ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಂಧಿಜಿಯವರ ಉದ್ಡೇಶವೂ ಇದೇ ಆಗಿತ್ತು. ಆದರೆ ನಂತರ ಜರುಗಿದ ಸಂಗತಿಗಳೇ ಬೇರೆ. ನಮ್ಮ ನಡೆ, ನುಡಿ , ಬಾಷೆಗಳ ವಿಷಯದಲ್ಲಿ ನಾವೀಗ ಇಂಗ್ಲಿಷರನ್ನೇ ಮೀರಿಸುವಷ್ಟು ಮುಂದೆ ಸಾಗಿದ್ದೇವೆ ! ಕರ್ನಾಟಕದಲ್ಲಿ ಶಿಕ್ಷಣ, ಆಡಳಿತ, ತಂತ್ರಜ್ಞಾನ ಮುಂತಾದ ಎಲ್ಲಾ ರಂಗಗಳಲ್ಲೂ ಕನ್ನಡಕ್ಕೆ ಆದ್ಯತೆ ಇರಬೇಕೆಂದು ಅಧಿಕಾರವಾಣಿಯಿಂದ ಕರೆಕೊಟ್ಟು ಕಾರ್ಯಮಗ್ನರಾದವರಲ್ಲಿ ರಾಷ್ಟ್ರ ಕವಿ ಕುವೆಂಪು ಅವರಿಗೆ ಸರಿಸಾಟಿಯಾದವರು ಬೇರೊಬ್ಬರಿಲ್ಲವೆಂದರೆ ಅತಿಶಯೋಕ್ತಿಯಲ್ಲ. ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದ ನಂತರ ಶಿಕ್ಷಣದ ಹಲವು ಮಜಲುಗಳಲ್ಲಿ ಕನ್ನಡ ಮಾಧ್ಯಮವಾಗುವುದು ಸಾದ್ಯವಾಯಿತು ; ಕಲೆ, ಮತ್ತು ಮಾನವಿಕ ವಿಷಯಗಳಲ್ಲಿ ಪಥ್ಯಪುಸ್ತಕ , ಪರಾಮರ್ಶಕ ಹಾಗೂ ವಿಶ್ವಕೋಶ ಗ್ರಂಥಗಳು ಕನ್ನಡದಲ್ಲಿ ಪ್ರಕಟವಾದವು. ಅವರ ದಿಟ್ಟ ನಿಲುವಿಗೆ ಕನ್ನಡಿಗರೆಲ್ಲಾ ಚಿರಋಣಿಗಳಾಗಿರಬೇಕು. ಹೀಗೆ ಮೂರು ವರ್ಷಗಳ ಹಿಂದೆ ಅವರಿಗೆ ಹಸ್ತ ಪ್ರತಿಯನ್ನು ತೋರಿಸಿದಾಗ ಶಸ್ತ್ರ ವೈದ್ಯದಂಥ ವಿಷಯ ಕನ್ನಡದಲ್ಲಿ ಪ್ರಕಟವಾಗುತ್ತಿರುವುದಕ್ಕೆ ತಮ್ಮ ಸಂತಸ ವ್ಯಕ್ತ ಪಡಿಸಿದ್ದರು. ಕುವೆಂಪು ಅವರಿಗೆ ಪ್ರಿಯವಾದ ಕನ್ನಡದಲ್ಲಿನ ವೈದ್ಯಕೀಯ ಗ್ರಂಥವನ್ನು ಅವರಿಗೆ ಗೌರವ ಪೂರ್ವಕವಾಗಿ "ಅರ್ಪಣ" ಮಾಡುವುದಕ್ಕೆ ಮಹದಾನಂದವಾಗುತ್ತದೆ.

ಮಂಗಲೂರಿನಲ್ಲಿ ನನ್ನ ಗುರುಗಳೂ, ಮಾರ್ಗದರ್ಶಿಗಳೂ ಆಗಿದ್ದ ಡಾ! ಎಂ. ಪಾಂಡುರಂಗ ಪೈಯವರು ಪುಸ್ತಕವನ್ನು ಪರಾಮರ್ಶಿಸಿ, ಅದರ ಉಪಯುಕ್ತತೆಯ ಬಗೆಗೆ ಮೆಚ್ಚುಗೆಯ ಮುನ್ನಡಿಯನ್ನು ಬರೆದು ಕೊಟ್ಟಿದ್ದರು. ಪುಸ್ತಕ ಪ್ರಕಟವಾಗುವ ಮೊದಲೇ ಅವರು ದಿವಂಗತರಾದುದು ವಿಷಾದನೀಯ. ಡಾ! ಪೈಯವರ ಔದಾರ್ಯಕ್ಕೆ ಕೃತಜ್ಞತೆ ಯನ್ನು ಸಲ್ಲಿಸುತ್ತಾ, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಪ್ರಾರ್ಥಿಸುತ್ತೀನೆ.

ಶಸ್ತ್ರ ವೈದ್ಯದ ಕಾಯಿಲೆಗಲ ಬಗೆಗೆ ನಾನು ಪ್ರಾಯೋಗಿಕವಾಗಿ ಬರೆದ ಕೆಲವು ಲೇಖನಗಳನ್ನು ಪ್ರಕಟಿಸಿ ಉತ್ತೇಜನ ನೀಡಿದ ಮಂಗಳೂರಿನ "ಸಂತೋಷ" ಹುಬ್ಬಳ್ಳಿಯ "ಕಸ್ತೂರಿ" ಮಣಿಪಾಲದ "ತುಷಾರ" ಪೂಣೆಯ "ಆರೋಗ್ಯ ವಾಣಿ", ಮೈಸೂರಿನ "ಆರೋಗ್ಯಯೋಗ" ನಿಯತಕಾಲಿಕ ಪತ್ರಿಕೆಗಳ ಸಂಪಾದಕರಿಗೆ ತುಂಬಾ ಆಭಾರಿಯಾಗಿದ್ದೇನೆ.

ಲೇಖನಗಳಿಗೆ ಪೂರಕವಾಗಿ ಸರಳ ಹಾಗೂ ಸುಂದರ ರೇಖಾ ಚಿತ್ರಗಳನ್ನು ಬರೆದುಕೊಟ್ಟ ಖ್ಯಾತ ವ್ಯಂಗ್ಯ ಚಿತ್ರಕಾರ ಶ್ರೀ ರಾಮಧ್ಯಾನಿಯವರಿಗೆ ನಾನು ಕೃತಜ್ಞನಾಗಿದ್ದೇನೆ.

ಪುಸ್ತಕದ ಹಸ್ತಪ್ರತಿ ತಯಾರಾಗಿ ಮೂರ್ರ್ನಾಲ್ಕು ವರ್ಷಗಳಾದರೂ ಸರಿಯಾದ ಪ್ರಕಾಶಕರು ಸಿಗದೆ ಪರದಾಡುತ್ತಿದ್ದಾಗ ಹಂಪಿಯ ನೂತನ ಕನ್ನಡ ವಿಶ್ವವಿದ್ಯಾಲಯದವರು ನನ್ನ ನೆರವಿಗೆ ಬಂದದ್ದನ್ನು ನಾನೊಂದು ಮರೆಯಲಾರೆ. ಕುಲಪತಿಗಳಾದ ಡಾ! ಚಂದ್ರಶೇಖರ ಕಂಬಾರ ಅವರು ಹಸ್ತ ಪ್ರತಿಯನ್ನು