ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಸಾಮಾನ್ಯ ಶಸ್ತ್ರದ್ಯದ ಕಾಯಿಲೆಗಳು


ಸಾಮಗ್ರಿತಳು ಬದಲಾವಣೆಯಾದ ತೀವ್ರಗತಿಯಲ್ಲೆ ಜೀರ್ಣಾಂಗಗಳಲ್ಲೂ ಪೂರಕ ಬದಲಾವಣೆ, ವಿಕಾಸಗಳಾಗದಿರುವಿದು. ಈ ವ್ಯತ್ಯಾಸವೇ ಈಗ ಅತಿ ಹೆಚ್ಚಾಗಿ ಪ್ರಕಟವಾಗುತ್ತಿರುವ, ನಾಗರಿಕತೆಯ ಕಾಯಿಲೆಗಳೆಂದು ಖ್ಯಾತಿ ಪಡೆದಿರುವ ಡಯಾಬಿಟಿಸ್, ಅಪೆಂಡಿಸೈಟಿಸ್,ಮೂಲವ್ಯಾಧಿ, ಕರುಳು ಕೆರಳಿಕೆಗಳ ಕಾರಣವೆನ್ನಲಾಗುತ್ತಿದೆ. ಹೀಗೆ ಕರುಳಿಗೆ ಅಸಹನೀಯವಾದ ಹಾಗೂ ಅದರ ಚಲನೆಗೆ ಅನುಕೂಲಕರವಲ್ಲದ ಆಹಾರ ವಸ್ತುಗಳು ಕರುಳನ್ನು ತಲುಪಿದಾಗ ಅಲ್ಲಿನಯ ನ್ರತಂತುಹಳಲ್ಲಿ ವಿಲಖಕ್ಷಣ ಪ್ರತಿಕ್ರಿಯೆ ವ್ಯಕ್ತ ಪಡುತ್ತದೆ; ಅವು ಅತಿ ಚುರುಕಾಗಿ ಇಲ್ಲವೆ ಮಂದಗತಿಯಲ್ಲಿ ಪ್ರತಿಕ್ರಿಯಿಸಬಹುದು; ಅವ್ಯವಸ್ಥಿತ ರೀತಿಯಲ್ಲಿ ವರ್ತಿಸಬಹುದು. ಅತಿಸಾರ, ಮಲಬದ್ಧತೆ, ಕುರುಳು ಕೆರಳಿಕೆ ಮುಂತಾದ ಬೇನೆಗಳು ಇಂತಹ ಪ್ರತಿಕ್ರಿಯೆಗಳ ಪರಿಣಾಮವೆಂಬುದು ಈ ವ್ಯಾಧಿಗಳ ಬಗೆಗೆ ಸ್ಂಶೋಧನೆಗಳಲ್ಲಿ ತೊಡಗಿರುವ ತಜ್ನರ ಅಭಿಪ್ರಾಯ. ಆದರೂ ಮಾನಸಿಕ ವ್ಯತ್ಯಾಸಗಳ ಪಾತ್ರ್ ಈ ವ್ಯಾಧಿಯ ಸೃಷ್ಟಿಯಲ್ಲಿ ಭಾಗವಹಿಸುವುದಿಲ್ಲವೆಂಬುದನ್ನು ಅಲ್ಲಗಳೆಯುವ್ಂತಿಲ್ಲ. ಅವರಲ್ಲಿ ಬಹುಪಾಲು ಜನರು ಮಾನಸಿಕ ಒತ್ತಡ, ತಳಮಳದ ಸ್ವಭಾವದವರಾಗಿರುವುದಂತೂ ನಿಜ, ಕರುಳಿಗೆ ಒಗ್ಗದ ಅಹಾರ ವಸ್ತ್ರಗಳಿಂದ ಅವರಲ್ಲಿ ಸುಪ್ತವಾಗಿದ್ದ ಮಾನಸಿಕ ಕ್ಷೋಭೆಗಳು ಉಲ್ಬಣಗೊಂಡು ಮನೋರೋಗದ ಲಕ್ಷಣಗಳು ಪ್ರಕಟವಾಗಬಹುದು. ಇದರಿಂದಲೇ ಕರುಳು - ಕೆರಳಿಕೆಯ ಬಹುಪಾಲು ರೋಗಿಗಳು ಮನೋವೈದ್ಯರ ಖಾಯಂ ಗಿರಾಕಿಗಳಾಗುತ್ತಾರೆ. ಲಕ್ಷಣಗಳು ಜನಸಮುದಾಯದ ಶೇ ೧೫-೨೦ರಷ್ಟು ಮಂದಿಯಲ್ಲಿ ಈ ವ್ಯಾಧಿಯ ಲಕ್ಷಣಗಳು ಪಕಟವಾಗುತ್ತಿವೆಯೆಂಬ ಅಂದಾಜಿದೆ. ಇವರಲ್ಲಿ ವೈದ್ಯಕೀಯ ನೆರವನ್ನು ಅರಸಿ ಬರುವವರು ಕೇವಲ ಕಾಲುಭಾಗದಷ್ಟು; ಸ್ತ್ರೀ ಪುರುಷರಿಬ್ಬರೂ ಒಂದೇ ಪ್ರಮಾಣದಲ್ಲಿ ಈ ವ್ಯಾಧಿಯಿಂದ ನರಳುತ್ತಾರೆ; ಆದರೆ ಯುವಕರು ಮತ್ತು ನಡುವಯಸ್ಸಿನವರಲ್ಲೇ ಕರುಳು ಕೆರಳಿಕೆ ಅತಿ ಹೆಚ್ಚಾಗಿ ಪ್ರಕಟವಾಗುವಂತೆದೆ. ಕೆಲವು ಕುಟುಂಬದವರಲ್ಲಿ ಈ ವ್ಯಾಧಿಯ ಲಕ್ಷಣಗಳು ವಂಶ ಪಾರಂಪರ್ಯವಾಗಿರುವುದು ಕಂಡು ಬಂದಿದೆ. ಎಡಪಾರ್ಶ್ವದ ಕಿಬ್ಬೊಟ್ಟೆಯಲ್ಲೇ ಕರುಳು ಕೆರುಳು ಕೆರುಳಿಕೆಯ ಬಹುಪಾಲು ಲಕ್ಷಣಗಳು