ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಿಕೆ

               ಸಾಹಿತ್ಯಾಭ್ಯಾಸದಲ್ಲಿ ನನಗೆ ಮೊದಲಿನಿಂದಲೂ ಆಸಕ್ತಿ ಇದ್ದರೂ ಸ್ವತಃ ಬರವಣಿಗೆ ಹವ್ಯಾಸಕ್ಕಿಳಿದದ್ದು ಕಳೆದ ಒಂದು ದಶಕದಿಂದೀಚೆಗೆ.ಕಾಯಿಲೆಗಳ ಬಗೆಗೆ ನಮ್ಮ ಜನರಲ್ಲಿರುವ ಅಜ್ಞಾನ ಮತ್ತು ಅದರಿಂದಾಗುತ್ತಿರುವ ಅನಾಹತಗಳೇ ಈ ಬಗೆಗೆ ಪ್ರಚೋದನೆ ನೀಡಿದವು.ಕಜ್ಜಿಯಂತಹ ಸರಳ ಸಾಂಕ್ರಮಿಕ ವ್ಯಾಧಿಯನ್ನು ಕೇವಲ ಶುಚಿತ್ವದ ನಿಯಮಗಳ ಆಚರಣೆಯಿಂದ ನಿವಾಹಿಸಿಕೊಳ್ಳಬಹುದು.ಈ ಬಗೆಗೆ ಬಹಳಷ್ಟು ಜನರಲ್ಲಿ ತಿಳುವಳಿಕೆ ಇರುವುದಿಲ್ಲ.ಆಸ್ಪತ್ರೆಗಳಲ್ಲಿ ನೀಡುವ ಔಷಧಿಯನ್ನು ಸ್ನಾನ ಮಾಡಿದ ನಂತರ ಮೈಗೆ ಹಚ್ಚ ಬೇಕೆಂದಿದ್ದರೆ,ಹಚ್ಚಿಕೊಂಡು ನಂತರ ಸ್ನಾನ ಮಾಡುವುದೋ,ಇಲ್ಲವೇ ಅದನ್ನೇ ಕುಡಿದ ಪ್ರಸಂಗಗಳು ನನ್ನ ಗಮನಕ್ಕೆ ಬಂದಿವೆ.ಯಾವುದೇ ಕಾರಣದಿಂದ ಉದರ ಬೇನೆಯಾದರೂ,ಹೊಟ್ಟೆಗೆ ಎಣ್ಣೆ ತೀಡಿ,ಉಜ್ಜಿ,ಭಟ್ಟಿ ಕಟ್ಟಿಸಿಕೊಂಡು ಕರಳು ತೂತಾಗುವುದನ್ನು ಈಗಲೂ ನೋಡುತ್ತೇವೆ.ಅಪೆಂಡಿಸೈಟಿಸ್ ಆದವರಿಗೆ ಭೇದಿಯ ಮದ್ದನ್ನು ನೀಡಿ ಅನಾಹುತಗಳು ಆಗುತ್ತಲೇ ಇವೆ, ಎಂದರೆ ಜನರು ಕಾಯಿಲೆಗಳ ಬಗೆಗೆ ಅರಿತುಕೊಳ್ಳುವುದು ಎಷ್ಟಿವೆಯೆಂಬುದರ ಅರಿವಾಗಬಹುದಲ್ಲವೆ ? ಅವುಗಳ ಬಗೆಗೆ ಓದು ಬರಹ ತಿಳಿದವರಲ್ಲಿ ಕೆಲವರಿಗಾದರೂ ಅರ್ಥವಾಗುವ ಹಾಗೆ ಲೇಖನಗಳನ್ನು ಬರೆಯುವ ಉದ್ದೇಶ ನನ್ನದಾಯಿತು.ಹಲವು ಸ್ವಾಸ್ಥ್ಯಸಮಸ್ಯೆಗಳ ವಿಶ್ಲೇಷಣೆಯ ಲೇಖನಗಳನ್ನು ಬರೆಯುತ್ತಿದೇನಾದರೂ,ಶಸ್ತ್ರ ಚಿಕಿತ್ಸೆಗಳಿಂದ ಗುಣಪಡಿಸಬೇಕಾಗುವ ಕಾಯಿಲೆಗಳ ಕಡೆಗೇ ನನ್ನ ಒಲವು ಇತ್ತು. ಪ್ರತಿದಿನ ಸಾರ್ವಜನಿಕ  ಆಸ್ಪತ್ರೆಗಳಲ್ಲಿ ಜರಗುವ ಸಾಮಾನ್ಯ ಶಸ್ತ್ರ ವೈದ್ಯದ ಕಾಯಿಲೆಗಳ ಬಗೆಗೆ ನಾನು ಬರೆದ ಬಿಡಿ ಲೇಖನಗಳು ಕೆಲವು ನಿಯತ ಕಾಲಿಕ ಪತ್ರಿಕೆಗಳಲ್ಲಿ ಪ್ರಕಟವಾದವು. ಅಂತಹ ವಿಷಯಗಳ ಲೇಖನಗಳನ್ನು ಪರಿಷ್ಕರಿಸಿ,ಒಂದು ನಿಗದಿತ ಚೌಕಟ್ಟಿನಲ್ಲಿ ಮತ್ತೆ ಬರೆದು ಪ್ರಕಟಿಸುವ ಪ್ರಯತ್ನವಿದು.ಪತ್ರಿಕೆಗಳಲ್ಲಿ ಪ್ರಟವಾದ ಬಿಡಿ ಲೇಖನಗಳು ಮತ್ತೆ ಬೇಕೆಂದಾಗಲೆಲ್ಲಾ ಸಿಗಲಾರವು ಮತ್ತು ಪತ್ರಿಕೆಗಳಿಗೆ ಬರೆದ ಅಂತಹ ಲೇಖನಗಳು ಸ್ಥಳಾಭಾವದಿಂದ ಸಂಕ್ಷಿಪ್ತವಾಗಿರುತ್ತದಲ್ಲದೆ,ರೋಗವೊಂದರ ಎಲ್ಲಾ ಮುಖಗಳನ್ನೂ ಪರಿಚಯಿಸಲಾಗುವುದಿಲ್ಲ.ದೇಹದ ಒಂದೊಂದು ವಿಭಾಗದ ಅಂಗಗಳಲ್ಲಿ ಉದ್ಭವವಾಗುವ  ಕಾಯಿಲೆಗಳನ್ನು ಒಂದಕ್ಕೊಂದು ಹೊಂದಾಣಿಕೆ ಇರುವಂತೆ ಪುನಃ ರಚಿಸಲಾಗಿದೆ.                                                                                     ಜನರ ಶಿಕ್ಷಣ ಮಾಧ್ಯಮ ಆಯಾ ಮಾತೃಭಷೆಗಳ ಮುಕಾಂತರವೇ ಆಗಬೇಕೆಂಬ ಒತ್ತಾಸೆ ಸ್ವಾತಂತ್ರ್ಯ ಪೂರ್ವದಿಂದಲೂ ಇದೆ.ರಾಷ್ಟ್ರಪಿತ ಮಹಾತ್ಮಾ