ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿತ್ತಕೋಶದ ಕಲ್ಲುಗಳು ೧೧೯ ಕೊಲೆಸ್ಟಾರಾಲ್ ಮತ್ತು ಪಿತ್ತಾಮ್ಲ ನಸಾಮಾನ್ಯ ೧:೧೨ರ ಪ್ರಮಾಣದಲ್ಲಿದ್ದಾಗ ಒಂದರಲೊಂದು ಕರಗಿಕೊಂಡಿರುತ್ತವೆ. ಅವೆರಡರಲ್ಲಿ ಯಾವುದೇ ಒಂದರ ಪ್ರಮಾಣ್ ಹೆಚ್ಚು -ಕಡಿಮೆಯಾದಾಗ,ಕೊಲೆಸ್ಟ್ರಾರಾಲ್ ಸಣ್ಣ ಸಣ್ಣ ಹಲ್ಲೆಗಳಾಗಿ ಘನೀಕರಿಸತ್ತದೆ.ಕೊಬ್ಬಿನ ಅಂಶಗಳು ಹೆಚ್ಚಾಗಿರುವ ಆಹಾರವನ್ನು ಸೇವಿಸುವವರಲ್ಲಿ ಪಿತ್ತಾಮ್ಲದ ಪ್ರಮಾಣ ಕಡಿಮೆಯಾಗಿರುತ್ತದೆ.ಪಿತ್ತಕೋಶದ ಭಿತ್ತಿಯಲ್ಲಿ ರೋಗಾಣು ಸೋಂಕಿನಿಂದ ಉರಿಯೂತ ಉಂಟಾದಾಗಲೂ ಹೆಚ್ಚಿನ ಪ್ರಮಾಣದಲ್ಲಿ ಪಿತ್ತಾಮ್ಲ ರಕ್ತಕ್ಕೆ ಹೀರಿಕೊಳ್ಳುವ ಪರಿಸ್ಥಿತಿ ಏರ್ಪಡುತ್ತದೆ.ಗರ್ಭಿಣಿಯರಲ್ಲಿ ಪಿತ್ತರಸದ ಚಲನೆ ಕ್ಸಾಮಾನ್ಯ ಈ ಸಂದರ್ಭದಲ್ಲಿ ಕ್ಷಾರೀಯ ಲಕ್ಷಣದ ಪಿತ್ತರಸದ ಕ್ಷಾರಾಮ್ಲ ಮಾನ(ph)ಆಮ್ಲೀಯ ಸ್ಥಿತಿಗೆ ತಿರುಗುವಂತಾಗುತ್ತದೆ.ಇದರಿಂದಲೂ ಕೊಲೆಸ್ಟೆರಾಲ್ ಮತ್ತು ಪಿತ್ತಾಮ್ಲಗಳ ಸಂಬಂಧ ಏರುಪೇರಾಗಿ,ಕೊಲೆಸ್ಷ್ಟಾಲ್ ಹರಳುಗಳು ಘನೀಕರಿಸಬಹುದು.ತಿಳಿ ಹಸಿರು ಅಥವಾ ಬೆಳ್ಳಗಿರುವ ಈ ಕಲ್ಲುಗಳು "ಕೊಲೆಸ್ಟೆರಾಲ್ ಕಲ್ಲು"ಗಳ್ಳೆಂದೆ ಕರೆಯಲಾಗುತ್ತದೆ.ಅವು ಗೋಲಿಯಂತೆ ದುಂಡಗಿರುತ್ತವೆ.ಒಂದರಿಂದ ಮುರು ನಾಲ್ಕು ಕಲ್ಲುಗಳು ಒಂದೇ ಸಾರಿ ನೋಡ ಸಿಗಬಹುದು.ಕೋಳಿ ಮೊಟ್ಟೆಯ ಗಾತ್ರದ ಕಲ್ಲುಗಳಿದ್ದ ದಾಖಲೆಗಳೂ ಇವೆ.ಪಿತ್ತಕೋಶದ ಕಲ್ಲುಗಳ ಒಟ್ಟು ಸಂಖ್ಯೆಯಲ್ಲಿ ಕೊಲೆಸ್ಟೆರಾಲ್ ಕಲ್ಲುಗಳ ಪ್ರಮಾಣ ಶೇ.೧೦ರಷ್ಟು ಮಾತ್ರ.

    ಪಿತ್ತಬಣ್ಣದ್ರವ್ಯದ ಕರಗುವಿಕೆಯಲ್ಲಾಗುವ ವ್ಯತ್ಯಾಸಗಳಿಂದಲೂ ಇಂತಹವೇಪರಿಣಾಮ ಉಂಟಾಗಬಹುದು.

ಮಲೇರಿಯ,ಅನುವಂಶಿಕ ಸ್ಪಿರೋಸೈಟೋಸಿಸ್ನಂಥ ಕಾಯಿಲೆಗಳಿಂದ ನರಳುವವರಲ್ಲಿ ರಕ್ತಕಣಗಳು ಅತಿಹೆಚ್ಚಾಗಿ ಲಯವಾಗುತ್ತವೆ.ಆದರಿಂದ ಪಿತ್ತಬಣ್ಣದ್ರವ್ಯವೂ ಹೆಚ್ಚಾಗಿ ಬಿಡುಗಡೆಯಾಗುತ್ತವೆ.ಈ ದ್ರವ್ಯವೂ ಯಕೃತ್ತಿನ ಕಿರಿಯ ಪಿತ್ತನಾಳಗಳಲ್ಲಿ ಬಿಲಿರುಬಿನ್ ಜೊತೆ ಸಂಗಮವಾಗಿ ಮುದ್ದೆಗಟ್ಟಿ ಸಣ್ಣ ಸಣ್ಣ ಕಲ್ಲುಗಳಾಗಿ ಮಾರ್ಪಾಡಾಗುತ್ತವೆ. ಅವೇ ಮುಂದೆ ಪಿತ್ತನಾಳ ಮತ್ತು ಪಿತ್ತಕೋಶಗಳಿಗೆ ಇಳಿದು ಹಿರಿದಾಗಿ "ಪಿತ್ತಬ್ಣ್ಣದ್ರವ್ಯ ಕಲ್ಲು"ಗಳೆಂದು ಕರೆಸಿಕೊಳ್ಳುತ್ತೆವೆ.ಯಕೃತಿನ ಸಿರ್ಹೋಸಿಸ್, ಪಿತ್ತರಸದ ಮಂದ ಚಾಲನೆ ಇರುವ ಪರಿಸ್ಥಿತಿಗಳು, ಪಿತ್ತಕೋಶದೋಳಗಡೆ ಪರೋಪಜೀವಿಗಳ ವಾಸ್ತವ್ಯ ಮುಂತಾದ ಸಂದರ್ಭಗಳಲ್ಲೂ ಈ ತೆರನ ಕಲ್ಲುಗಳಾಗುತ್ತವೆ. ಸುಮಾರು ೨-೫ ಮಿಲಿ ಮೀಟರ್ ಗಾತ್ರದ ಈ