ಪುಟ:ಸಮತಿ ಮದನಕುಮಾರರ ಚರಿತ್ರ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಲ ಸುಮತಿ ಮದನಕುಮಾರರ ಚರಿತ್ರ [ಅಧ್ಯಾಯ. ನೆಗೆ ಒದರುವುದನ್ನು ಕಂಡು, ಕಯನು ಆ ಕಾಲನ್ನು ತಾನು ಹಿಡಿದು ಮೇಲಕ್ಕೆ ಎತ್ತಿ ನೋಡಲಾಗಿ, ಅ೦ಗಾಲಿಗೆ ಬಹು ಗಾತ್ರವಾದ ಕಾರೇ ಮುಳ್ಳು ನಾಟಿಕೊಂಡಿತ್ತು. ಇದರಿಂದ ಆ ಯಾತನೆ ಉ೦ಟಾಗಿರ. ಬಹುದೆಂದು ತಿಳಿದು, ಅಂಗಾಲನ್ನು ಹಿಡಿದು ಎರಡು ಕೈಯಿಂದಲೂ ಗಟ್ಟಿ ಯಾಗಿ ಅದುಮಿದನು; ಆ ಕ್ಷಣವೇ ಮುಳ್ಳು ಚಿತಕ್ಕನೆ ಈಚೆಗೆ ಹೊರಟಿತು. ಅದನ್ನು ಕೈಯಿಂದ ಕಿತ್ತು ಹಾಕಲು, ಸಂಗಡಲೇ ಕೀವೆಲ್ಲಾ ಈಚೆಗೆ ಬಂತು, ಇದರಿಂದ ಯಾತನೆ ಕೊಂಚ ಕಡಮೆಯಾ ಯಿತು, ಆಗ ಸಿಂಹವು ಅವನ ತಲೇ ಮೇಲೆ ತನ್ನ ಬಾಲವನ್ನು ಆಡಿ ಸುತ್ತಾ, ಅವನ ಕತ್ತಿನಮೇಲೆ ತನ್ನ ಕತ್ತನ್ನು ಹಾಕುತ್ತಾ, ಅವನ ಬೆನ್ನಿಗೆ ತನ್ನ ಮೈಯನ್ನು ಹಾಕಿ ಮೆಲ್ಲಗೆ ತಿಕ್ಕುತಾ ಹಲವು ವಿಧ ದಲ್ಲಿಯೂ ತನ್ನ ಕೃತಜ್ಞತೆಯನ್ನು ತೋರಿಸುವ ಸನ್ನೆ ಗಳನ್ನು ಮಾಡಿತು. ಹೀಗೆ ಮೃಗರಾಜನಿಗೂ ಕಯನಿಗೂ ಸ್ನೇಹವಾಯಿತು. ಅದು ಹೊರಗೆ ಹೋದಾಗೆಲ್ಲಾ ಉತ್ತಮವಾದ ಮಾಂಸವನ್ನು ಕಚ್ಚಿ ಕೊಂಡು ಬಂದು ಇವನ ಮುಂದೆ ಹಾಕುತಿತ್ತು, ಆ ಅಡಗನ್ನೂ ಅಲ್ಲಿದ್ದ ಗಿಡಗಳ ಹಣ್ಣು ಗಳನ್ನೂ ತಿಂದು ಅವನು ಜೀವಿಸುತಿದ್ದನು. ಹೀಗೆ ನಾಲ್ಕಾರು ತಿ೦ಗ ಳಾಯಿತು, ಒಂದು ದಿನ ಹಾಗೆಯೇ ಅಲಕ್ಷವಾಗಿ ಕಾಡಿನಲ್ಲಿ ಸುತ್ತಾ ಡುತಾ ಇರುವಾಗ್ಗೆ, ಸಕ್ರೂರನ ಕಡೇ ಆಳುಗಳು ಹೊಂಚುಹಾಕಿ ಕೊಂಡು ಕಾದಿದ್ದು, ಕಯನನ್ನು ಹಿಡಿದು ಯಜಮಾನನ ಹತ್ತಿರಕ್ಕೆ ಕರೆದುಕೊಂಡು ಹೋದರು. ಅಲ್ಲಿ ಜೀತಗಾರನ ಅಪರಾಧಕ್ಕಾಗಿ ವಿಚಾ ರಣೆಯಾಗಿ, ಇವನನ್ನು ಸಿಂಹನ ಬಾಯಿಗೆ ಕೊಡಬೇಕೆಂದು ಹೇಳಿ ದರು. ಚಂಡಾಲರು ಇವನ ಆಯುಧವನ್ನು ಕಿತ್ತುಕೊಂಡು ಕೈ ಕಾಲು ಗಳನ್ನು ಕಟ್ಟಿ ಆ ಘೋರಾರಣ್ಯದಲ್ಲಿ ಸಿಂಹ ಬರುವ ಹೊತ್ತಿಗೆ ಸರಿ ಯಾಗಿ ಕರೆದುಕೊಂಡು ಹೋಗಿಬಿಟ್ಟರು. ಸಿಂಹವು ಜೀವಸಹಿತವಾದ ಮನುಷ್ಯನನ್ನು ತಿನ್ನುವ ನೋಟವು ಬಹು ಚೆನ್ನಾಗಿರಬಹುದೆಂದು ಅನೇಕ ಜನರು ನೆರೆದಿದ್ದರು. ಕಂಠೀರವನು ವಿಪರೀತವಾಗಿ ಆರ್ಭಟ ಸುತಾ ಕತ್ತಿನ ಮೇಲಿನ ಕೂದಲನ್ನು ಕೆದರಿಕೊಂಡು ಕಂಣನ್ನು