ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು


                                                      ೯. ಗಾಯ್ಟರ್ 
                            ನಮ್ಮ ದೇಹದಲ್ಲಿ  ಆಹಾರದ ಪಚನ  ಕ್ರಿಯೆ, ರಕ್ತ  ಪರಿಚಲನೆ,   ಉಸಿರಾಟ, 
                       ಮೂತ್ರ  ವಿಸರ್ಜನೆ  ಮುಂತಾದ  ಕಾರ್ಯಗಳನ್ನು  ನಿರ್ವಹಿಸಲು  ವ್ಯವಸ್ಥಿತ  ಅಂಗಗಳ 
                       ಜಾಲಗಳಿವೆ.  ಅವುಗಳ   ಕಾರ್ಯಗಳಲ್ಲಿ   ಸಹಾಯ   ಮಾಡಲು   ಜೊಲ್ಲು   ಸುರಿಸುವ 
                       ಗ್ರಂಥಿಗಳು,  ಯಕೃತ್ತು   ಮೇದೋಜೀರಕ   ಗ್ರಂಥಿ  ಮುಂತಾದವುಗಳಿವೆ.  ಅವುಗಳಲ್ಲಿ  
                       ಉತ್ಪಾದನೆಯಾಗುವ   ರಸಗಳನ್ನು   ಸಾಗಿಸಲು   ಪ್ರತ್ಯೇಕವಾದ   ನಾಳಗಳಿರುತ್ತವೆ. 
                       ಇವುಗಳಲ್ಲದೆ   ದೇಹದ    ಒಂದಕ್ಕೊಂದು    ಸಂಬಂಧವಿಲ್ಲದ    ಪ್ರದೇಶಗಳಲ್ಲಿ  
                       ಹರಡಿಕೊಂಡಿರುವ  ಇನ್ನೊಂದು  ತರಹೆಯ  ಗ್ರಂಥಿಗಳ  ಜಾಲವೇ  ಇದೆ. ಅವುಗಳಲ್ಲಿ 
                       ಸ್ರವಿಸುವ   ರಸಗಳನ್ನು   ಸಾಗಿಸಲು   ನಾಳಗಳ   ವ್ಯವಸ್ಥೆಯಿರುವುದಿಲ್ಲ ,  ಅಲ್ಲಿಯ 
                       ರಸಗಳ  ಉತ್ಪಾದನೆಯಾದಂತೆಲ್ಲಾ  ರಕ್ತ   ಪ್ರವಾಹದಲ್ಲಿ   ಸೇರಿಕೊಂಡು   ದೇಹದ 
                       ಎಲ್ಲಾ  ಭಾಗಗಳನ್ನೂ   ತಲುಪುತ್ತವೆ.   ನಿರ್ನಾಳ ಗ್ರಂಥಿಗಳೆಂದು    ಹೆಸರಾಗಿರುವ,
                       ಕಂಡೂ   ಕಾಣದಂತಿರುವ    ಈ     ಅವಯವಗಳು    ಶರೀರದ    ಬೆಳವಣಿಗೆ,
                       ಜೀವದ್ರವಿಯೇಕರಣ,ಬೌದ್ಧಿಕ  ಬೆಳವಣಿಗೆ,ಲೈಂಗಿಕ  ಪ್ರವೃತ್ತಿ  ಮುಂತಾದ  ಹಲವಾರು
                       ಜೀವಾಳ  ಸದೃಶ  ಕಾರ್ಯಗಳ   ಪ್ರಚೋದನೆಯ   ಕೀಲಿಕೈಗಳಾಗಿವೆ.   ಸಾಮಾನ್ಯ 
                       ಆರೋಗ್ಯದ    ಸ್ಥಿತಿಯಲ್ಲಿ   ಅವುಗಳ   ಇರುವ   ನಮ್ಮ  ಗಮನಕ್ಕೆ  ಬಂದಿರಲಾರದು.
                       ಆದರೆ   ಅವುಗಳಿಂದ   ಉತ್ಪಾದನೆಯಾಗುವ   ರಸದೂತ   ಅಥವಾ  ಚೋದನಿಗಳ 
                       [ಹಾರ್ವೂನು]   ಕೊರತೆ   ಇಲ್ಲವೆ   ಅತಿವರ್ತನೆಗಳಿಂದ   ಉದ್ಭವಿಸುವ   ತೊಡಕು
                       ಬೃಹದಾಕಾರವಾಗಿ    ಗೋಚರಿಸುತ್ತವೆ   ;   ವ್ಯಕ್ತಿಯ     ಜೀವನವನ್ನೇ  
                       ಅಸ್ತವ್ಯಸ್ತಗೊಳಿಸುತ್ತವೆ.   ಮಿದುಳಿನ  ತಳಭಾಗದಲ್ಲಿರುವ ಪಿಟ್ಯುಟರಿ,  ಕತ್ತಿನ 
                       ಮುಂಭಾಗದಲ್ಲಿರುವ  ಥೈರಾಯಿಡ್,  ಅದರ  ಹಿಂದೆ  ಅಂಟಿಕೊಂಡಿರುವ  ಪ್ಯಾರಾ- 
                       ಥೈರಾಯಿಡ್ ಗಳು, ಮೂತ್ರ  ಪಿಂಡಗಳಲ್ಲಿರುವ  ಅಡ್ರಿನಲ್ಸ್, ಮುಂತಾದವು ನಿರ್ನಾಳ 
                        ಗ್ರಂಥಿಗಳ  ಗುಂಪಿಗೆ ಸೇರುತ್ತದೆ.
                               ಕತ್ತಿನ  ಮುಂಭಾಗದಲ್ಲಿ   ನೆಲೆಯಾಗಿರುವ   ಥೈರಾಯಿಡ್   ಗ್ರಂಥಿ   ನಮ್ಮ  
                        ಸರ್ವತೋಮುಖ    ಬೆಳವಣಿಗೆಯಲ್ಲಿ    ಪ್ರಮುಖ    ಪಾತ್ರವಹಿಸುತ್ತದೆ.  ಅದರ
                        ಕಾರ್ಯ ಕ್ಷಮತೆಯಲ್ಲಿ   ವ್ಯತ್ಯಾಸಗಳಾದಾಗ  ಉದ್ಭವಿಸುವ  ಕೆಲವು  ಪರಿಸ್ಥಿತಿಗಳಿಗೆ