ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xvi

ನೋಡಿದಾಕ್ಷಣ, ತಮ್ಮ ವಶಕ್ಕೆ ತೆಗೆದುಕೊಂಡು ಮುಂದೊಂದು ತಿಂಗಳಲ್ಲೇ ಅದರ ಪ್ರಕಟಣೆಯ ನಿರ್ಧಾರ ಮಾಡಿದರು. ಅವರ ತುಂಬುಹೃದಯದ ಔದಾರ್ಯಕ್ಕೆ ನಾನೆಷ್ಟು ಋಣಿಯಾಗಿದ್ದರೂ ಸಾಲದೆನಿಸುತ್ತದೆ. ಪ್ರಕಟಣೆಯ ನಿರ್ಧಾರವಾಗುತ್ತಿದ್ದಂತೆಯೇ, ಆ ಬಗೆಗಿನ ವಿಧಿವಿಧಾನಗಳನ್ನು ಶೀಘ್ರಗತಿಯಲ್ಲಿ ಪೂರೈಸಿ, ಪುಸ್ತಕ ಅತ್ಯಂತ ಕಡಿಮೆ ಸಮಯದಲ್ಲಿ ಪ್ರಕಟವಾಗಲು ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಶ್ರೀ ಚಿ. ಶ್ರೀನಿವಾಸರಾಜು ಅವರು ವಹಿಸಿದ ಪಾತ್ರ ಅವಿಸ್ಮರಣೀಯ. ಅವರಿಗೆ ನನ್ನ ಕೃತಜ್ಞತೆಗಳು. ಈಗಿನ ನಿರ್ದೇಶಕರಾದ ಡಾ| ಕರೀಗೌಡ, ಬೀಚನ ಹಳ್ಳಿಯವರು ಈ ದಿಸೆಯಲ್ಲಿ ತಮ್ಮ ಸಹಕಾರವನ್ನು ಮುಂದುವರಿಸಿ ಪ್ರಕಟಣೆಯ ಕಾರ್ಯವನ್ನು ಸುಗಮಗೊಳಿಸಿದ್ದಾರೆ. ಅವರಿಗೆ ತುಂಬಾ ಆಭಾರಿಯಾಗಿದ್ದೇನೆ. ಶಿವಮೊಗ್ಗಾದ ಹೆಸರಾಂತ ಪ್ರಗತಿ ಪ್ರಿಂಟರ‍್ಸ್‌ನ ಮಾಲೀಕರಾದ ಶ್ರೀ ನಾರಾಯಣರಾಯರು ವೈಯಕ್ತಿಕ ಆಸಕ್ತಿಯಿಂದ ಪುಸ್ತಕವನ್ನು ಆಕರ್ಷಕ ವಿನ್ಯಾಸದಿಂದ ಸುಂದರವಾಗಿ ಮುದ್ರಿಸಿಕೊಟ್ಟಿದ್ದಾರೆ. ವೈಯಕ್ತಿಕವಾಗಿ ಅವರಿಗೂ, ಅವರ ಮುದ್ರಣಾಲಯದ ಸಿಬ್ಬಂದಿ ವರ್ಗದವರಿಗೂ ನನ್ನ ಹೃತ್ಪೂರ್ವಕ ವಂದನೆಗಳು ಸಲ್ಲುತ್ತವೆ. ವೈದ್ಯಕೀಯ ಕ್ಷೇತ್ರದ ಪ್ರಮುಖ ವಿಭಾಗವಾದ ಶಸ್ತ್ರ ವೈದ್ಯದ ಬಗೆಗೆ ಕನ್ನಡದಲ್ಲಿ ಮೊದಲ ಬಾರಿಗೆ ಪ್ರಕಟವಾಗುತ್ತಿರುವ ಈ ಕೃತಿ ಓದುಗರಿಗೆ ಉಪಯುಕ್ತವಾದರೆ ನನ್ನ ಶ್ರಮ ಸಾರ್ಥಕವೆಂದುಕೊಳ್ಳುತ್ತೇನೆ. ವೈದ್ಯಕೀಯ ವಿಜ್ಞಾನದ ವಿಷಯಗಳು ಅತ್ಯಂತ ಶೀಘ್ರಗತಿಯಲ್ಲಿ ಬದಲಾಗುತ್ತಿರುವುದರಿಂದ ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಸಾರ್ವಕಾಲಿಕವೆಂದು ಹೇಳುವಂತಿಲ್ಲ ; ವಿಷಯಗಳ ನಿಖರತೆಯಲ್ಲೂ ವ್ಯತ್ಯಯ ಇರಲೂ ಸಾಧ್ಯ ಪ್ರಾಜ್ಞರಾದ ಓದುಗರು ಮತ್ತು ವೈದ್ಯಬಾಂಧವರು ಅಂತಹ ವಿಷಯಗಳನ್ನು ನನ್ನ ಗಮನಕ್ಕೆ ತಂದರೆ ಮುಂದಿನ ಆವೃತ್ತಿಯಲ್ಲಿ ಅವನ್ನು ಅಳವಡಿಸುವ ಭರವಸೆ ನೀಡುತ್ತೇನೆ.

ಡಾ| ಎಚ್. ಡಿ. ಚಂದ್ರಪ್ಪಗೌಡ