ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಸಾಮಾನ್ಯ ಶಸ್ತ್ರವ್ಯೆದ್ಯದ ಕಾಯಿಲೆಗಳು

ಮತ್ತು ಸಣ್ಣಕರುಳಿನ ಆದಿಭಾಗವನ್ನು(ಬರಿಗರುಳು) ಜೋಡಿಸಿ ಹೊಲಿದು ಅವೆರಡರ ನಡುವೆ ತೂತುಮಾಡಿ ಸಂಪಕ೯ 
ಕಲ್ಪಿಸುವ ವಿಧಾನ(Vagotomy and Gastrojejunostomy) ಜಾರಿಗೆ ಬಂದಿತು.ಇದಕ್ಕೆ ಪಯಾ೯ಯವಾಗಿ ಜಠರಾಶಯವನ್ನು ಉದ್ದವಾಗಿ ಕತ್ತರಿಸಿ,ಅದನ್ನೇ ತಿರುಗಿ ಅಡ್ಡಲಾಗಿ ಹೊಲಿಯುವುದರಿಂದ(ಪೈಲೋರೋ ಪ್ಲಾಸ್ಟಿ) ಅದರ

ದ್ವಾರ ಅಗಲವಾಗಿ ಚಲನೆಗೆ ಅಡಚಣೆ ಕಡಿಮೆಯಾಗುವುದರಿದ ಈ ವಿಧಾನವನ್ನೂ ಕೆಲಸಾರಿ ಅನುಸರಿಲಾಗುತ್ತಿದೆ. ವೇಗಸ್ ನರಗಳ ಬುಡಗಳನ್ನು ಕತ್ತರಿಸುವುದರಿಂದ, ಆ ನರಗಳಿಂದ ಯಕೃತ್ತು ಮತ್ತು ಸಣ್ಣಕರುಳಿಗೆ ಸಂಪಕ೯ ಕಲ್ಪಿಸುವ ಕವಲುಗಳನ್ನೂ ಕತ್ತರಿಸಿದಂತಾಗುತ್ತಿತ್ತು.ಇದರಿಂದ ಯಕೃತ್ತು ಮತ್ತು ಸಣ್ಣಕರುಳಗಳ ಕಾಯ೯ದಕ್ಷತೆಯಲ್ಲಿ ಏರುಪೇರುಗಳಾತ್ತಿದ್ದವು. ಈ ತೊಡಕುಗಳನ್ನು ನಿವಾರಿಸಲು,ಹಂತ ಹಂತವಾಗಿ ನಡೆಸಿದ ಪ್ರಯೋಗಗಳ ಪ್ರತಿಫಲಗಳ ಅನುಭವದಿಂದ ಜಠರದಲ್ಲಿ ನರಗಳ ಕವಲುಗಳನ್ನು ಮಾತ್ರ ಕತ್ತರಿಸುವ ಹಲವು ವಿಧಾನಗಳು ಈಗ ಪ್ರಚಾರದಲ್ಲಿವೆ. ಇವುಗಳಿಂದ ಹಿಂದಿನ ಚಿಕಿತ್ಸಾ ವಿಧಾನಗಳಿಗಿಂತಲೂ ಉತ್ತಮ ಫಲಿತಾಂಶಗಳುಂಟಾಗುತ್ತಿವೆ.(ಚಿತ್ರ ೧೭)