ಪುಟ:ಸಮತಿ ಮದನಕುಮಾರರ ಚರಿತ್ರ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ 2ಅ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಜೋಯಿಸ-ನೀನೇ ಬಿತ್ತಿ ಬೆಳೆದುದನ್ನು ನೀನೇ ತಿನ್ನುವಂಥಾ ಒಳ್ಳೆತನ ನಿನ್ನಲ್ಲಿ ಎಲ್ಲಿತರೋಣ ? ಇತರ ಜನರೇನೋ ಹಾಗೆಯೇ ಮಾಡಿಕೊಂಡಿದಾರೆ. ಹಾಗೆ ಅವರು ಮಾಡದೇ ಇದ್ದರೆ ಹೊಟ್ಟೆಗೆ `ಇಲ್ಲದೇ ಸಾಯಬೇಕಾಗುವುದು. ಮದನ-ಅಂಥಾವರೆಲ್ಲಾ ಏನು ದೊರೆಮಕ್ಕಳೋ ? ಜೋಯಿಸ-ದೊರೆಮಕ್ಕಳು ಇತರರ ಹಾಗೆಯೇ ಅನ್ನಾ ತಿನ್ನು ವುದಿಲ್ಲವೆ ? ಇತರರು ಹೇಗೆ ಅನ್ನಕ್ಕಾಗಿ ಶ್ರಮ ಪಡುತಾರೆಯೋ ಅದನ್ನು ದೊರೆ ಮಕ್ಕಳು ತಿಳಿದುಕೊಳ್ಳತಕ್ಕದ್ದು ಅಗತ್ಯವಲ್ಲವೆ ? ಮದನ-ದೊರೆಮಕ್ಕಳಿಗೆ ಆಳುಗಳಿದಾರೆ ; ಅವರು ಬೆಳೆದು ತಂದುಹಾಕುತ್ತಾರೆ, ನಮಗೋಸ್ಕರ ನಮ್ಮ ಹಳೇಪೈಕದವರು ಕೆಲಸ ಮಾಡುವುದಿಲ್ಲವೆ ? ಜೋಯಿಸ-ಅವರು ನಿಮಗೋಸ್ಕರ ಯಾಕೆ ಕೆಲಸಮಾಡುತ್ತಾರೆ? - ಮದನ - ನಾವು ಅವರಿಗೆ ಕೂಲಿ, ಕಂಬಳಾ ಕೊಡುತೇವೆ ; 'ಅದಕ್ಕೋಸ್ಕರ. ಜೋಯಿಸ-ಅವರಿಗೆ ಕೂಲಿ ಕಂಬಳಾ ಕೊಡಬೇಕಾದರೆ ಮುಂಚಿತವಾಗಿ ಹಣವಿರಬೇಕಷ್ಟೆ ? ಹಣಕ್ಕೆ ಗತಿ ಇಲ್ಲದವರು ತಾವೇ ವ್ಯವಸಾಯಮಾಡಿಕೊಂಡು ಧಾನ್ಯವನ್ನು ಬೆಳೆದುಕೊಳ್ಳಬೇಕಷ್ಟೆ ? ಮದನ-ಹವುದು, ಜೋಯಿಸ-ದೊರೆಮಕ್ಕಳ ಹತ್ತರ ಯಾವಾಗ್ಯೂ ಹಣವಿರು ವುದೊ ? ಮದನ-ಒಂದೊಂದುವೇಳೆ ಇಲ್ಲದೇ ಇರುವುದೂ ಉಂಟು. ಜೋಯಿಸ-ಅ೦ಥಾ ವೇಳೆಯಲ್ಲಿ ಧಾನ್ಯವನ್ನು ಸಂಪಾದಿಸುವುದ ಕ್ಯಾಗಿ ದೊರೆಮಕ್ಕಳು ತಾವೇ ಕೆಲಸಮಾಡಬೇಕಾಗಿ ಬರುತ್ತೆ ಯೋ ಇಲ್ಲವೊ ? ಮದನ-ಹವುದು. ಜೋಯಿಸ-ಇದು ಹಾಗಿರಲಿ, ಮೊನ್ನೆ ನಾನು ಒಂದು ಕಥೆ ಯನ್ನು ಓದಿದೆ, ಬೇಕಾದರೆ ನಿನಗೆ ಅದನ್ನು ಹೇಳುತೇನೆ ಕೇಳು.