ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊಳೆ ರೋಗ ೧೭೩

ಮತ್ತೆ ಬಳಕೆಗೆ ಬಂದು ಜನಪ್ರಿಯವಾಗುತ್ತಿದೆ. ಮೊಳೆಗಳನ್ನು ಗುದನಾಳದ ಒಳಗಡೆಯಿಂದ ಬಿಗಿದು ಕಟ್ಟಿ ಕತ್ತರಿಸುವ ಬದಲು, ಮೊಳೆಗಳ ಹಿಂಭಾಗವನ್ನು ಕತ್ತರಿಯಿಂದ ಬೇರ್ಪಡಿಸಿಕೊಂಡು, ಬುಡವನ್ನು ಬಿಗಿದು ಕಟ್ಟಿ ಕತ್ತರಿಸಲಾಗುತ್ತದೆ ಹೊದಿಕೆಯಾಗಿದ್ದ ಲೋಳ್ಪರೆಯ ಬಹುಭಾಗ ಹಾಗೇ ಉಳಿದುಕೊಳ್ಳುತ್ತದೆ ; ಅವುಗಳ ಅಂಚನ್ನು ಸೇರಿಸಿ ಹೊಲಿಗೆ ಹಾಕುವುದರಿಂದ ಗುದನಾಳದ ಒಳಗಡೆ ಗಾಯವೇ ಇಲ್ಲದಂತಾಗುತ್ತದೆ. ಇದರಿಂದ ಪಾರಂಪರ್ಯಿಕ ಹೆಮೊರಾಯಿಡೆಕ್ಟಮಿಯಲ್ಲುಂಟಾಗುತ್ತಿದ್ದ ನೋವು ಬಹಳಷ್ಟು ಕಡಿಮೆಯಾಗುತ್ತದೆ. ಗುದನಾಳದಲ್ಲಿ ತೆರೆದ ಗಾಯವಿರುವುದಿಲ್ಲ ವಾದುದರಿಂದ ಮಲ ವಿಸರ್ಜನೆಯ ಸಮಯದಲ್ಲಿ ಅಷ್ಟೇನೂ ಬಾಧೆ ಕೂಡ ಇರುವುದಿಲ್ಲ. ಚಿಕಿತ್ಸೆ ಜರುಗುದ ೨-೩ ದಿನಗಳಲ್ಲೇ ರೋಗಿಯನ್ನು ಮನೆಗೆ ಕಳುಹಿಸಲು ಕೂಡ ಸಾಧ್ಯವಾಗುತ್ತಿದೆ.

    ರೋಗಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ನಂತರವೂ, ಸರಾಗವಾದ 

ಮಲ ವಿಸರ್ಜನೆಯ ಸಲುವಾಗಿ ಕೆಲ ಕಾಲ ಸೌಮ್ಯ ರೀತಿಯ ವಿರೇಚಕ ಮದ್ದುಗಳನ್ನು ಬಳಸಬೇಕಾಗಬಹುದು. ಕಟಿಮಜ್ಜನ ಮುಂದುವರಿಸುತ್ತಿರ ಬೇಕಾಗುತ್ತದೆ. ಖಾರ ಮಸಾಲೆಯುಕ್ತ ಆಹಾರ ವಸ್ತುಗಳನ್ನು ಮಿತಿಗೊಳಿಸಬೇಕು. ಬೈಸಿಕಲ್, ಮೊಪೆಡ್, ಮೊಟಾರ್ ಸೈಕಲ್ ನಂತಹ ಆಸನದ ಪ್ರದೇಶದಲ್ಲಿ ನೇರ ಒತ್ತಡ ಉಂಟುಮಾಡುವ ವಾಹನಗಳ ಸವಾರಿಯನ್ನು ಕೆಲವು ತಿಂಗಳುಗಳು ಮಾಡಬಾರದು. ಆಸ್ಪತ್ರೆಯಿಂದ ಹಿಂದಿರುಗಿದ ಎರಡು ವಾರಗಳಲ್ಲಿ ವ್ಯಕ್ತಿ ತನ್ನ ಹಿಂದಿನ ಕೆಲಸ ಕಾರ್ಯಗಳಲ್ಲಿ ತೊಡಗಲು ಸಾಧ್ಯಾವಾಗಬಹುದು.

    ಬಿಗಿಸುತ್ತಿನ ಸಡಲಿಸಿಕೆ : () ಮಲದ್ವಾರದ ಬಿಗಿಸುತ್ತುಗಳ 

ಬಿಗಿಯಾದ ಹಿಡಿತ ಮಲಬದ್ಧತೆ ಮತ್ತು ತಿಣುಕುವಿಕೆಯ ಕಾರಣವೆನ್ನುವ ಆಧಾರದ ಮೇಲೆ ಅವನ್ನು ಬಲಾತ್ಕಾರವಾಗಿ ಸಡಲಿಸುವ ವಿಧಾನವೊಂದು ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬರುತ್ತಿದೆ. ರೋಗಿಗೆ ಅರಿವಳಿಕೆಯನ್ನುಂಟು ಮಾಡಿ ರಬ್ಬರ್ ಗಮಸುಗಳನ್ನು ಧರಿಸಿದ ಎರಡು ಕೈಗಳ ಬೆರಳುಗಳನ್ನು ಗುದನಾಳದೊಳಗೆ ತೂರಿಸಿ ಬಿಗಿಸುತ್ತುಗಳ ಮಟ್ಟದಲ್ಲಿ ಅವುಗಳನ್ನು ಅಗಲಿಸುವ ಪ್ರಯತ್ನ ಮಾಡುವರು. ಈ ಚಿಕಿತ್ಸೆಯ ನಂತರ ಕೆಲವರಲ್ಲಿ ಒಳ್ಳೆಯ ಪಲಿತಾಂಶಗಳು ಉಂಟಾದ ಬಗೆಗೆ ವರದಿಗಳಿವೆ.

                           * * * *