ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಗ್ನೇಶ್.ಸ್

ಅವಯವಗಳಾಗಿವೆ. ಅವುಗಳ ಭಿತ್ತಿಗಳು ಹೂವಿನ ಎಸಳುಗಳಂತೆ ಸೂಕ್ಷ್ಮ ;           

ಭಟ್ಟಿಕಟ್ಟುವಂತಹ ಬಿರುಸಿನ ಕಾರ್ಯಾಚರಣೆಯಾದಾಗ ಅವು ಹೂವಿನ ಎಸಳುಗಳನ್ನು ಹೊಸಕಿ ಹಾಕಿದ೦ತಾಗುತ್ತವೆ ; ಇಲ್ಲವೆ ಗಾಳಿ ತುಂಬಿದ ಬಲೂನಿನೆಂತೆ ಒಡೆದು ಛಿದ್ರವಾಗಬಹುದು. ಒಳಗಿನ ಜೀಣ೯ರಸ, ಆಹಾರದ ಶಿಲುಕುಗಳೆಲ್ಲಾ ಹೊರಚೆಲ್ಲಿ ಉದರಕೋಶದ ಹೊರಬಿಗಿ ಪರೆಯಲ್ಲಿ ತೀವ್ರವಾದ ಉರಿಯೂತ - ಪೆರಿಟೋನೈಟಿಸ್ - ಉಂಟು ಮಾಡಬಹುದು. ಆತಿಸಾರ, ಆಮಶಂಕೆ, ಜಂತುಹುಳು ಬಾಧೆಗಳಂತಹ ತೀರಾ ಸರಳ ಪರಿಸ್ಥಿತಿಗಳಲ್ಲೂ ಭಟ್ಟಿಕಟ್ಟಿದರೆ, ಈ ವ್ಯಾಧಿಗಳ ಲಕ್ಷಣಗಳು ಮಸುಕಾಗಿ ತೀವ್ರ ಸ್ಟರೂಪದ ಪರಿಟೋನೈಟಿಸ್ ನ ಲಕ್ಷಣಗಳನ್ನು ಪ್ರಕಟಗೊಳಿಸಿ ಗೊಂದಲಕ್ಕೆಡೆ ಮಾಡಿಕೊಡುತ್ತದೆ. ಕೇವಲ ಒ೦ದು ತಿಂಗಳ ಹಿ೦ದೆ ಹೆರಿಗೆಯಾದ ಬಾಣಂತಿಯೊಬ್ಬಳಿಗೆ ನಾಲ್ಕಾರು ಸಲ ಆಮಶಂಕೆ ಭೇದಿಯಾದಾಗ ಭಟ್ಟಿ ಜಾರಿದೆ ಎ೦ದು ಹೂಟ್ಟೆಯನ್ನು ತೀಡಿ ಭಟ್ಟಿ ಕಟ್ಟಿಸಿದ್ದ ಒ೦ದು ಪ್ರಕರಣ ಇಲ್ಲಿ ಉಲ್ಲೇಖಾರ್ಹ. ಆಕೆಗೆ ಒಂದೆರಡು ದಿನಗಳಲ್ಲಿಯೇ ಭೀಕರ ಸ್ವರೂಪದ ಪರಿಟೋನೈಟಿಸ್ ಆಗಿ ಸಾವಿನ ಅಂಚಿನಲ್ಲಿದ್ದಳು. ಹಲವಾರು ಬಾಟಲು ಗ್ಲೂಕೋಸ್. ಎರಡು ಬಾಟಲು ರಕ್ತಪೂರಣೆ ಮಾಡಿದ ನಂತರವೇ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಯಿತು. ಉದರ ಕೋಶವೆಲ್ಲಾ ಕೀವಿನ ಮಯವಾಗಿತ್ತು. ಸುಧಾರಿಸಿ ಕೊಳ್ಳಲು ಆಕೆ ನಾಲ್ಕು ವಾರ ಆಸ್ಪತ್ರೆಯಲ್ಲಿ ಉಳಿಯಬೇಕಾಯಿತು.

    ಇನ್ನು, ಆಪೆಂಡಿಸೈಟಿಸ್, ಪಿತ್ತಕೋಶದುರಿತ. ಕರುಳು - ತಡೆಯಂಥ

ಗಂಭೀರ ಪರಿಸ್ಥಿತಿ ಇರುವವರ ಹೊಟ್ಟೆಯನ್ನು ತೀರಾ ಮೃದುವಾಗಿ ತೀಡಿದರೂ ಅವಯವಗಳು ಒಡೆದು ಭೀಕರ ಹಾಗೂ ವ್ಯಾಪಕ ಪರಿಟೋನೈಟಿಸ್ ಗೆ ಎಡೆಮಾಡಿ ಕೊಟ್ಟಂತಾಗುತ್ತದೆ. ಅವರನ್ನು ಅಕ್ಷರಶಃ ಸಾವಿನ ದವಡೆಗೆ ತೂರಿದಂತಾಗುತ್ತದೆ.

        ಭಟ್ಟಿ ಕಟ್ಟುವಂತಹ ವಿಧಾನಗಳ ವಿವರ ಆಧುನಿಕ ವೈದ್ಯಕೀಯ

ಗ್ರಂಥಗಳಲಿಲ್ಲ. ದೇಹದ ಒ೦ದು ಭಾಗಕ್ಕೆ ರಕ್ತ ವೇರಿಕೆಯುಂಟು ಮಾಡಲು ಈ ತರಹೆಯ ಪದ್ಧತಿಯಿಂದ ನಿವಾ೯ತ ಉಂಟು ಮಾಡುತ್ತಿದ್ದರೆಂಬ ಹೇಳಿಕೆಗಳಿವೆ. ಗರ್ಭಪಾತ ಉಂಟು ಮಾಡಲೂ ಸಹ ಒಂದೊಂದು ಸಾರಿ ಹೀಗೆ ಮಾಡುತ್ತಿದ್ದರಂತೆ. ಪ್ರಸ್ತುತ ಆಧುನಿಕ ವೈದ್ಯಕೀಯ ಪದ್ದತಿ ತಲುಪಿರುವ ಉತ್ತುಂಗ ಮಟ್ಟದ ಸಂದರ್ಭದಲ್ಲೂ ಈ ಬಬ೯ರ ವಿಧಾನ ಬಳಕೆಯಲ್ಲಿರುವುದು ದುರದೃಷ್ಟಕರ. ಹಳ್ಳಿಗಾಡುಗಳ ಅವಿದ್ಯಾವಂತರೇ ಅಲ್ಲದೆ ನಗರವಾಸಿ ಬುದ್ಧಿಜೀವಿಗಳೆನಿಸಿ ಕೊಂಡವರೂ ಸಹಾ ಒ೦ದೊ೦ದು ಸಾರಿ ಈ ಅಡನಾಡಿ