ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

122

ಪ್ರದೇಶಕ್ಕೂ ಪ್ರಸರಿಸಿ ಹೃದಯಾಘಾತದ ಲಕ್ಷಣವಿರುವಂತೆ ಭಾಸವಾಗುತ್ತದೆ. ರೋಗನಿರ್ಣಯದಲ್ಲಿ ಇವೆಲ್ಲಾ ಗೊಂದಲಮಯ ವಾತಾವರಣಕ್ಕೆ ಕಾರಣವಾಗುತ್ತದೆ.

   ಪಿತ್ತಕೋಶದ ಕಲ್ಲುಗಳು ಬೇನೆ ಅತಿಯಾಗಿ ಕೆರಳಿದಾಗ,ಪಿತ್ತಕೋಶ ಊದಿಕೊಂಡು ಎದೆಯ ಗೂಡಿನ ಕೆಳಗೆ ಪಕ್ಕೆಲುಬುಗಳ ಅಡಿಯಲ್ಲಿ ಮೃದು ಸ್ಪರ್ಶದಿಂದ ಮಟ್ಟಿ ಗುರುತಿಸಲು ಸಾಧ್ಯವಾಗಬಹುದು.ಕಲ್ಲುಗಳು  ಪಿತ್ತನಾಳದಲ್ಲಿ ಬಹಳ ಕಾಲ ಸಿಕ್ಕಿಹಾಕಿಕೊಂಡಾಗ ಮೈಯೆಲ್ಲಾ ಹಳದಿಯಾಗಿ ಅರಸಿನ ಕಾಮಲೆ ಮತ್ತು ಜ್ವರ ಪ್ರಕಟವಾಗುತ್ತವೆ.
   ಬಹಳ ಕಾಲದಿಂದ ಪಿತ್ತಕೋಶದಲ್ಲಿ ಕಲ್ಲುಗಳು ಇದ್ದರೂ, ಅವು ಯಾವ ಲಕ್ಷಣಗಳನ್ನೂ ಪ್ರಕಟಗೊಳಿಸದೆ ಶಾಂತವಾಗಿರುವುದು ಅಪರೂಪವೇನಲ್ಲಾ. ಕಲ್ಲಿರುವ ಲಕ್ಷಣಗಳು ಪ್ರಕಟವಾಗಿ ಚಿಕೆತ್ಸೆಗೆ ಬರುವವರಷ್ತೇ ಸಂಖ್ಯೆಯಲ್ಲಿ ಯಾವ ಚಿಹ್ನೆಗಳನ್ನೂ ತೋರಿಸದ ಅಗ್ನ್ಯಾತ ಕಲ್ಲುಗಳಿರುವರೂ ಇರಬಹುದೆಂಬ ಅಂದಾಜಿದೆ. ಬೇರಾವುದೋ ವ್ಯಾಧಿಯನ್ನು ಪತ್ತೆ ಹಚ್ಚುವ ಪರೀಕ್ಷೆಗಳನ್ನು ಕೈಗಂಡಾಗ ಅವು ಅಕಸ್ಮಾತ್ತಾಗಿ ಬೆಳಕಿಗೆ ಬರುತ್ತವೆ. ಆದರೆ ಮುಂದೆ ಯಾವಗಲೂ ಅವುಗಳಿಂದ ತೊಂದರೆಗಳು ಉದ್ಭವಿಸುವುದಿಲ್ಲವೆಂದು ಹೇಳಲಾಗದು.
ರೋಗ ನಿರ್ಣಯ
      ಪಿತ್ತಕೋಶದುರಿತ (ಕೊಲೀಸಿಸೈಟಿಸ್) ಮತ್ತು ಪಿತ್ತಕೋಶದ ಕಲ್ಲುಗಳಿಂದ ಪ್ರಕಟವಾಗುವ ಚಿಹ್ನೆಗಳು ಸಾಮಾನ್ಯವಾಗಿ ಒಂದೇ ತೆರನವಾಗಿರುತ್ತದೆ. ಅವುಗಳಲ್ಲಿ ಒಂದರಿಂದ ಇನ್ನೊಂದನ್ನು ಬೇರ್ಪಡಿಸುವುದು ಸುಲಭವಲ್ಲ. ಎರಡೂ ವ್ಯಾಧಿಗಳ ಅಂತಿಮ ಚಿಕಿತ್ಸಾ ವಿಧಾನಗಳು ಒಂದೇ ತರಹದ್ದಾಗಿರುವುದರಿಂದ ಈ ಬಗೆಗೆ ಹೆಚ್ಚು ಶ್ರಮವಹಿಸಬೇಕಾಗಿಲ್ಲಾ.
     ಪಿತ್ತಕೋಶದ ಬಹುಪಾಲು ಕಲ್ಲುಗಳು ಎಕ್ಸರೇ ಪರೀಕ್ಷೆಯಿಂದ ಪತ್ತೆಯಾಗುವುದಿಲ್ಲ ವೆಂದರೆ ಅಶ್ಚರ್ಯವಾಗಬಹುದು. ಶೇ. ೧೫-೨೫ರಶ್ತು ಪಿತ್ತಕೋಶದ ಕಲ್ಲುಗಳು ಮಾತ್ರ ಸಾದಾ ಎಕ್ಸರೇ ಪಟಗಳಲ್ಲಿ ಗೋಚರಿಸಬಹುದು. ಪಿತ್ತರಸದ ಜೊತೆ ಸ್ರವಿಸುವ ಹಾಗೂ ಎಕ್ಸರೇ ಕಿರಣಗಳಿಗೆ ಅಗೋಚರ (ರೇಡಿಯೊ ಒಪೇಕ್) ಮದ್ದುಗಳನ್ನು ರೋಗಿಗೆ ನೀಡಿ (ಬಾಯಿ ಅಥವಾ ಇಂಜಕ್ಷನ್ ಮೂಲಕ) ನಿಗದಿತ ಸಮಯದ ಅಂತರದಲ್ಲಿ ಎಕ್ಸರೇ ಚಿತ್ರಪಟುಗಳನ್ನು ತೆಗೆದಾಗ ಪಿತ್ತಕೋಶದ ಮತ್ತು ಪಿತ್ತನಾಳಗಳ ವಿನ್ಯಾಸ ಗೋಚರವಾಗುತ್ತದೆ. ಸಾದಾ ಚಿತ್ರಪಟದಲ್ಲಿ