ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಟ್ಟಿ ಜಾರಿಕೆ ೧೫೫

ಚಿಕಿತ್ಸೆಗೊಳಗಾಗುತ್ತಿರುವುದು ಈ ಕಾಲದ ವಿಪಯಾ೯ಸಗಳಲ್ಲೊ೦ದಾಗಿದೆ.

    ವೈದ್ಯಕೀಯ ಗ್ರಂಥಗಳಲ್ಲಿ ಈ ಬಗೆಗೆ ಪ್ರಸ್ತಾಪವಿಲ್ಲದಿರುವುದರಿಂದ ನಮ್ಮ

ದೇಶದಲ್ಲೂ ಈಗಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಬಗೆಗೆ ಬೋಧನೆಯಗುತ್ತಿಲ್ಲ. ಆದರೆ ನಗರಗಳ ಆಸ್ಪತ್ರಗಳಿಗೆ ಹೊಟ್ಟೆನೋವಿನ ತುರ್ತುಚಿಕಿತ್ಸೆಗಾಗಿ ಪ್ರತಿದಿನ ಬರುವವರಲ್ಲಿ ಒಬ್ಬರಾದರೂ ಈ ಚಿಕಿತ್ಸೆಗೊಳಗಾದ ನಿದರ್ಶನಗಳಿಲ್ಪದಿರುವುದಿಲ್ಲ. ಪರಿಸ್ಥಿತಿಯ ಅರಿವಿರದ ವೈದ್ಯರು ಈ ಬಗೆಗೆ ಕೂಲಂಕಷವಾಗಿ ವಿಚಾರಿಸಿರುವುದಿಲ್ಲ. ಇಂತಹ ರೋಗಿಗಳ ಕರುಳಿನಲ್ಲಾದ ತೂತಕ್ಕೆ (ಫರಪೋರೆಶನ್) "ಕಾರಣ ತಿಳಿಯ ವ್ಯಾಧಿ" (ಇಡಿಯೋ ಪ್ಯಾಥಿಕ್) ಎಂದು ನಾಮಕರಣ ಮಾಡಿ ಮುಂದೆ ಆ ಬಗೆಗೆ ಯೋಚಿಸುವುದಿಲ್ಲ. ಪ್ರಪಂಚದ ಇತರ ಕಡೆ ಕಾಣಸಿಗದ ಈ ಪರಿಸ್ಥಿತಿಯ ಬಗೆಗೆ ನಮ್ಮಲ್ಲಿ ಹೆಚ್ಚಿನ ಸಂಶೋಧನೆಗಳಾಗಬೇಕು. ಎಲ್ಲಿಕ್ಕಿಂತ ಮಿಗಿಲಾಗಿ ಭಟ್ಟಿಕಟ್ಟುವುದರಿಂದುಂಟಾಗುವ ಅನಾಹುತಗಳ ಬಗೆಗೆ ಅರಿವು ಮೂಡುವಂತೆ ಪ್ರಚಾರಗಳಾಗಬೇಕು. ಸಮೂಹ ಮಾಧ್ಯಮಗಳು ಈ ದಿಸೆಯಲ್ಲಿ ಪ್ರಮುಖ ಪಾತ್ರವಹಿಸಬಹುದು.

                     * * * * *