ಪುಟ:ಸಮತಿ ಮದನಕುಮಾರರ ಚರಿತ್ರ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭! - ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಮುಂಚೆಯೇ ರಾಮಜೋಯಿಸನೂ ಆ ಒಕ್ಕಲಿಗನ ಮನೆಗೆ ಹೋಗಿ, ರೋಗಿಗೆ ಸ್ವಲ್ಪ ಔಷಧವನ್ನು ಕೊಟ್ಟು ಹೊರಟು ಹೋಗಿದ್ದನು. ಆಗ ಮದನನು ತನ್ನ ಪರಿಚಿತನಾದ ಬಡ ಹುಡುಗನನ್ನು ಕರೆದು--ಎಲಪ್ಪಾ, ನೀನು ಹಾಕಿಕೊಳ್ಳುವಂಥಾ ಬಟ್ಟೆ ಯನ್ನು ಈಗ ತಂದು ಇದೇವೆ ; ಇದನ್ನು ನೀನು ಹಾಕಿಕೊಂಡರೆ, “ಮದುವೆಗಂಡು” ಎಂದು ಯಾರೂ ನಿನ್ನ ನ್ನು ಕೂಗಲಾರರು ; ಇದನ್ನು ಹೊದ್ದುಕೊ, ಎಂದು ಅವನಿಗೆ ಒಂದು ಪಂಚೆಯನ್ನು ಕೊಟ್ಟಿದ್ದಲ್ಲದೆ, ಅವನ ಮನೇಜನಕ್ಕೆಲ್ಲಾ ಒಂದೊಂದು ಬಟ್ಟೆಯನ್ನು ಕೊಟ್ಟನು. ಆಗ ಆ ಜನರ ಸಂತೋಷಕ್ಕೆ ಪಾರವೇ ಇಲ್ಲದೇ ಹೋಯಿತು, ಮನೇ ಜನರೆಲ್ಲರೂ ಬಂದು ಮದನನಿಗೂ ಸುಮತಿಗೂ ಅಡ್ಡ ಬಿದ್ದು ತಮ್ಮ ಕೃತಜ್ಞತೆಯನ್ನು ತೋರಿಸಿದರು. ಅವರ ಸಂತೋಷವನ್ನೂ ದೈನ್ಯವನ್ನೂ ನೋಡಿ ಮದನನ ಕಣ್ಣಿನಲ್ಲಿ ಆನಂದಬಾಷ್ಪ ಸುರಿಯಿತು. ಅದೇ ಪ್ರಕಾರ ಸುಮತಿಗೂ ಆಯಿತು. ತರುವಾಯ ಅಲ್ಲಿಂದ ಹಿಂತಿರುಗಿ ಮನೆಗೆ ಬರುತ್ತಾ ಮದನನುಸುಮತಿ ಇಷ್ಟು ಸಂತೋಷ ಉಂಟಾಗುವ ಹಾಗೆ ಹಣವನ್ನು ನಾನು ಯಾವಾಗಲೂ ವೆಚ್ಚ ಮಾಡಲಿಲ್ಲ. ನನಗೆ ಇನ್ನು ಯಾವ ಹಣ ದೊರೆ ತರೂ ಇಂಥಾ ಪರೋಪಕಾರಕ್ಕೋಸ್ಕರವೇ ಕೊಡುತೇನೆಯೇ ಹೊರತು ತಿಂಡೀ ಸಾಮಾನುಗಳಿಗೂ ಆಟದ ಸಾಮಾನುಗಳಿಗೂ ಖರ್ಚು ಮಾಡುವುದಿಲ್ಲ, ಎಂದು ಹೇಳಿದನು. ಆಗ ಅವರಿಬ್ಬರೂ ಮನೆಗೆ ಬಂದರು, ದಾರಿಯಲ್ಲಿ ಸುಮತಿ-ಲೋಕದಲ್ಲಿ ಅವರವರ ಮಟ್ಟಿಗೆ ಅವರವರು ಕೆಲಸಮಾಡದಿದ್ದರೆ ಅನ್ನ ಸಿಕ್ಕುವುದಿಲ್ಲ. ಮದನ -- ಯಾಕೆ ಸಿಕ್ಕುವುದಿಲ್ಲ ? ಧಾನ್ಯ ನೆಲದಲ್ಲಿ ತನ್ನ ಷ್ಟಕ್ಕೆ ತಾನೇ ಬೆಳೆಯುವುದಿಲ್ಲವೆ ? ಸುಮತಿ -- ಧಾನ್ಯವೇನೋ ನೆಲದಲ್ಲಿ ಬೆಳೆಯುವುದು, ಆದರೆ ನೆಲವನ್ನು ಉಳಬೇಕು, ಹಸನುಮಾಡಬೇಕು. ಮದನ- ಉಳುವುದು ಎಂದರೇನು ? ಸುಮತಿ-ಒಂದು ದೊಡ್ಡ ಮರದ ತುಂಡಿಗೆ ನೊಗವನ್ನು ಕಟ್ಟಿರು ವರು, ಅದನ್ನು ಹೊಲಗಳಲ್ಲಿ ಎರಡು ಎತ್ತು ಎಳೆದುಕೊಂಡು ಹೋಗು ವುದನ್ನು ನೋಡಿಲ್ಲವೆ ?