ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮುನ್ನುಡಿ

    ವೈದ್ಯಕೀಯ ಕ್ಷೇತ್ರದಲ್ಲಿ ಈಗ ಆಗಾಧ ಪ್ರಗತಿಯಾಗಿದೆ. ಯಾವುದೇ ಕಾಯಿಲೆಯನ್ನು ಯಶಸ್ವಿಯಾಗಿ ಗುಣಪಡಿಸುವ ಚಿಕಿತ್ಸಾ ವಿಧಾನಗಳಿವೆ. ಸಂಜೀವಿನಯಂತಹ ಮದ್ದುಗಳಿವೆ. ಆದರೆ ನಮ್ಮ ಜನರ ಅಜ್ಞಾನ. ಅಂಧಶ್ರದ್ಧೆ, ಮೂಡನಂಬಿಕೆಗಳು ಕಾಯಿಲೆಗಳು ತೀರಾ ಪ್ರಕೋಪಕ್ಕೆ ಹೋಗುವವರೆಗೂ ವೈದ್ಯಕೀಯ ನೆರವನ್ನು ಪಡೆಯುವುದಕ್ಕೆ ಅಡ್ಡಿಯಾಗುತ್ತಿವೆ. ಕಾಯಿಲೆಗಳ ಬಗ್ಗೆ ಜನರಲ್ಲಿ ಸರಿಯಾದ ಅರಿವು ಮೂಡದಿರುವುದೇ ಈ ವಿಫಲತೆಗೆ ಪ್ರಮುಖ ಕಾರಣವೆಂಬುದರಲ್ಲಿ ಸಂದೇಹವಿಲ್ಲ. ಈ ದಿಸೆಯಲ್ಲಿ ಕಾಯಿಲೆಗಳು ಉದ್ಭವಿಸುವ ರೀತಿ-ನೀತಿಗಳು, ಪ್ರಕಟವಾಗುವ ಲಕ್ಷಣ ಹಾಗೂ ಚಿಕಿತ್ಸಾ ವಿಧಾನಗಳನ್ನು ಜನಸಾಮಾನ್ಯರಿಗೆ ಮನದಟ್ಟಾಗುವ ಹಾಗೆ ತಿಳಿಸುವ ಆರೋಗ್ಯ-ಶಿಕ್ಷಣ ಕಾಯ‌‌‌ಕ್ರಮಗಳು ವ್ಯಾಪಕವಾಗಿ ಜರುಗಬೇಕಾಗಿದೆ. ಅದಕ್ಕಾಗಿ ಕನ್ನಡ ಮತ್ತಿತರ ಪ್ರಾದೇಶಕ ಭಾಷೆಗಳಲ್ಲಿ ಜನಪ್ರಿಯ ವೈದ್ಯಕೀಯ ಸಾಹಿತ್ಯ ಪ್ರಸಾರದ ಅವಶ್ಯಕತೆ ಈಗ ಬಹಳಷ್ಟಿದೆ.
      ಈ ಗುರಿ ಸಾಧನೆಯಲ್ಲಿ ಡಾ: ಎಚ್.ಡಿ.ಚಂದ್ರಪ್ಪಗೌಡರು ಬರೆದಿರುವ "ಸಾಮಾನ್ಯ ಶಸ್ತ್ರ ವೈದ್ಯದ ಕಾಯಿಲೆಗಳು" ಎಂಬ ಪುಸ್ತಕ ಅತ್ಯಂತ ಉಪಯುಕ್ತ ಗ್ರಂಥವಾಗಬಹುದು. ಶಸ್ತ್ರ ಚಿಕಿತ್ಸೆಯಿಂದ ಗುಣಪಡಿಸಬಹುದಾದ ಹಲವಾರು ಕಾಯಿಲೆಗಳ ಗುಣ-ಲಕ್ಷಣ ಮತ್ತು ಚಿಕಿತ್ಸಾ ವಿಧಾನಗಳ ಸರಳ ವಿವರಣೆ ಈ ಪುಸ್ತಕದಲ್ಲಿ ದೊರೆಯುತ್ತದೆ. ಕಲ್ಲೊತ್ತು, ಉಗುರುಸುತ್ತು, ಮಚ್ಚೆಗಳಂತಹ ತೀರಾ ಸಾಮಾನ್ಯ ಪರಿಸ್ಥಿತಿಗಳ ಬಗೆಗೆ ತಿಳುವಳಿಕೆ ಇಲ್ಲಿದೆ. ಹನಿ‌ಯ, ಆಪೆಂಡಿಸೈಟಿಸ್, ಸಿಸೇರಿಯನ್ ಸೆಕ್ಷನ್ನ್ ಗಳಂತಹ ಪ್ರತಿದಿನ ಜರುಗುವ ಶಸ್ತ್ರ ಚಿಕಿತ್ಸೆಗಳ ಬಗೆಗೆ ಸಾಕಷ್ಟು ವಿವಣೆಗಳಿವೆ. ಬದಲಿ ಮೂತ್ರ ಪಿಂಟ ನಾಡಿ ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್ ಗಳಂತಹ ಜಟಿಲ ಸಮಸ್ಯೆಗಳ ಬಗೆಗೆ ಉಪಯುಕ್ತ ಮಾಹಿತಿಗಳಿವೆ. ಗಂಟಲಲ್ಲಿ ಆಹಾರದ ತುಣುಕು ಸಿಕ್ಕಿ ಉಸಿರು ಕಟ್ಟಿದವರನ್ನು ಬದುಕಿಸುವ ಆಧುನಿಕ ಕೈಚಳಕದ ವಿವರಣೆ ಇರುವಂತೆಯೇ ಉದರಬೇನೆಯಾದವರಿಗೆ ಭಟ್ಟಿ ಜಾರಿದೆಯೆಂಬ ಮೂಢನಂಬಿಕೆಯಿಂದ ಹೊಟ್ಟೆಯನ್ನು ಉಜ್ಜಿ ಭಟ್ಟಿ ಕಟ್ಟುವಂತಹ ಪುರಾತನ ಕಾಲದ ಪದ್ದತಿಯಿಂದಾಗುವ ಅನಾಹುತಗಳ ಬಗೆಗೂ ಇಲ್ಲಿ ಎಚ್ಚರಿಕೆಯ ಮಾತುಗಳಿವೆ.
   
    ಶಸ್ತ್ರ ವೈದ್ಯದ ಕಾಯಿಲೆಗಳ ವಿವರಣೆಯನ್ನು ಆರಂಭಿಸುವ ಮೊದಲ ಶಸ್ತ್ರ ಚಿಕಿತ್ಸಾ ಪದ್ದತಿಯ ಸಂಕ್ಷಿಪ್ತ ಇತಿಹಾಸ, ಅದಕ್ಕೆ ಭಾರತೀಯರ ಕೊಡುಗೆ, ಹಾಗೂ ಆಧುನಿಕ ಶಸ್ತ್ರ ವೈದ್ಯದ ಸಾಧನೆಗಳ ಬಗೆಗೆ ಪ್ರಸ್ತಾಪವಿದೆ. ಶಸ್ತ್ರ ಚಿಕಿತ್ಸಾ ಕೊಠಡಿ,