ಪುಟ:ಸಮತಿ ಮದನಕುಮಾರರ ಚರಿತ್ರ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಸುಮತಿ ಮದನಕುಮಾರರ ಚರಿತ್ರ [ಅಧ್ಯಾಯ ಪ್ರಾಣವನ್ನು ಕಳೆದುಕೊಳ್ಳು ತೇನೆ ಎಂದು ಮಾರನು ಗೋಳಾಡುತಾ ಆಚೆಗೆ ಹೊರಟನು. ಈ ಸಮಯವನ್ನೆ ನಿರೀಕ್ಷಿಸುತಿದ್ದ ಬೀರಾ ಬೋಯಿಯು ಜಾಗ್ರತೆಯಾಗಿ ಹೋಗಿ ತಮ್ಮನ ಕೈ ಹಿಡಿದುಕೊಂಡು -ತಮ್ಮ, ಈ ಪ್ರಪಂಚವೆಲ್ಲಾ ಹೋದರೂ ಹೋಗಲಿ, ಒಡಹುಟ್ಟಿದ ನೀನೊಬ್ಬ ಚೆನ್ನಾಗಿದ್ದರೆ ಸಾಕು. ನಿನ್ನ ಚಿನ್ನ ನನ್ನೆಲ್ಲಾ ತೆಗೆದುಕೊ ; ನನ್ನ ಸಂಪಾದನೆಯೆಲ್ಲವನ್ನೂ ತೆಗೆದುಕೊ, ನನಗೆ ಏನೂ ಬೇಡ. ನೀನು ಸುಖವಾಗಿದ್ದರೆ ಅದೇ ನನಗೆ ಒಂದು ಕೋಟ, ನಿನಗೆ ಬುದ್ದಿ ಕಲಿಸುವುದಕ್ಕೋಸ್ಕರವೇ ನಾನು ಬೇಕೆಂದು ಹೀಗೆ ಮಾಡಿದೆ. ನಾವು ಎಷ್ಟು ಹಣವನ್ನೂ ಚಿನ್ನ ವನ್ನೂ ಸಂಪಾದಿಸಿದಾಗೂ ನಮಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ಉಪಯೋಗವೇ ಹೊರತು ಬೇರೆ ಇಲ್ಲ. ಶ್ರಮಪಡತಕ್ಕವನಿಗೆ ಇದ್ದ ಕಡೆಯಲ್ಲಿಯೇ ಬೇಕಾದ ಪದಾರ್ಥ ಸಿಕ್ಕುವುದು, ಕೃಷಿಯೇ ಮನುಷ್ಯನಿಗೆ ಮುಖ್ಯವಾದ್ದು. ಈ ಅರ್ಥವನ್ನು ನಿನಗೆ ಚೆನ್ನಾಗಿ ತಿಳಿಸಿದೇನೆ. ಈಗ ನಿನಗೆ ಬುದ್ದಿ ಬಂತೆಂದು ನಂಬಿದ್ದೇನೆ. ಈಗಲಾದರೂ ಇಲ್ಲದ ಆಶೆಯನ್ನು ಬಿಟ್ಟು ಬಿಡು, ಎಂದು ಹೇಳಿದನು. ಮಾರಾಬೋಯಿಯು ಇದನ್ನು ಕೇಳಿ ನಾಚಿಕೊಂಡು ಸುಮ್ಮನಾದನು ; ಮತ್ತು ಅಣ್ಣನ ಔದಾಗ್ಯವನ್ನು ಕಂಡು ಅತ್ಯಾಶ್ಚರ ಪಟ್ಟು, ಅವನಿಗೆ ವಿಶೇಷವಾಗಿ ಕೃತಜ್ಞನಾಗಿರುತ್ತಾ, ಭಂಗಾರದ ಬೆಟ್ಟ ನಿದ್ದರೂ ಸರಿಯೆ, ಕೃಷಿಗಿಂತಲೂ ಅದು ಉತ್ತಮ ವಾದ್ದಲ್ಲವೆಂದು ಅನುಭವದಿಂದ ತಿಳಿದುಕೊಂಡನು. ಅಣ್ಣ ತಮ್ಮಂದಿರಿಬ್ಬರೂ ೩ ದಿವಸ ಅಲ್ಲಿಯೇ ಇದ್ದು ತಮ್ಮ ಊರಿಗೆ ಹೋದರು. ಮಾರನು ತಾನು ತಂದ ಚಿನ್ನದಲ್ಲಿ ಅರ್ಧವನ್ನು ಸ್ವೀಕರಿಸೆಂದು ಎಷ್ಟು ಹೇಳಿಕೊಂಡಾಗ್ಯೂ ಬೀರನು-ಶ್ರಮಪಟ್ಟು ತನ್ನ ಅನ್ನ ವನ್ನು ತಾನು ಬೆಳೆದುಕೊಳ್ಳತಕ್ಕವನಿಗೆ ಚಿನ್ನಕ್ಕೆ ಏನೂ ಕಡಮೆ ಇಲ್ಲ, ನಿನ್ನ ಚಿನ್ನ ನನಗೆ ಬೇಡಲೇಬೇಡ ಎಂದು ಖಂಡಿತವಾಗಿ ಹೇಳಿದನು.