ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಸಾಮಾನ್ಯ ಶಸ್ತವೈದ್ಯದ ಕಾಯಿಲೆಗಳು

                          ೧೬. ಕರುಳು ಕೆರಳಿಕೆ
   ಇತ್ತೀಚಿನ ವರ್ಷಗಳಲ್ಲಿ ವೈದ್ಯರಲ್ಲಿಗೆ ನಾನಾ ರೋಗಗಳ ಚಿಕಿತ್ಸೆಗೆ ಬರುವವರಲ್ಲಿ ಜೀರ್ಣಾಂಗಗಳಿಗೆ ಸಂಬಂಧಿಸಿದ ಲಕ್ಷಣಗಳಿರುವವರದ್ದೇ ಬಹುಪಾಲು.ಇಂತಹ ಬಹುತೇಕ ವ್ಯಾಧಿಗಳಿಗೆ ನಿಗದಿತ ಕಾರಣ, ವಿಶಿಷ್ಟ ರೋಗಲಕ್ಷಣ ಮತ್ತು ಅವಯವಗಳಲ್ಲಿ ಗುರುತಿಸಬಹುದಾದ ಬದಲಾವಣೆಗಳೂ ಕೂಡ ಆಗಿರಬಹುದು. ಇವಕ್ಕೆ ವ್ಯತಿರಿಕ್ತವಾಗಿ ಇನ್ನೊಂದು ಬಗೆಯ ರೋಗಗಳು ಈಗೀಗ ಹೆಚ್ಚಾಗುತ್ತಿರುವಂತೆ ಕಂಡು ಬರುತ್ತಿದೆ. ಈ ಕಾಯಿಲೆಗಳಿಗೆ ಆರೋಪಿಸಬಹುದಾದ ನಿರ್ದಿಷ್ಟ ಕಾರಣಗಳಿರುವುದಿಲ್ಲ; ಅಥವಾ ಅವಯವಗಳಲ್ಲಿ ಗುರುತಿಸಬಹುದಾದ ಬದಲಾವಣೆಗಳೂ ಆಗಿರುವುದಿಲ್ಲ. ವೈದ್ಯಕೀಯ ಪರಿಭಾಷೆಯಲ್ಲಿ ಅವುಗಳಲ್ಲಿ "ಫಂಕ್ಷನಲ್ ಅಸ್ವಸ್ಥತೆ" (Functional Disorders) ಎನ್ನಲಾಗುತ್ತದೆ. ಈ ಗುಂಪಿನ ಬಹುಪಾಲು ಜನರಲ್ಲಿ ಮನೋವೈಕಲ್ಯತೆಯ ಕುರುಹುಗಳು ಎದ್ದು ಕಾಣ್ಣುತ್ತವ.ಆಧುನಿಕ  ಜೀವನ ಕ್ರಮದ ಗೊಂದಲಮಯ ವಾತಾವರಣದ ಪ್ರತೀಕವೆನ್ನಲಾದ ಈ ವ್ಯಾಧಿಗೆ "ಕರುಳು ಕೆರಳಿಕೆ" (Irritable Bowel Syndrome) ಎ೦ದು ಹೆಸರಿಸಲಾಗಿದೆ.ಇ೦ತಹವರಲ್ಲಿ ಹೊಟ್ಟೆಯುಬ್ಬರ, ಉದರ ಬೇನೆ, ಮಲಬದ್ಧತೆ, ಭೇದಿ, ಮಾನಸಿಕ ತಳಮಳಗಳಂತಹ ವಿಲಕ್ಶಣ ಚಿಹ್ನೆಗಳು ಒಟ್ಟಿಗೆ ಒಂದೇ ಸಾರಿ ಕಾಣಿಸಿಕೊಳ್ಳಬಹುದು : ಇಲ್ಲವೆ ಅವು ಒಂದಾದ ಮೇಲೊಂದರಂತೆ ಆಗಾಗ್ಗೆ ಪ್ರಕಟವಾಗಲೂಬಹುದು. ಅವು ಯಾವುದೇ ಒಂದು ಕಾರಣದಿಂದ ಉದ್ಭವವಾಗಿವೆಯೆಂದು ಹೇಳುವಂತಿಲ್ಲ; ಒಂದು ಜೀರ್ಣಾಂಗಕ್ಕೆ ಸ೦ಬಧಿಸಿದವೆನ್ನುವ೦ತ್ತಿಲ್ಲ ;ಅವುಗಳಿ೦ದ ಯಾವ ಅವಯವದಲ್ಲೂ ಶಾಶ್ವತ ಬದಲಾವಣೆಗಳನ್ನು ಪತ್ತೇ ಹಚ್ಚಲು ಸಾಧ್ಯವಾಗುವುದಿಲ್ಲ.
     ಮಾನಸಿಕ ಒತ್ತಡ, ದುಗುಡ-ದುಮಾನ, ಕಳವಳಗಳೇ ಕರುಳು - ಕೆರಳಿಕೆಯ ಮೂಲ ಕಾರಣವೆ೦ದು ಇತ್ತೀಚಿನವರೆಗೂ ನ೦ಬಲಾಗಿತ್ತು. ನಮ್ಮ ದೈಹಿಕ ಕಾರ್ಯ ಚಟುವಟಿಕೆಗಳೆಲ್ಲಾ ಕೇಂದ್ರ ನರಮಂಡಲದಿಂದ ಮನಸ್ಸಿನ ಮೂಲಕ ನಿರ್ವಹಿಸಲ್ಪಡುತ್ತದೆಂಬ ಕಲ್ಪನೆಯೇ ಈ ನಂಬಿಕೆಗೆ ಆಧಾರವಾಗಿತ್ತು. ಆದರೆ ಕರುಳಿನ ಸೀಮಿತ ಚಲನ ವಲನಗಳಿಗೆ ಅವುಗಳು ಸ್ನಾಯು ಕವಚಗಳಲ್ಲಿರುವ