಳದ್ದಾಗಿತ್ತು, ಒಕ್ಕಲಿಗನ ಕುರಿಮಂದೆಯನ್ನು ಕಾಡಿನಲ್ಲಿ. ಕಾದುಕೊಂಡಿರುವಾಗ್ಗೆ ತೋಳಗಳ ಸಂಗಡ ಜಗಳಕ್ಕೆ ಹೋಗಿ ಇದಕ್ಕೆ ಅಲ್ಲಲ್ಲಿ ಗಾಯವೂ ಆಗಿತ್ತು, ಹೀಗೆ ಆಗಾಗ್ಗೆ ಕಾದಿಕಾದಿ ಅಭ್ಯಾಸ ವಾಗಿದ್ದ ಕಾರಣ, ಮಲ್ಲಿಗೆಗೆ ಧೈರ್ಯ ಹೆಚ್ಚಿ ಇದು ಯಾತಕ್ಕೂ ಹೆದರದೇ ಇರುತಿತ್ತು, ಇದು ಮುಂದೆ ಕಾಯುವುದಕ್ಕೆ ಮೊದಲುಮಾಡಿದ ಕಾಲ ದಿಂದ ಒಂದು ಕುರಿಯ ಹೋಗದೆ ಎಲ್ಲವೂ ಒಕ್ಕಲಿಗನ ಮನೆಗೆ. ಕ್ಷೇಮವಾಗಿ ಸಾಯಂಕಾಲಕ್ಕೆ ಬಂದು ಸೇರುತಿದ್ದವು. ಯಾವ ತಿಂಡಿ ಎಲ್ಲಿ ಬಿದ್ದಿದ್ದಾಗ್ಯೂ ಅದನ್ನು ಮುಟ್ಟು ತಿರಲಿಲ್ಲ. ಒಕ್ಕಲಿಗನಿಗೆ ಮನೆ. ಯಿಂದ ಅವನ ಹೆಂಡತಿ ಹಿಟ್ಟನ್ನು ತಂದು ಹೊಲದ ಭಾವೀತಡಿಯಲ್ಲಿ. ಇರಿಸಿ ಆಚೆ ಈಚೆ ಹೋದರೆ, ಆ ಹಿಟ್ಟನ್ನು ಕಾಗೆ ಮೊದಲಾಗಿ ಯಾವು. ದೂ ಮುಟ್ಟದಹಾಗೆ ಮಲ್ಲಿಗೆಯು ದೂರಾ ಕೂತು ನೋಡಿಕೊಳ್ಳು ತ್ತೇ ಹೊರತು ಅದನ್ನು ಮುಟ್ಟು ತಿರಲಿಲ್ಲ. ತನ್ನ ಒಡೆಯ ಬಂದಮೇಲೆ. ಅವನು ಆಹಾರವನ್ನು ತಿಂದು ಉಳಿದುದನ್ನು ಇದಕ್ಕೆ ಹಾಕಿದರೆ. ಅದನ್ನು ತಿಂದು ತೃಪ್ತಿಯಾಗುತಿತ್ತು, ಯಾವಾಗಲೂ ಹೊರಗೆ ಇದ್ದು ಗಾಳಿ ಮಳೆಗಳಿಂದ ಬಡಿಸಿಕೊಂಡ ಅಭ್ಯಾಸವಾಗಿದ್ದ ಕಾರಣ, ಯಾವ. ಬಿರುಗಾಳಿಗೂ ಹೆದರದೆ ಕುರಿಯನ್ನು ಕಾಯುತಿತ್ತು, ಎಷ್ಟೇ ಚಳಿ ಯಾಗಿರಲಿ, ನೀರು ಎಷ್ಟೇ ಆಳವಾಗಿರಲಿ ಯಜಮಾನನ ಸನ್ನೆ ನೋಡಿ. ಕೊಂಡು ನೀರಿನೊಳಕ್ಕೆ ಹೋಗಿ ಬೀಳುತಿತ್ತು. ಒಂದಾನೊಂದುದಿನ ಈ ಒಕ್ಕಲಿಗನ ಒಡೆಯನಾದ ಗೌಡನು.