ಪುಟ:ಸಮತಿ ಮದನಕುಮಾರರ ಚರಿತ್ರ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಸುಮತಿ ಮದನಕುಮಾರರ ಚರಿತ್ರೆ ಜೋಯಿಸ-ಈ ಸಂಗತಿಯಲ್ಲಿ ಒಂದು ಚಿಕ್ಕ ಕಥೆ ಇದೆ, ಅದನ್ನು ನೀನು ಓದಿದರೆ ಒಳ್ಳೇದು. ಲೋಹಕನ ಕಥೆ ಒಬ್ಬಾನೊಬ್ಬ ದೊರೆಗೆ ಲೋಹಕನೆಂಬ ಮಗ ಇದ್ದನು. ಮಗ ನನ್ನು ದೊಡ್ಡ ವಿದ್ಯಾವಂತನನ್ನಾಗಿ ಮಾಡಿ ದೊರೆತನಕ್ಕೆ ಯೋಗ್ಯ ನಾಗುವಂತೆ ಮಾಡಬೇಕೆಂಬ ಇಷ್ಟದಿಂದ ಘಟಕರಾದ ಉಪಾಧ್ಯಾಯರ ಮೂಲಕ ತಂದೆಯು ಲೋಹಕನನ್ನು ತಯಾರುಮಾಡಿಸುತಿದ್ದನು. ಒಂದು ದಿನ ತಂದೆಯು ಮಗನನ್ನು ಕರೆದು-ಈ ದಿವಸ ನೀನು ಕಲಿತು ಕೊಂಡ ಸಂಗತಿ ಏನು ? ಎಂದು ಕೇಳಿದನು. ಲೋಹಕನು-ಜೀಯಾ, ಒಂದು ವ್ಯಾಜ್ಯವನ್ನು ನಾನು ಅನ್ಯಾಯವಾಗಿ ವ್ಯವಸ್ಥೆ ಮಾಡಿದ್ದಕ್ಕೋ ಸ್ವರ ನಮ್ಮ ಉಪಾಧ್ಯಾಯರು ನನಗೆ ಶಿಕ್ಷೆ ಮಾಡಿದರು, ಎಂದನು. ದೊರೆಯು-ಮಗುವೆ, ಅದು ಹೇಗೆ ? ಎಂದು ಕೇಳಲು ರಾಜಪುತ್ರನು ಹೇಳಿದ್ದೇನೆಂದರೆ :- ಬೀದಿಯಲ್ಲಿ ಇಬ್ಬರು ಹುಡುಗರು ಹೋಗುತಿದ್ದರು. ಅವರಲ್ಲಿ ಒಬ್ಬ ಚಿಕ್ಕ ಹುಡುಗ, ಒಬ್ಬ ದೊಡ್ಡ ಹುಡುಗ, ದೊಡ್ಡ ಹುಡುಗನ ಹತ್ತಿರ ಒಂದು ಚಿಕ್ಕ ಕುಲ್ಲಾ ವಿ ಇತ್ತು ; ಅವನಿಗೆ ಅದು ಅರ್ಧ ತಲೆಗೂ ಸಾಲುತಿ ರಲಿಲ್ಲ. ಚಿಕ್ಕ ಹುಡುಗನ ಹತ್ತಿರ ಒಂದು ದೊಡ್ಡ ಕುಲ್ಲಾ ವಿ ಇತ್ತು ; ಅದು ಅವನ ತಲೆಗೆಲ್ಲಾ ಆಗಿ ಕಣ್ಣು ಸಹಾ ಮುಚ್ಚಿ ಹೋಗುತಿತ್ತು, ಹೀಗಿರುವಲ್ಲಿ ದೊಡ್ಡ ಹುಡುಗನು ಚಿಕ್ಕ ಹುಡುಗನನ್ನು ಕುರಿತು-ನನಗೆ ದೊಡ್ಡ ಕುಲ್ಲಾ ವಿ ಸರಿಯಾಗಿದೆ, ಅದನ್ನು ನನಗೆ ಕೊಡು ; ನಿನಗೆ ಚಿಕ್ಕ ಕುಲ್ಲಾ ವಿ ಸರಿಯಾಗಿದೆ, ಇದನ್ನು ನೀನು ತೆಗೆದುಕೊ, ಎಂದು ಹೇಳಿ ದನು. ಅದಕ್ಕೆ ಚಿಕ್ಕ ಹುಡುಗ ಒಪ್ಪಲಿಲ್ಲ. ತರುವಾಯ ದೊಡ್ಡ ಹುಡುಗನು ಚಿಕ್ಕ ಹುಡುಗನಿಂದ ಬಲವಂತವಾಗಿ ದೊಡ್ಡ ಕುಲ್ಲಾ ವಿ ಯನ್ನು ಕಿತ್ತುಕೊಂಡು ಸಣ್ಣ ಕುಲಾವಿಯನ್ನು ತನ್ನ ಪ್ರತಿಕಕ್ಷಿಯ ಮೇಲೆ ಎಸೆದನು. ಅವರಿಬ್ಬರೂ ಹೀಗೆ ಜಗಳವಾಡುತ್ತಿರುವಾಗ, - ನಾನು ದಾರಿಯಲ್ಲಿ ಹೋಗುತಿದ್ದೆ, ತಮ್ಮ ನ್ಯಾಯವನ್ನು ತೀರಿಸಿ