ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರುಳು ಕೆರಳಿಕೆ ೧೫೯ ಸೀಮಿತವಾಗಿರುತ್ತವೆ. ಮ೦ದಗತಿಯ ಚಳುಕಿನಿಂದ ಹಿಡಿದು ತೀವ್ರ ಸ್ವರೂಪದ ಸೆಡೆತದಂಥ ನೋವು ಆಗಾಗ್ಗೆ - ಬಿಟ್ಟು ಬರುತ್ತದೆ. ಈ ಬೇನೆ ಹೊಟ್ಟೆಯ ಕುಳಿ ಪ್ರದೇಶ ಹಾಗೂ ಬಲಕಿಬೊಟ್ಟೆಯವರೆವಿಗೂ ಪ್ರಸರಿಸಿ ಜೀರ್ಣಕೆ ಹುಣ್ಣು ಮತ್ತು ಅಪ್ಪೆಂಡಿಸೈಟಿಸ್ ಲಕ್ಷಣಗಳ್ಳನ್ನು ಅಣಕಿಸುವಂತಿರಬಹುದು . ಕರುಳು ಕೆರಳಿಕೆಯ ಲಕ್ಷಣವಿರುವ ಅನೇಕರ ಬಾಲಕಿಬ್ಬೊಟ್ಟೆಯಲ್ಲಿ ಅಪ್ಪೆಂಡಿಸೆಕ್ಟಮಿಯ ಕಲೆ ಇರುವುದು ಅಪರೂಪವೇನಲ್ಲ ! ಕೆಲವರಲ್ಲಿ ಶುರುವಿಗೆ ಮಲವಿಸರ್ಜನೆಯ ಸಮಯ ಮತ್ತು ರೀತಿ-ನೀತಿಗಳಲ್ಲಿ ಬದಲಾವಣೆಗಳಾಗುತ್ತವೆ . ಒಂದೊಂದು ಸಾರಿ ದಿನದಲ್ಲಿ ನಾಲ್ಕಾರು ಸಲ ಬೇಧಿಯಾದರೆ , ಮುಂದಿನ ೩-೪ ದಿನ ಮಲಬದ್ಧತೆ ಅವರನ್ನು ಬಾಧಿಸುತ್ತದೆ . ಈ ಪ್ರಕರಣಗಳು ಒಂದಾದ ಮೇಲೊಂದರಂತೆ ಮರುಕಳಿಸುತ್ತಿರುತ್ತವೆ . ನಡುವಿನ ಅಂತರದಲ್ಲಿ ಮಲವಿಸರ್ಜನೆ ಎಂದಿನ ಸಹಜ ರೀತಿಯಲ್ಲಿ ಜರುಗುವುದೂ ಅಪರೂಪವೇನಲ್ಲ ! ಮಲದಲ್ಲಿ ಲೋಳೆಯ ಅಂಶ ಹೆಚ್ಚಾಗಿದ್ದು ಆಮಶಂಕೆಯಾಗಿರಬಹುದೆಂಬ ಸಂಶಯ ಉಂಟಾಗುತ್ತದೆ . ಹೀಗೆ ಪರಸ್ಪರ ವಿರುದ್ಧ ಹಾಗು ಮಿಶ್ರ ಲಕ್ಷಣವಳಿಗಳಿರುವ ಕರುಳು-ಕೆರಳಿಕೆಯ ರೋಗಿಗಲ್ಲನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು . ಕರುಳು ಸೆಡೆತದ ಲಕ್ಷಣದವರು :(spastic colon type ) : ಹೊಟ್ಟೆಯುಬ್ಬರ, ಉದರ ಬೀನೆ , ಈ ಗುಂಪಿನ ಪ್ರಮುಖ ದೂರು . ಬೀನೆ ಸಾಮಾನ್ಯವಾಗಿ ಎಡ ಕಿಬ್ಬೊಟ್ಟೆಗೆ ಸೀಮಿತವಾಗಿರುತ್ತದೆ . ಮಲ ಅಥವಾ ವಾಯು ಕಳೆತದ ನಂತರ ಬೇನೆ ಮಾಯವಾಗುತ್ತದೆ . ಹೊಟ್ಟೆಯ ಒಳಗಡೆ ಗೂಡು-ಗೂಡು ಶಬ್ದವಾಗಿರುತ್ತದೆ . ಮಲದಲ್ಲಿ ಲೋಳೆ ಹೆಚ್ಚಾಗಿರುತ್ತದೆ . ಪೂರ್ತಿ ಮಲ ಒಂದೇ ಸಾರಿ ವಿಸರ್ಕಾನೆಯಾಗದೆ ಪದೇ ಪದೇ ಕಕ್ಕಸಿಗೆ ಹೋಗಬೇಕೆನಿಸುತ್ತದೆ . ಇವರ ತೊಂದರೆ ಕರುಳಿನಲ್ಲೇ ಏರಬಹುದಾದರೂ ಅವರು ನೀಡುವ ಗೊಂದಲಮಯ ಹೇಳಿಕೆಗಳಿಂದ ವ್ಯಾಧಿ ಕೇಂದ್ರೀಕೃತವಾದ ಆವಯವನ್ನು ನಿರ್ಧರಿಸುವುದು ಕೆಲ ಸಾರಿ ಕಷ್ಟವಾಗುತ್ತದೆ . ( ಚಿತ್ರ ೨೩ ) ಬಹುದಿನಗಳ ನೋವಿನಲ್ಲಾದ ಭೇದಿ : ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಾಲೆ ಮಲವಿಸರ್ಜನೆಯೆ ಅವಸರ , ಅತ್ಯಂತ ತ್ವರಿತಗತಿಯಲ್ಲಿ ಮಲವಿಸರ್ಜನೆ ಮಾಡುವಂತಾಗುವುದು , ಆಹಾರ ಸೀವಿಡಿದಾಗಲೆಲ್ಲಾ ಕಕ್ಕಸಿಗೆ ಹೋಗುವಂತಾಗುವುದು , ಇವರಲ್ಲಿ ಪ್ರಕಟವಾಗುವ ಪ್ರಮುಖ ಲಕ್ಷಣಗಳು . ರೋಗಾಣು ಮೂಲದ ಅತಿಸಾರ , ಆಮಶಂಕೆ ವ್ರಣಾಧಾರಿತ