ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

 ಹೀಗೊಂದು ವಿಲೋಮ ಸಂಬಂಧವಿದೆ. ಅಯೋಡೀನ್ ಕೊರತೆ ಇದ್ದಾಗಲೂ
 ಟಿ.ಎಫ಼್.ಆರ್.ಹೆಚ್ಚು ಹೆಚ್ಚು ಥೈರಾಕ್ಸಿನ್ ನನ್ನು ಉತ್ಪಾದಿಸುವಂತೆ ಥೈರಾಯಿಡ್ ಗೆ
 ಪ್ರಚೋದನೆ ನೀಡುತ್ತಲೇ ಇರುತ್ತದೆ. ಈ ಪ್ರಚೋದನೆಗೆ ಸ್ಪಂದಿಸಲು ಥೈರಾಯಿಡ್ ನ
 ಜೀವಕೋಶಗಳು ದ್ವಿಗುಣ,ತ್ರಿಗುಣವಾಗಿ ಹಿರಿದಾಗುವುದರ ಮೂಲಕ ಸಜ್ಜಾಗುತ್ತವೆ.
 ಆದರೆ ಅಯೋಡೀನ್ ಕೊರತೆಯಿರುವುದರಿಂದ ಥೈರಾಕ್ಸಿನ್ ಹೆಚ್ಚಿನ ಪ್ರಮಾಣದಲ್ಲಿ
 ಉತ್ಪಾದನೆಯಾಗುವುದಿಲ್ಲ. ಆದ್ದರಿಂದ ಥೈರಾಯಿಡ್ ಮಾತ್ರ ಊದಿಕೊಂಡು
 ತನ್ನ ಇರುವನ್ನು ಪ್ರಕಟಿಸುವಂತಾಗುತ್ತದೆ.ಇದನ್ನೇ "ಗಾಯ್ಟರ್" ಅಥವಾ "ಗಳಗಂಡ"
 ರೋಗವೆನ್ನುತ್ತೇವೆ.ಅಯೋಡೀನ್ ಕೊರತೆಯೇ ಅಲ್ಲದೆ,ಕೆಲ ಸಂದರ್ಭಗಳಲ್ಲಿ
 ಥೈರಾಯಿಡ್ ಗ್ರಂಥಿಯ ಕಾರ್ಯವಿಧಾನದಲ್ಲಿ ಅಸ್ತವ್ಯಸ್ತೆಯುಂಟಾದಾಗ ಹೆಚ್ಚು
 ಥೈರಾಕ್ಸಿನ್ ಸ್ರವಿಸುವುದರಿಂದಲೂ ಥೈರಾಯಿಡ್ ಊದಿಕೊಂಡು ಗಾಯ್ಟರ್
 ಪ್ರಕಟವಾಗುವುದುಂಟು.
        ಬಾಲ್ಯಾವಸ್ಥೆಯಲ್ಲಿ ಅಯೋಡೀನ್ ಕೊರತೆಯಾಗಿದ್ದರೆ ಮಕ್ಕಳ ಬೆಳವಣಿಗೆ
 ಬಹಳಷ್ಟು ಕುಂಠಿತವಾಗಿ, ಹೆಡ್ಡಗುಜ್ಜರಾಗುತ್ತಾರೆ (cretin); ವಯಸ್ಕರಲ್ಲಿ
 ಅದರ ಕೊರತೆಯಾದರೆ ಮೈಕೈ ಊದಿಕೊಂಡು ಮಂದ ಬುದ್ದಿಯ 'ಮಿಕ್ಸಿಡೀಮಾ'
 (ಲೋಳುಬ್ಬರ) ಎಂಬ ಪರಸ್ಥಿತಿಯುಂಟಾಗುತ್ತದೆ. ಥೈರಾಯಿಡ್ ನ ಕಾರ್ಯವಿಧಾನ
 ಅಸ್ತವ್ಯಸ್ತಗೊಂಡು ಥೈರಾಕ್ಸಿನ್ ಹೆಚ್ಚು ಉತ್ಪಾದನೆಯಾದಾಗಲೂ ಥೈರಾಯಿಡ್
 ಊದಿಕೊಂಡು "ವಿಷಮ-ಗಾಯ್ಟರ್" (Toxic Goitre) ಪ್ರಕಟವಾಗುತ್ತದೆ.
         ದೇಹದ ಬಹುಪಾಲು ಕಾರ್ಯಚಟುವಟಿಕೆಗಳಿಗೆ ಸೂತ್ರಧಾರಿಯಂತಿರುವ
 ಥೈರಾಕ್ಸಿನ್ ಚೋದನೀಯ ಉತ್ಪಾದನೆ ದಿನ ಒಂದಕ್ಕೆ ಕೇವಲ ೧೦೦-೨೦೦
 ಮೈಕ್ರೊಗ್ರಾಂ (M=0,00000೧,ಮಿಲಿಯನ್ ನಲ್ಲಿ ಒಂದು ಭಾಗ).ಕೇವಲ
 ಒಂದು ಗೋಧಿ ಕಾಳಿನಷ್ಟು ಅಯೋಡೀನ್ ಒಂದು ವರ್ಷಕ್ಕೆ ಸಾಕಾಗುತ್ತದೆ!
 ಥೈರಾಯಿಡ್ ಗ್ರಂಥಿಯ ಊತಗಳು (ಚಿತ್ರ ೧೨)
         ಥೈರಾಯಿಡ್ ಗ್ರಂಥಿಯ ಎಲ್ಲಾ ತೆರನ ಊತಗಳನ್ನು ಸಾರಾಸಗಟಾಗಿ
 "ಗಾಯ್ಟರ್"(ಗಳಗಂಡ) ಎಂದು ಕರೆಯಲಾಗುತ್ತದೆ. ಥೈರಾಯಿಡ್
 ಊದಿಕೊಳ್ಳುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಸೇವಿಸುವ ನೀರು ಮತ್ತು
 ಆಹಾರ ಪದಾರ್ಥಗಳಲ್ಲಿ ಅಯೋಡೀನ್ ನ ಕೊರತೆ ಇರುವುದು ಒಂದು
 ಕಾರಣವಾದರೆ,ವ್ಯಕ್ತಿಯಲಾಗುವ ಕೆಲವು ಜೈವಿಕ ಬದಲಾವಣೆಗಳಿಂದ ಥೈರಾಕ್ಸಿನ್ ನ
 ಬೇಡಿಕೆ ಜಾಸ್ತಿಯಾಗುವ ಇನ್ನೊಂದು ಕಾರಣವಾಗಬಹುದು.ಅಪರೂಪಕ್ಕೆ