ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರುಳು ಕೆರಳಿಕೆ ೧೫೭

ನರಗಳ ಪ್ರಚೋದನೆಯಿಂದಲೂ ನಡೆಯುತ್ತವೆ. ಈ ನರಗಳು ಮಿದುಳಿನ ಹತೋಟಿಯಲ್ಲಿರದೆ ಸ್ವತಂತ್ವವಾಗಿ ಕಾರ್ಯ ನಿರ್ವಹಿಸುತ್ತವೆಂಬುದು ಇತ್ತೀಚಿನ ಸಂಶೋಧನೆಗಳಿಂದ ಶ್ರುತಪಟ್ಟಿದೆ. ಕರುಳು - ಕೆರಳಿಕೆಯ ಲಕ್ಷಣಗಳಿರುವ ರೋಗಿಗಳ ಕರುಳಿನೊಳಗೆ ಪ್ರಾಯೋಗಿಕವಾಗಿ ಬಲೂನನ್ನು ತೂರಿಸಿಟ್ಟು ಅವನಿಗೆ ಅರಿವಾದ೦ತೆ ಗಾಳಿ ತು೦ಬಿ ಉಬ್ಬಿಸಿದಾಗ ಕರುಳಿನಲ್ಲಿ ತೀವ್ರ ಸೆದೆತ (Spasm) ಉಂಟಾಗುವುದನ್ನು ಪ್ರದರ್ಶಿಸಬಹುದು. ಇತರರಲ್ಲಿ ಈ ಪ್ರಯೋಗ ನಡೆಸಿದಾಗ ಸೆಡೆತ ಪ್ರಕಟವಾಗುವುದಿಲ್ಲವಾದ್ದರಿಂದ, ಕೆಲವರಲ್ಲಿ ಸ್ಥಳೀಯ ಪ್ರಚೋದನೆ ಇರುವುದನ್ನು ಸಾಬೀತು ಪಡಿಸಿದಂತಾಯಿತು. ಇದೇ ರೀತಿಯಲ್ಲಿ ಕೆಲವರ ಕರುಳನ್ನು ಕೆರಳಿಸುವ ಅಥವಾ ಒಗ್ಗದ ಆಹಾರ ವಸ್ತುಗಳು ಅಲ್ಲಿಗೆ ತಲುಪಿದಾಗ ವಿಲಕ್ಷಣ ಪ್ರತಿಕ್ರಿಯೆಗಳು ಉಂಟಾಗುತ್ತವೆಂಬುದು ಈಗ ಪ್ರಚಲಿತವಿರುವ ಅಭಿಪ್ರಾಯವಾಗಿದೆ.

        ಈ ಗೋಳದ ಮೇಲೆ ಆದಿ ಮಾನವನು ಜೀವನ ನಡೆಸಲು ಆರಂಭಿಸಿದಾಗ ಸುಲಭವಾಗಿ ಲಭ್ಯವಿದ್ದ ಗೆಡ್ಡೆಗೆಣಸು, ಹಣ್ಣು-ಹಂಪಲು, ಸೊಪ್ಪಗಳು ಅವನ ಆಹಾರ ಪದಾರ್ಥಗಳಾಗಿದ್ದವು. ಅಂತಹ ಅಪರಿಸ್ತೃತ ಕಚ್ಚು ಆಹಾರ ವಸ್ತುಗಳನ್ನು ಅರಗಿಸಿ,ನ೦ತರ ಉಳಿದ ಒರಟು ಒರಟಾದ ಶಿಲುಕನ್ನುಯಾವ ಅಡಚಣೆಯೂ ಇಲ್ಲದೆ ಹೊರ ಹಾಕಲು ಆದಿ ಮಾನವನ ಜೀರ್ಣಾಂಗಗಳು ಹೇಳಿ ಮಾಡಿಸಿದಂತಿದ್ದವು. ನಾಗರಿಕತೆಯ ಜೀವನ ಶೈಲಿ ಮುಂದುವರಿದಂತೆಲ್ಲಾ ಮಾನವನು ಸೇವಿಸುವ ಆಹಾರ ಪದಾರ್ಥಗಳು ಶೀಘ್ರಗತಿಯಲ್ಲಿ ಪರಿಷ್ಠರಣಕ್ಕೊಳಗಾದವು. ಅವುಗಳ ಕವಚಗಳಲ್ಲಿರುತ್ತಿದ್ದ ಸಿಪ್ಪೆ ನಾರು ತವುಡು ಮುಂತಾದವುಗಳನ್ನು ತೆಗೆದು ಹಾಕಿ ರುಚಿಕರವಾದ ಒಳಗಿನ ಹೂರಣವನ್ನು ಭಂಜಿಸುವ  ಪರಿಪಾಟ ಬೆಳಿಯಿತು.ಅವು ಪರಿಷ್ಕೃತಗೊಳ್ಳುವುದರ ಜೊತೆಗೆ ಪೂರಯಿತ (Saturated) ಕೂಡ ಆದವು. ಹೀಗಾಗಿ ಸೇವಿಸುವ ಆಹಾರ ವಸ್ತುಗಳ ಒಟ್ಟು ಗಾತ್ರ (Bulk) ಬಹಳಷ್ಟು ಕಡಿಮೆಯಾಯಿತು. ಕರುಳಿನಲ್ಲಿ ಆಹಾರ ವಸ್ತುಗಳ ಶಿಲುಕು ಚಲಿಸುವುದಕ್ಕೆ ಅವುಗಳ ಗಾತ್ರವೂ ಬಹು ಮುಖ್ಯ ಪಾತ್ರ ವಹಿಸುತ್ತದೆ. ಅಪರಿಷ್ಟತ, ಅಪೂರಯಿತ ಆಹಾರ ವಸ್ತುಗಳನ್ನು ಸೇವಿಸುತ್ತಿದ್ದ ನಮ್ಮ ಪೂರ್ವಜರು ದಿನಕ್ಕೆ ಒಂದರೆಡು ಸಾರಿಯಾದರೂ ಮಲವಿಸರ್ಜನೆ ಮಾಡುತ್ತಿದ್ದರು. ಈಗ ಹಸನುಗೊಳಿಸಿದ ಆಹಾರ ಪದಾರ್ಥಗಳನ್ನು ಭಂಜಿಸುವವರು ೨-೩ ದಿನಗಳಿಗೊಂದಾವರ್ತಿ ಮಲವಿಸರ್ಜನೆ ಮಾಡುವುದೂ ದುಸ್ತರವಾಗುತ್ತಿದೆ. ಈ ಪರಿಸ್ಥಿತಿಗೆ ಇನ್ನೊಂದು ಕಾರಣವೆಂದರೆ ಆಹಾರ