ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ಸಾಮಾನ್ಯ ಶಸ್ತ್ರವ್ಯೆದ್ಯದ ಕಾಯಿಲೆಗಳು



೧೦. ಜೀರ್ಣಾಂಗಗಳ ರಚನೆ ಮತ್ತು ಕಾರ್ಯವಿಧಾನ ಜೀವ ಜಂತುಗಳ ಬೆಳವಣಿಗೆ ಮತ್ತು ಕಾರ್ಯ ಚಟುವಟಿಕೆಗಳೆಗೆ ಆಹಾರ ಪದಾರ್ಥಗಳ ಸೇವನೆ ಅವಶ್ಯಕ.ಅಮೀಬಾದಂಥ ತೀರಾ ಕೆಳಸ್ತರದ ಏಕಕೋಶ ಜೀವ ತನ್ನ ಸುತ್ತಲ ಪರಿಸರದಲ್ಲಿರುವ ಆಹಾರಾಂಶಗಳನ್ನು ಹೀರಿಕೊಂಡು ಜೀವಿಸಬಲ್ಲುದು. ಆದರೆ ಜೀವವಿಕಾಸದಲ್ಲಿ ಅತ್ಯಂತ ಸಂಕೀರ್ಣ ಅಂಗರಚನೆ ಹಾಗು ಜೀವನ ಕ್ರಮದ ಮಟ್ಟವನು ತಲುಪಿದ ಮಾನವ ಮತ್ತಿತರ ಪ್ರಾಣಿವರ್ಗಗಳ ಆಹಾರ ವಸ್ತುಗಳ ವೈವಿಧ್ಯಮಯವಾಗುವುದು ಅನಿವಾರ್ಯವಾಯಿತು. ಅವುಗಳ ಜೀವನದ ನಾನಾ ಅವಶ್ಯಕಥೆಗಳಿಗನುವಾಗಿ ಹಲವು ತೆರನ ಸಂಕೀರ್ಣ ಹಾಗು ಸಂಯುಕ್ತ ಆಹಾರಾಂಶಗಳಿರುವ ಸಾಮಗ್ರಿಗಳನ್ನು ಸೇವಿಸಬೇಕಾಗುತದೆ. ಅವು ಜೀರ್ಣಾಂಗಗಳಲ್ಲಿ ಕರಗಿ, ಜೀರ್ಣವಾಗಿ ಪೌಷ್ಟಿಕ ಹಾಗು ಶಕ್ತಿಜನಕ ಅಂಶಗಳು ರಕ್ತಗತವಾಗಿ ಜೀವಿಗಳ ಬೆಳವಣಿಗೆ ಮತ್ತು ಕಾರ್ಯ ಚಟುವಟಿಕೆ ಸಹಾಯವಾಗುವಂತಹ ಸ್ಥಿತಿಗೆ ಪರಿವರ್ತನೆಯಾಗುವುದು ಸಹ ಅತ್ಯಂತ ಜಟ್ಟಿಲ ಕಾರ್ಯಕ್ರಮವೇ ಸರಿ ,ಪ್ರತಿದಿನ ನಾವು ಸೇವಿಸುವ ದವಸ -ಧಾನ್ಯ ಹಣ್ಣು ತರಕಾರಿ ,ಮಾಂಸ ,ಮಿನುಗಳಂಥ ಕಚ್ಚಾ ಪದಾರ್ಥಗಳು ಜೀರ್ಣಾಂಗಗಳಲ್ಲಿ ಪಚನವಾಗಿ ಶರೀರದ ಅವಶ್ಯ ಕ್ರಿಯೆಗಳಿಗೆ ಅನುಕೂಲವಾಗುವಂತಹ ಸಕ್ಕರೆ , ಸಸಾರಜನಕ ,ಕೊಬ್ಬು ,ಜೀವಸತ್ವ ,ಖನಿಜಾಂಶವಾಗಿ ಮಾರ್ಪಾಡಾಗುವ ಕಾರ್ಯ ವಿಧಾನಗಳು ಪ್ರಕೃತಿಯ ಅತ್ಯಂತ ಸೋಜಿಗದ ಸಂಗತಿಗಳಾಗಿವೆಯಂದರೆ ಅತಿಶಯೋಕ್ತಿಯಲ್ಲಿ .ಈ ಕಾರ್ಯ ಸಾಧನೆಗಾಗಿ ನಮಲ್ಲಿ ವಿಶಾಲ ಹರವಿನ , ವಿವಿಧ ರೀತಿಯ ಜೀರ್ಣಾಂಗಗಳ ಜಾಲವೇ ಏರ್ಪಟ್ಟಿದೆ

ಬಾಯಿಯಿಂದ ಆರಂಭವಾಗುವ ಜೀರ್ಣಾಂಗ ವ್ಯವಸ್ಥೆಯ ಒಂದು 

ಉದ್ದನೆಯ ನಾಳದಂತಿದ್ದು ಕಡೆಯದಾಗಿ ಕುಂಡೆಯಲ್ಲಿ ಗುದದ್ವಾರವಾಗಿ ಅಂತಿಮವಾಗುತದೆ .ಆಹಾರ ವಸ್ತುಗಳನ್ನು ಸ್ವೀಕರಿಸೆ ,ಅದನ್ನು ಅಗಿದು ಪುಡಿ ಮಾಡಿ ಜೊಲ್ಲು ರಸದೊಂದಿಗೆ ಮಿಶ್ರಣವಾಗುವ ಕಾರ್ಯ ಬಾಯಲ್ಲಿ ಜರಗುತದೆ . ನುಂಗುವ ಕ್ರಿಯೆಯಿಂದ ಈ ಮಿಶ್ರಣ ಎದೆಗೂಡಿನಲ್ಲಿ ಕಾಳಜಿಲಿಯುವ ಅನ್ನನಾಳದ ಮೂಲಕ ಹೊಟ್ಟೆಯ ಮೇಲ್ಬಾಗವನ್ನು ಸೇರುತದೆ .ಅಲ್ಲಿ ಅದು ಜಠರವಾಗಿ