ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೮೮ ಸಾಮನ್ಯ ಶಸ್ತ್ರವೈದ್ಯದ ಕಾಯಿಲೆಗಳು
ವಿಷಮ ರೀತಿಯ ಗಾಯ್ಟರ್‍ಗೇ ಈಗ ಮೂರು ತೆರನ ಚಿಕಿತ್ಸಾ ವಿಧಾನಗಳು ಪ್ರಚಾರದಲ್ಲಿವೆ. ಥೈರಾಯಿಡ್ ವಿರುದ್ಧ ಕೆಲಸ ಮಾಡುವ ಮದ್ದುಗಳ (Anti Thyroid Drugs) ಬಳಕೆ, ಈ ವ್ಯಾಧಿಯ ಚಿಹ್ನೆಗಳನ್ನು ಬಹಳಷ್ಟು ಹತೋಟಿಯಲ್ಲಿಡಲು ಸಹಾಯಕವಾಗುತ್ತವೆ. ಅದೇ ರೀತಿ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಮದ್ದುಗಳನ್ನು ಬಳಸುವುದರಿಂದ ಈ ವ್ಯಾಧಿಯ ದುಷ್ಪರಿಣಾಮಗಳನ್ನು ಹಂಗಾಮಿಯಾಗಿಯಾದರೂ ಹತೋಟಿಯಲ್ಲಿರಿಸಲು ಸಾಧ್ಯ. ಈ ಎರಡೂ ವಿದಧ ಮದ್ದುಗಳ ಮುಂದುವರಿದ ಬಳಕೆಯಿಂದ ವಿಷಮ ರೀತಿಯ ಗಾಯ್ಟರ್‍ನ ಚಿಹ್ನೆಗಳನ್ನು ಬಹಳ ಸಮಯ ಹದ್ದು ಬಸ್ತಿನಲ್ಲಿಡಬಹುದು. ವಿಕಿರಣ ಪಟುತ್ವವಿರುವ ಅಯೋಡೀನ್‍ನನ್ನು ಗಾಯ್ಟರ್‍ನ ಪರಿಸ್ಥಿತಿಗನುಸಾರ ಲೆಕ್ಕಾಚಾರ ಹಾಕಿ ನೀಡುವುದರಿಂದ ವಿಷಮ ರೀತಿಯ ಗಾಯ್ಟರನ್ನು ಸಂಪೂರ್ಣ ಯಶಸ್ವಿಯಾಗಿ ಚಿಕಿತ್ಸೆ ಮಾಡಬಹುದು. ಅದರ ಹೆಚ್ಚಿನ ಬಳಕೆಯಿಂದ ಥೈರಾಯಿಡ್ ಗ್ರಂಥಿಯಲ್ಲಿ ಕ್ಯಾನ್ಸರ್ ಬದಲಾವಣೆಯಾಗುವ ಸಾಧ್ಯತೆಗಳಿರುವುದರಿಂದ ಅತ್ಯಂತ ಎಚ್ಚರಿಕೆಯಿಂದ ಉಪಯೋಗಿಸಬೇಕಾಗುತ್ತದೆ. ವಿಷಮ ರೀತಿಯ ಗಾಯ್ಟರ್‍ನ ಯಶಸ್ವೀ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆಗೆ ಮಹತ್ವದ ಪಾತ್ರವಿದೆ. ಈ ಚಿಕಿತ್ಸೆಗೆ ಪೂರ್ವ ಭಾವಿಯಾಗಿ ಮಿದುಳು, ಹೃದಯ ಮುಂತಾದ ಅವಯವಗಳಲ್ಲಾದ ವಿಷಮ ಪರಿಣಾಮಗಳನ್ನು ಸಹಜ ಸ್ಥಿತಿಗೆ ತರಲು ಕೆಲಕಾಲ ವಿಶೇಷ ತರಹೆಯ ಮದ್ದುಗಳನ್ನು ನೀಡಬೇಕಾಗುತ್ತದೆ. ಶಸ್ತ್ರಚಿಕಿತ್ಸಾ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವ ಸಾಧ್ಯತೆಗಳಿರುವುದರಿಂದ ರಕ್ತ ಪೂರಣೆಯ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು. ಪೂರ್ಣ ಜ್ಞಾನ ತಪ್ಪಿಸುವ ಅರಿವಳಿಕೆ ಅನಿವಾರ್ಯ. ಊದಿಕೊಂಡ ಥೈರಾಯಿಡ್ ಗ್ರಂಥಿಯೇ ಅಲ್ಲದೆ ಉಳಿದುದರಲ್ಲಿ ಮುಕ್ಕಾಲು ಭಾಗ ಥೈರಾಯಿಡ್‍ನ ಭಾಗವನ್ನೂ ಶಸ್ತ್ರಚಿಕಿತ್ಸಾ ಸಮಯದಲ್ಲಿ ತೆಗೆದು ಹಾಕುವುದು ವಾಡಿಕೆ. ಥೈರಾಕ್ಸಿನ್ ಹೆಚ್ಚು ಪ್ರಮಾಣದಲ್ಲಿ ಸ್ರವಿಸಲು ಅವಕಾಶ ನೀಡದಿರುವುದೇ ಇದರ ಉದ್ದೇಶ. ಎಷ್ಟು ಭಾಗ ಥೈರಾಯಿಡ್ ತೆಗೆದು ಹಾಕಬೇಕೆಂಬ ಅಂದಾಜಿನಲ್ಲಿ ತಪ್ಪಾಗಿ, ಬಹಳಷ್ಟು ಉಳಿದುಕೊಂಡಿದ್ದರೆ ಮತ್ತೆ ವಿಷಮ ಸ್ಥಿತಿ ಮರುಕಳಿಸಬಹುದು; ಅದನ್ನು ಬಹಳ ಹೆಚ್ಚಾಗಿ ತೆಗೆದಿದ್ದರೆ ಥೈರಾಕ್ಸಿನ್ ಕೊರತೆಯಿಂದ ಮಿಕ್ಸಿಡಿಮಾ ತಲೆದೋರಬಹುದು. ಶಸ್ತ್ರವೈದ್ಯರ ಅನುಭವ ಈ ದಿಸೆಯಲ್ಲಿ ನಿರ್ಣಾಯಕವಾಗಬಹುದು. ಆಹಾರ ಮತ್ತು ನೀರಿನಲ್ಲಿ ಅಯೋಡಿನ್‍ನ ಗಮನಾರ್ಹ ಕೊರತೆ ಇರುವ